ದೇಶದಾದ್ಯಂತ “ತಿರಂಗ ರ್ಯಾಲಿ”

0
26


ಸಿದ್ದಾಪುರ : ದೇಶದ ಸೈನಿಕರು ಹಿಮಪಾತದಿಂದಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗ ಇಡೀ ದೇಶವೇ ಅವರು ಬದುಕುಳಿಯಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿತು. ಈ ಸಂದರ್ಭದಲ್ಲಿ ಅಫ್ಜಲ್ ಗುರುವಿನ ಪರವಾದ ಘೋಷಣೆ ದೇಶವಿರೋಧಿ ಚಟುವಟಿಕೆಯಲ್ಲದೇ ಮತ್ತೇನು? ಈ ದೇಶದ ಅನ್ನ ಉಂಡು ದ್ರೋಹಬಗೆಯಲಾಗುತ್ತಿದೆ. ಉನ್ನತ ವಿ.ವಿ.ಯ ತತ್ವದ ಹೆಸರಿನಲ್ಲಿ ದೇಶ ವಿರೋಧಿ ಕಾರ್ಯನಡೆಸಲಾಗುತ್ತಿದೆ. ಇಂತಹ ದೇಶವಿರೋಧಿ ಚಟುವಟಿಕೆ ಸಹನೀಯವಲ್ಲವೆಂದು ದೇಶದಾದ್ಯಂತ “ತಿರಂಗ ರ್ಯಾಲಿ” ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸ್ಥಳಿಯ ಘಟಕದ ನಗರ ಸಹ ಕಾರ್ಯದರ್ಶಿ ಸುಭಾಸ ಹೆಗಡೆ ಹೇಳಿದ್ದಾರೆ.

ಅವರು ಎಬಿವಿಪಿ ವತಿಯಿಂದ ಗುರುವಾರ ಇಲ್ಲಿಯ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಸಂಘಟಿಸಿದ್ದ “ತಿರಂಗ ರ್ಯಾಲಿ”ಯ ನೇತೃತ್ವ ವಹಿಸಿ ಮಾತನಾಡುತ್ತಿದ್ದರು.
ಭಾರತ ದೇಶದಲ್ಲಿ ವಾಸಿಸುವವರೆಲ್ಲರಿಗೂ ದೇಶ ಮೊದಲು ಎಂಬ ಭಾವನೆಯಿರಬೇಕು. ದೇಶ ಪ್ರೇಮದ ಕೂಗು ಮೊಳಗಬೇಕೇ ವಿನ: ದೇಶ ವಿರೋಧದ ಧ್ವನಿ ಎತ್ತಬಾರದು ಎಂದ ಅವರು ಎಬಿವಿಪಿ ಇಂತಹ ದೇಶದ್ರೋಹವನ್ನು ಬಲವಾಗಿ ಖಂಡಿಸುತ್ತದೆ ಎಂದರು.
ಸಂಘಟನೆಯ ನಗರ ಕಾರ್ಯದರ್ಶಿ ದಿವಾಕರ ನಾಯ್ಕ, ಸಂಘಟನೆಯ ಯಶವಂತ ನಾಯ್ಕ, ಶಿವರಾಮ ಭಟ್, ವಿನಯಕುಮಾರ ಗೌಡ, ರಾಜೇಶ ಹೆಗಡೆ, ಪ್ರತಿಮಾ ನಾಯ್ಕ, ಸ್ವಾತಿ ನಾಯ್ಕ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಿಪಿಐ ಜಯರಾಮ ಗೌಡ, ಪಿಎಸ್‍ಐ ಶಿವಕುಮಾರ ಬಿ. ಪೋಲಿಸ್ ಬಂದೋಬಸ್ತ ಏರ್ಪಡಿಸಿದ್ದರು.

loading...

LEAVE A REPLY

Please enter your comment!
Please enter your name here