ದೇಶದ ಭವಿಷ್ಯ ರೂಪಿಸುವ ಶಕ್ತಿ ವಿದ್ಯಾರ್ಥಿಗಳ ಮೇಲಿದೆ 

0
42

ಗುಳೇದಗುಡ್ಡ: ದೇಶದ ಭವಿಷ್ಯ ರೂಪಿಸುವ ಶಕ್ತಿ ವಿದ್ಯಾರ್ಥಿಗಳ ಮೇಲಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಹೊಂದಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಬೇಕು. ವಿದ್ಯಾಪೋಷಕ ಸಂಸ್ಥೆ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಹೊಂದಲು ಆರ್ಥಿಕ ಸಹಾಯ ನೀಡುತ್ತಿರುವುದು ಶ್ಲಾಘನೀಯ. ಸಂಸ್ಥೆಯಿಂದ ಪಡೆದ ಸಹಾಯಧನವನ್ನು ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಡಾ. ದೇವರಾಜ ಪಾಟೀಲ ಹೇಳಿದರು. ಅವರು ವಿದ್ಯಾಪೋಷಕ ಸಂಸ್ಥೆ ಹಮ್ಮಿಕೊಂಡಿದ್ದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಹಣಕಾಸಿ ಸಹಾಯಧನ ವಿತರಣಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸತತ ಪರಿಶ್ರಮ ಪಟ್ಟರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು. ನ್ಯಾಯವಾದಿ ಎಸ್‌.ಆರ್‌. ಬರಹಾನಪೂರ ಮಾತನಾಡಿ, ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡುವ ದೃಷ್ಟಿಯಿಂದ ವಿದ್ಯಾಪೋಷಕ ಸಂಸ್ಥೆಯ ಒಳ್ಳೆಯ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.    ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ, ಎ.ಎನ್‌. ನಾಯಕ ಮಾತನಾಡಿದರು. ಬಾದಾಮಿ, ಹುನಗುಂದ ಮತ್ತು ಬೀಳಗಿ ತಾಲೂಕಿನ ಪಿಯುಸಿ ದ್ವಿತೀಯ ಮತ್ತು ಪದವಿ ಓದುತ್ತಿರುವ ಸುಮಾರು 48 ವಿದ್ಯಾರ್ಥಿಗಳಿಗೆ 3.50 ಲಕ್ಷ ರೂಪಾಯಿ ಆರ್ಥಿಕ ಸಹಾಯದ ಚೆಕ್‌ಗಳನ್ನು  ಕಾರ್ಯಕ್ರಮದಲ್ಲಿ ವಿತರಿಸಲಾಯಿತು.   ಹೊಳೆಹುಚ್ಚೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಹೊಳಬಸು ಶೆಟ್ಟರ, ಎಂ.ಎಸ್‌. ಹಿರೇಮಠ, ವಾಸುದೇವ ಡಾಣಕಶಿರೂರ, ಶಕೀಲ ಕಾಂಟ್ರಾಕ್ಟರ್‌, ಪ್ರೀಯಾ ಕುಲಕರ್ಣಿ ಈರಣ್ಣ ಅಲದಿ, ಕೂಡ್ಲೆಪ್ಪ ರಂಜಣಗಿ, ಸಚಿನ ಕಳ್ಳಿಗುಡ್ಡ ಮತ್ತಿತರರು ಇದ್ದರು.

loading...