ದೇಶದ ಪ್ರಗತಿಯಲ್ಲಿ ಸಂಸ್ಥೆಗಳ ಪಾತ್ರ ಪ್ರಮುಖ

0
3

ಬೆಳಗಾವಿ : ದೇಶದ ಪ್ರಗತಿಯಲ್ಲಿ ಸರಕಾರಿ ಇಲಾಖೆಗಳು ,ಖಾಸಗಿ ಸಂಸ್ಥೆಗಳು ಮತ್ತು ಸ್ವ-ಉದ್ಯೊÃಗ ಚಟುವಟಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ ಎಂದು ಕೆವಿಆಯ್‌ಸಿ ಹುಬ್ಬಳ್ಳಿ ನಿರ್ದೇಶಕ ಎಸ್.ಎಸ್ ಟಾಂಬೇ ಹೇಳಿದರು.

ಸಿಂಡ್ ಗ್ರಾಮೀಣ ಸ್ವ-ಉದ್ಯೊÃಗ ತರಬೇತಿ ಸಂಸ್ಥೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಪ್ರಧಾನ ಮಂತ್ರಿಗಳ ಉದ್ಯೊÃಗ ಸೃಷ್ಟಿ ಯೋಜನೆಯಡಿ ಆಯ್ಕೆಯಾದ ಪಲಾನುಭವಿಗಳಿಗೆ ಹಮ್ಮಿಕೊಂಡಿದ್ದ ಉದ್ಯಮ ಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಆಗಮಿಸಿ ಮಾತನಾಡಿದರು.
ಒಬ್ಬ ವ್ಯಕ್ತಿ ಬಂಡವಾಳವನ್ನು ಹೂಡಿಕೆ ಮಾಡಲು ಸಾಮರ್ಥ್ಯವಿಲ್ಲದಿರುವ ಅರ್ಹ ವ್ಯಕ್ತಿ ತನ್ನ ಯೋಜನೆಯಿಂದ ಹಿಂದೆ ಸರಿಯಬಾರದೆಂಬ ಸದುದ್ದೆÃಶದಿಂದ ಪ್ರಧಾನ ಮಂತ್ರಿಗಳ ಉದ್ಯೊÃಗ ಸೃಷ್ಟಿ ಯೋಜನೆ ರೂಪಿಸಲಾಗಿದೆ ಎಂದರು.
ಕಾರ್ಯಕ್ರಮದ ಅತಿಥಿ ಸ್ಥಾನವನ್ನು ಅಲಂಕರಿಸಿದಂತಹ ಎಪ್.ಎಸ್ ಹೋಂಗಲ್ ಮಾತನಾಡಿ, ಇವತ್ತಿನ ದಿನದಲ್ಲಿ ನಿರುದ್ಯೊÃಗ ನಿವಾರಣೆಗೆ ಸ್ವ-ಉದ್ಯೊÃಗವೆ ಮದ್ದು ಅದಕ್ಕಾಗಿ ಸರ್ಕಾರ ಹಲವಾರು ಯೋಜನೆಗಳ ಮೂಲಕ ಸಾಲ-ಸೌಲಭ್ಯ ಒದಗಿಸುತ್ತಿದೆ. ಅವುಗಳ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ದೊಡ್ಡಮಟ್ಟದ ಉದ್ಯಮಿಗಳಾಗಿ ಉತ್ತಮ ಜೀವನ ನಡೆಸಿರಿ, ತರಬೇತಿಯಲ್ಲಿ ಪಡೆದ ಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ನೀವೂ ಇನ್ನೂಬ್ಬರಿಗೆ ಉದ್ಯೊÃಗವನ್ನು ಕೊಡುವಷ್ಟರ ಮಟ್ಟಿಗೆ ಬೆಳೆಯಬೇಕು ಎಂದು ಕಿವಿ ಮಾತು ಹೇಳಿದರು.
ಕೊನೆಯದಾಗಿ ಶಿಬಿರದಲ್ಲಿ ಪಾಲ್ಗೊಂಡ ಶಿಭಿರಾರ್ಥಿಗಳು ತಮ್ಮ ತರಬೇತಿ ದಿನಗಳ ಅನುಭವ ಮತ್ತು ಅನಿಸಿಕೆಗಳನ್ನು ಅತೀ ಉತ್ಸಾಹದಿಂದ ಹಂಚಿಕೊಂಡರು ನಂತರ ಮುಖ್ಯ ಅಧ್ಯಕ್ಷರಿಂದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಪಿಎಂಇಜಿಪಿ ಯೋಜನೆಯ ಶಿಬಿರಾರ್ಥಿಯಾದ ಬಸವರಾಜ ಹುಡೇದ ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕ ಚಂದ್ರಕಾಂತ ಹಿರೇಮಠ ನಿರೂಪಿಸಿ, ವಂದಿಸಿದರು.

loading...