ದೇಶದ ಎಲ್ಲಾ ವ್ಯಕ್ತಿಗಳಿಗೂ ನ್ಯಾಯ ಸಿಗಬೇಕು:ಮೂಲಿಮನಿ

0
42

9kdl-01ಕುಂದಗೋಳ,9: ದೇಶದ ಯಾವುದೇ ಭಾಗದಲ್ಲಿ ವಾಸಿಸುವ ಹಾಗೂ ಸಮಾಜದ ಕಟ್ಟಕಡೆಯ ಸ್ಥಾನದಲ್ಲಿರುವ ವ್ಯಕ್ತಿಗೂ ಕಾನೂನು ನ್ಯಾಯ ಸಿಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ರೂಪಿತಗೊಂಡಿರುವ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧೀಕಾರದ ಉಪಯೋಗವನ್ನು ಜನತೆ ಪಡೆಯಬೇಕು ಎಂದು ಸ್ಥಳಿಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಜಿ.ಎ.ಮೂಲಿಮನಿ ಹೇಳಿದರು.
ತಾಲೂಕ ಪಂಚಾಯತಿ ಸಭಾ ಭವನದಲ್ಲಿ ಸೋಮವಾರ ತಾಲೂಕ ವಕೀಲರ ಸಂಘ, ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ತಾಲೂಕ ಕಾನೂನು ನೆರವು ಸೇವಾ ಸಮಿತಿ ಏರ್ಪಡಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಅಂಗವಾಗಿ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1987 ರಲ್ಲಿಯೇ ರೂಪಿತವಾದ ಕಾನೂನು ಸೇವಾ ಪ್ರಾಧೀಕಾರದ ಅಂಶಗಳು ಜನರ ಮನ ತಲುಪಲು ಸಾಕಷ್ಟು ವರ್ಷಗಳೇ ಬೇಕಾದವು. ಆದಾಗ್ಯೂ ಈ ಕಾನೂನು ನೆರವಿನ ಸದುಪಯೋಗ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ಜನತೆಗೆ ಅತ್ಯಂತ ಉಪಯುಕ್ತವಾದ ಈ ಸೇವಾ ನೆರವು ಅದೂ ಕೂಡ ಉಚಿತವಾಗಿ ಸಿಗುತ್ತದೆ ಎಂಬುದು ಈ ವರೆಗೂ ಅರಿವಿಗೆ ಬಾರದೇ ಹೋಗಿರುವುದು ವಿಷಾಧನೀಯವಾಗಿದೆ. ಇಂದಿನಿಂದ ಒಟ್ಟು 1 ತಿಂಗಳ ಕಾಲ ನಡೆಯುವ ರಾಷ್ಟ್ರೀಯ ಕಾನೂನು ಸೇವೆಗಳ ಅರಿವು ದಿನಾಚರಣೆಯಲ್ಲಿ ಕಾನೂನು ನೆರವಿನಿಂದ ವಂಚಿತರಾದವರು ಸದುಪಯೋಗ ಪಡೆದುಕೊಳ್ಳಬೇಕು ಕರೆ ನೀಡಿದರು.
ಅದ್ಯಕ್ಷತೆ ವಹಿಸಿದ್ದ ಜೆ.ಎಂ.ಎಪ್.ಸಿ ನ್ಯಾಯಾಲಯದ ನ್ಯಾಯಾಧೀಶ ವಿಘ್ನೇಶಕುಮಾರ ಮಾತನಾಡಿ, ಈ ಹಿಂದೆ ಲೀಗಲ್ ಪ್ರೊಪೇಶನ್, ನೊಬೆಲ್ ಪ್ರೋಪೇಶನ್ ಎಂಬ ಹೆಸರು ಗಳಿಸಿತ್ತು ಎಂದು ನೆನಪಿಸಿಕೊಂಡ ಅವರು, ಅತ್ಯಂತ ಮಹತ್ವದ ಕಾನೂನು ಸೇವೆಗಳ ನೆರವಿನಲ್ಲಿ ಬದ್ದತೆ ಇತ್ತು. 87 ರಲ್ಲಿ ರಚಿತವಾದ ಕಾನೂನು ಸೇವಾ ಪ್ರಾಧೀಕಾರ 1995 ರಲ್ಲಿ ಅನುಷ್ಠಾನಗೊಂಡಿತು.ನಿಜವಾದ ಅರ್ಥದಲ್ಲಿ ಸರ್ವರಿಗೂ ನ್ಯಾಯ ಸಿಗಬೇಕು. ಹೊಣೆಗಾರಿಕೆ ನಿಭಾಯಿಸಲು ಇಚ್ಚಾಸಕ್ತಿಯನ್ನೂ ಸಹ ತೋರಬೇಕು ಎಂದರು.
ಉಪನ್ಯಾಸ ನೀಡಿದ ಹಿರಿಯ ನ್ಯಾಯವಾದಿ ಎಸ್.ಎಸ್.ಪಾಟೀಲ ಸಿಗುವ ನ್ಯಾಯ ಸಮ್ಮತ ಬೇಡಿಕೆಯನ್ನು ಹಕ್ಕಿನಿಂದ ಪಡೆಯಬೇಕು. ಸಮಾಜದಲ್ಲಿ ದುರ್ಭಲರಾದವರು, ಅಂಗವಿಕಲರು, ವಿಧವೆಯರು ಈ ಕಾನೂನು ಸೇವೆಗಳ ಸಹಾಯ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಈ ನೆರವನ್ನು ಪಡೆಯುವವರು ಈ ಹಿಂದೆ 25 ಸಾವೀರ ವರಮಾನಕ್ಕೆ ಸೀಮಿತರಾಗಿದ್ದರು. ಇದೀಗ ಅದು 1 ಲಕ್ಷದ ವರೆಗೆ ಏರಿಕೆಯಾಗಿದೆ.ಪ್ರತಿ ಗ್ರಾಮಗಳಲ್ಲೂ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದರ ಉಪಯೋಗ ಪಡೆದು ನ್ಯಾಯ, ಧರ್ಮಕ್ಕಿರುವ ಮಾನ್ಯತೆಯನ್ನು ಪ್ರಚುರ ಪಡಿಸಬೇಕು ಎಂದು ಹೇಳಿದರು.
ತಾಲೂಕ ವಕೀಲರ ಸಂಘದ ಅದ್ಯಕ್ಷ ಜಿ.ವೈ.ದೇವರಮನಿ, ಸಮಾಜ ಕಲ್ಯಾಣ ಇಲಾಖೆಯ ಡಿ.ಗೋಪಾಲಕೃಷ್ಣ, ಶಿರಸ್ತೇದಾರ ವೀಣಾ ಕುಲಕರ್ಣಿ, ಬಿರಾದಾರ ವೇದಿಕೆ ಮೇಲಿದ್ದರು. ನ್ಯಾಯವಾದಿಗಳಾದ ರಮೇಶ ಕಮತದ, ಅಶೋಕ ಕ್ಯಾರಕಟ್ಟಿ, ಎಸ್.ಎನ್.ಯರಗುಪ್ಪಿ,ಜಿ.ಬಿ.ಸೊರಟೂರ, ಪ್ರಕಾಶ ಸೊರಟೂರ, ಅನೀಲ ಕುಲಕರ್ಣಿ, ಮಂಜುನಾಥ ಬೂದಿಹಾಳ, ಅಶೋಕ ಬ್ಯಾಲ್ಯಾಳ, ವಿಶ್ವನಾಥ ಕುಬಿಹಾಳ ಹಾಗೂ ವಿವಿದ ಇಲಾಖೇಗಳ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿದ್ದರು. ಎಂ.ಎಂ.ಗೂಡವಾಲಾ ನಿರೂಪಿಸಿದರು. ಆರ್.ಎನ್.ಕಮತದ ವಂದಿಸಿದರು.

loading...

LEAVE A REPLY

Please enter your comment!
Please enter your name here