ದೋಣಿಗಳ ತಪಾಸಣೆ

0
41

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕಾ ಉದ್ದೇಶಕ್ಕೆ ನಿಯಂತ್ರಿತ ದರದಲ್ಲಿ ಸೀಮೆ ಎಣ್ಣೆ ಪಡೆಯುತ್ತಿರುವ ಮೋಟಾರೀಕೃತ ಮೀನುಗಾರಿಕಾ ದೋಣಿಗಳನ್ನು ಫೆಬ್ರುವರಿ 27 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತಪಾಸಣೆ ಕೈಗೊಳ್ಳಲಾಗುವುದು.
ದೋಣಿಯ ಮಾಲೀಕರು ತಮ್ಮ ಮಾಲಿಕತ್ವದ ಮೋಟಾರಿಕೃತ ಮೀನುಗಾರಿಕಾ ದೋಣಿ ಮತ್ತು ದೋಣಿಯ ಎಂಜಿನ್‍ನ್ನು ತಪಾಸಣಾ ಕೇಂದ್ರದಲ್ಲಿ ಹಾಜರು ಪಡಿಸಲು ಸೂಚಿಸಿದೆ. ತಪಾಸಣೆಗೆ ಒಳಪಡಿಸದ, ಸುಸ್ಥಿತಿಯಲ್ಲಿಲ್ಲದ ದೋಣಿಗಳ ನೋಂದಣಿಯನ್ನು ಹಾಗೂ ನಿಯಂತ್ರಿತ ದರದ ಸೀಮೆ ಎಣ್ಣೆ ಅನುಮತಿಯನ್ನು ರದ್ದುಪಡಿಸಲಾಗುವುದು.
ತಪಾಸಣೆ ಕೈಗೊಳ್ಳುವ ಸ್ಥಳದ ವಿವರ ಈ ಕೆಳಗಿನಂತಿದೆ. ಕಾರವಾರ : ಮೀನುಗಾರಿಕೆ ಉಪನಿರ್ದೇಶಕರು ಕಾರವಾರ ಕಚೇರಿ ಎದುರುಗಡೆ ಬೀಚ್, ಮಾಜಾಳಿ ಬೀಚ್ (ಗೋಟ್ನಿಬಾಗ್), ಅಂಕೋಲಾ : ಹಾರವಾಡ, ಕುಮಟಾ ; ವನ್ನಳ್ಳಿ ಬೀಚ್, ತದಡಿ ಬಂದರು, ಧಾರೇಶ್ವರ ಬೀಚ್, ಹೊನ್ನಾವರ : ಟೊಂಕಾ ಕಾಸರಕೋಡ ( ಬಂದರು), ಮಂಕಿ (ಕೋಡಿ/ಬೀಚ್) , ಭಟ್ಕಳ : ಮುಂಡಳ್ಳಿ ಬೆಲೆ(ಬೀಚ) , ತೆಂಗಿನಗುಂಡಿ ಬಂದರು, ಮುರ್ಡೇಶ್ವರ ಬೀಚ್.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪನಿರ್ದೇಶಕರು, ಕಾರವಾರ ಹಾಗೂ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಕಾರವಾರ/ ಅಂಕೋಲಾ/ಕುಮಟಾ/ಹೊನ್ನಾವರ/ಭಟ್ಕಳ ಇವರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

loading...

LEAVE A REPLY

Please enter your comment!
Please enter your name here