ದೈವಾಂಶಸಂಭೂತರು ಅಂತರ್ಮುಖಿಯಾಗಿರುತ್ತಾರೆ: ಓಸ್ವಾಲ್

0
59

ಗೋಕಾಕ 2;- ದೈವಶಕ್ತಿ ಯಾವ ವ್ಯಕ್ತಿಯಲ್ಲಿ ಯಾವ ರೂಪದಲ್ಲಿ ಇರುತ್ತದೆ ಎಂಬುದು ಮೇಲ್ನೌಟಕ್ಕೆ ಸಾಮಾನ್ಯ ದೃಷ್ಠಿಗೆ ಕಾಣದಿದ್ದರೂ ಸಹ ಸಾಮಾನ್ಯರಂತೆ ಕಾಣುವ ಕೆಲವು ವ್ಯಕ್ತಿಗಳಲ್ಲಿ ಅಂತರ ಮುಖಿಯಾಗಿ ವಿಶಿಷ್ಠ ಶಕ್ತಿ ಕೇಂದ್ರಿಕೃತವಾಗಿರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ  ಅಶೋಕ ಓಸ್ವಾಲ್ ಅಭಿಪ್ರಾಯಪಟ್ಟರು.

ನಗರದ ಲಿಜ್ಞಾನ ಮಂದಿರಳಿ ಆಧ್ಯಾತ್ಮ ಕೇಂದ್ರದಲ್ಲಿ ಶನಿವಾರದಂದು ಗೋಕಾಕದ ಲಡ್ಡು ಮುತ್ಯಾ ಎಂದು ಜನಾನುರಾಗಿ ಯಾಗಿರುವ ಶಿವಾನಂದ ನಿಂಗಯ್ಯ ಪೂಜಾರಿ (ಚಿಕ್ಕುಸ್ವಾಮಿ) ಇವರ 50 ನೇಯ ಹುಟ್ಟುಹಬ್ಬ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡುತ್ತಿದ್ದರು.

ಲಡ್ಡು-ಮುತ್ಯಾನಂತಹ ವ್ಯಕ್ತಿಗಳ ನಡೆ-ನುಡಿ ಸಾಮಾನ್ಯರಂತೆ ಇದ್ದರೂ ಸಹ ಕಣ್ಣಿಗೆ ಕಾಣದ ಸುಪ್ತ ಶಕ್ತಿ ಅವರಲ್ಲಿ ಅಡಗಿರುತ್ತದೆ. ಅಂತಹ ವ್ಯಕ್ತಿ ಶಿವಾನಂದ (ಚಿಕ್ಕು ಸ್ವಾಮಿಗಳು) ಕೂಡ ಆಗಿದ್ದು, ಅಂತೆಯೇ ಅವರು ಈ ಭಾಗದ ಜನರಲ್ಲಿ ಭಕ್ತಿಯ ಆದರತೆಯನ್ನು ಪಡೆದಿದ್ದಾರೆ ಎಂದು ಅಶೋಕ ಓಸ್ವಾಲ್ ಹೇಳಿದರು.

ಅವರು ಚಿಕ್ಕುಸ್ವಾಮಿಗಳು ನಗರದ ಯಾವುದೇ ಮನೆಯಲ್ಲಿ ಹೋದರು ಅದು ತಮ್ಮ ಪುಣ್ಯದ ಫಲವೆಂದು ಭಾವಿಸುವ ಜನರ ಭಾವನೆಯೇ ಅವರಲ್ಲಿರುವ ದಿವ್ಯ ಶಕ್ತಿಗೆ ಸಾಕ್ಷಿ ಎಂದು ವಿಶ್ಲೇಷಿಸಿದರು.

ಸಾನಿಧ್ಯ ವಹಿಸಿದ ಸೋಮವಾರ ಪೇಠನ ಮುಪ್ಪಯ್ಯನ ಮಠದ ನೂತನ ಪೀಠಾಧಿಪತಿ ರಾಚೋಟಿ ದೇವರು ಆಶೀರ್ವಚನ ನೀಡುತ್ತ ಶ್ರೀ ಶಿವಾನಂದ ಸ್ವಾಮಿಗಳು ಅನೇಕ ಸಂದರ್ಭಗಳಲ್ಲಿ ತಮ್ಮ ಮೂಖಬಾಷೆಯಲ್ಲಿ ಹೇಳುವ ನುಡಿಗಳು ವಿಶಿಷ್ಠ ಅರ್ಥವನ್ನೇ ಹೊಂದಿದ್ದು, ಅದನ್ನು ಅರ್ಥೈಸುವ ಪರಿಜ್ಞಾನ ನಮ್ಮಲಿರಬೇಕೆಂದು ನುಡಿದರು.

ಸಮಾರಂಭದಲ್ಲಿ ಚಿಕ್ಕುಸ್ವಾಮಿಗಳ ಕುರಿತು ಸೋಮಶೇಖರ ಮಗದುಮ್ಮ, ಈಶ್ವರಚಂದ್ರ ಬೆಟಗೇರಿ, ವಾಯ್.ಟಿ. ಪಾಟೀಲ, ಮಹಾದೇವ ಗುಡೇರ, ಶ್ರೀಮತಿ ಅನ್ನಪೂರ್ಣ ನಿರ್ವಾಣಿ, ಉತ್ತುರ ಗುರುಗಳು, ಬಾಳಯ್ಯ ಕಂಬಿ, ಮಹಮ್ಮದ ದೇಸಾಯಿ, ಬಿಜಲಿ, ಶ್ರೀಮತಿ ಜಕಾತಿ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ.ಸಂಜಯ ಹೊಸಮಠ, ಚವ್ಹಾಣ, ಸಾವಳಿಗೆಪ್ಪ ನಂದಗಾಂವಿ, ಬಸವರಾಜ ದುಳಾಯಿ, ವಿಜಯಶಾಸ್ತ್ತ್ರಿ ಹಿರೇಮಠ,ಪಕ್ರುಸಾಬ ಗೋಕಾಕ, ರಾಜುಗೌಡ ನಿರ್ವಾಣಿ, ಇಸ್ಮಾಯಿಲ್ ಅರಳಿಕಟ್ಟಿ, ಚನ್ನಬಸು ರುದ್ರಾಪೂರ, ಶಂಕರಯ್ಯ ಹೊಸಟ್ಟಿಮಠ, ಅನಿಲ ನಿರ್ವಾಣಿ, ಕಾಡಪ್ಪ ಪಾಟೀಲ, ಗಂಗಪ್ಪ ಅಂಗಡಿ, ಶ್ರೀಕಾಂತ್ ಮರಲಿಂಗನ್ನವರ, ಲಕ್ಷ್ಮಣ ನಾರಿ, ಲಕ್ಷ್ಮಣ ಕರಮೂಶಿ ಮುಂತಾದವರು ಪಾಲ್ಗೊಂಡಿದ್ದರು. ದುಂಡಯ್ಯ ಪೂಜಾರಿ ಕಾರ್ಯಕ್ರವನ್ನು ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here