ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅವಶ್ಯ: ಕಾಂಬಳೆ

0
16

 

ಕನ್ನಡಮ್ಮ ಸುದ್ದಿ-ಜೋಯಿಡಾ: ತಾಲೂಕಿನಲ್ಲಿ ಸಹ್ಯಾದ್ರಿ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ತಾಲೂಕಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಅವರಿಗೆ ತಾಲೂಕಾ ಆಡಳಿತದ ಪರವಾಗಿ ತುಂಬು ಹೃದಯದ ಧನ್ಯವಾದ ಅರ್ಪಿಸುವುದಾಗಿ ಜೋಯಿಡಾ ತಾಲೂಕಾ ದಂಡಾಧಿಕಾರಗಳಾದ ಸಂಜಯ ಕಾಂಬಳೆ ಹೇಳಿದರು.
ನೆಹರೂ ಯುವ ಕೇಂದ್ರ ಕಾರವಾರ, ಸಹ್ಯಾದ್ರಿ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ ಜೋಯಿಡಾ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ನೆರೆ ಹೊರೆ ಯುವ ಸಂಸತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅತೀ ಮಹತ್ವವಾದದ್ದು, ಯುವಕರು ದೇಶದ ಅತಿ ದೊಡ್ಡ ಆಸ್ತಿ, ಯುವ ಸಂಪನ್ಮೂಲದ ಸದ್ಬಳಕೆಯಾದಲ್ಲಿ ದೇಶದ ಅಭಿವೃದ್ದಿ ಇನ್ನೂ ವೇಗವಾಗುತ್ತದೆ ಎಂದರು. ಸಹ್ಯಾದ್ರಿ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ ಈ ಒಂದು ನೆರೆ ಹೊರೆ ಯುವ ಸಂಸತ್ತು ಕಾರ್ಯಕ್ರಮವನ್ನು ಹಮ್ಮಿಕೊಂಡು ಇದರ ಮೂಲಕ ಕೇಂದ್ರ ಹಾಗೂ ರಾಜ್ಯ ಪುರಸ್ಕøತ ಯೋಜನೆಗಳು, ಬ್ಯಾಂಕಿಂಗ ಸೇವೆಗಳ ಇನ್ನೂ ಅನೇಕ ವಿಷಯಗಳ ಕುರಿತು ಯುವಕರಿಗೆ ಅರಿವನ್ನು ಮೂಡಿಸುವ ಕಾರ್ಯಕ್ರಮ ಹಮ್ಮಿ ಕೊಂಡಿರುವುದು ಒಳ್ಳೆಯ ವಿಚಾರ ಎಂದರು.

ಜೋಯಿಡಾ ಗ್ರಾಮ ಪಂಚಾಯತನ ಪಂ.ಅಭಿವೃದ್ಧಿ ಅಧಿಕಾರಿ ನಬೀಲಾಲ ಇನಾಮದಾರ ಸ್ವಚ್ಛ ಭಾರತ ಮಿಷನ್ ಕುರಿತು ಮಾತನಾಡುತ್ತಾ ಯುವಕರು ಸಂಘ ಸಂಸ್ಥೆಗಳು ನಮ್ಮೊಂದಿಗೆ ಕೈ ಜೋಡಿಸಿದಾಗ ಮಾತ್ರ ಯಾವುದೇ ಒಂದು ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದರು.
ತಾಲೂಕಾ ಎನ್.ಆರ್.ಎಲ್ ಎಮ್ ಸೋಯೋಜಕರಾದ ಮರಿಸ್ವಾಮಿ ವಿವಿಧ ಕೌಶಲ್ಯಾಭಿವೃದ್ಧಿ ತರಭೆತಿಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರೆ ಸಿಂಡಿಕೇಡ್ ಬ್ಯಾಂಕ ಜೋಯಿಡಾದ ಅಧಿಕಾರಿ ವಿಜಯರವರು ಮುದ್ರಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಅಟಲ ಪೆನಷನ್ ಬ್ಯಾಂಕುಗಳಲ್ಲಿ ಲಭ್ಯವಿರುವ ಯೊಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುದರು. ಈ ಸಂದರ್ಭದಲ್ಲಿ ಜೋಯಿಡಾ ಗ್ರಾ.ಪಂ ಉಪಾದ್ಯಕ್ಷ ಶ್ಯಾಮ ಪೊಕಳೆ, ಬಿ.ಜಿ.ವಿ.ಎಸ್ ಪ್ರಾಂಶುಪಾಲರಾದ ಮಂಜುನಾಥ ಶೆಟ್ಟಿ, ಉಪನ್ಯಾಸಕರಾದ ಪಿ.ಜಿ. ನಾಯಕ, ಸಹ್ಯಾದ್ರಿ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘದ ಅಧ್ಯಕ್ಷ ಸಚಿನ ತಳೇಕರ, ನೆಹರು ಯುವ ಕೇಂದ್ರದ ಸ್ವಯಂ ಸೇವಕಿ ಸೋನಿಯಾ ಗೋಡಕೆ ಮುಂತಾದವರು ಉಪಸ್ಥಿತರಿದ್ದರು.

loading...