ಧರಣಿಗೆ ಬಿಜೆಪಿ ಬೆಂಬಲ: ಶೀಲವಂತ

0
12

ಗುಳೇದಗುಡ್ಡ: ನಗರದ ಮೂಕೇಶ್ವರಿ ಕೊಳ್ಳದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಆಶ್ರಯ ಫಲಾನುಭವಿಗಳ ಮನೆಗಳು ನಾಶವಾಗಿದ್ದು, ಅಲ್ಲದೇ ಈ ನಿವೇಶನಗಳು ಕೆ.ಜಿ.ಪಿ.ಯು ಫಲಾನುಭವಿಗಳ ಹೆಸರಿನಲ್ಲಿ ಇಲ್ಲ. ಕೆಜಿಪಿಯಾಗದೇ ಮನೆಗಳು ಕಾನೂನಾತ್ಮಕವಾಗಿ ಫಲಾನುಭವಿಗಳ ಹೆಸರಿನಲ್ಲಿ ಆಗುವುದಿಲ್ಲ. ನಿಮ್ಮ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ಭಾರತೀಯ ಜನತಾ ಪಕ್ಷದಿಂದ ಬೆಂಬಲ ನೀಡುತ್ತೆÃವೆ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.
ಅವರು ಇಲ್ಲಿನ ಪುರಸಭೆ ಎದರು ಆಶ್ರಯ ಫಲಾನುಭವಿಗಳು ಹಮ್ಮಿಕೊಂಡಿರುವ ಎರಡನೇ ದಿನದ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ರವಿವಾರ ಭೇಟಿ ನೀಡಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಸರ್ಕಾರ ಕೂಡಲೇ ಅವರಿಗೆ ಸರಿಯಾದ ರೀತಿಯ ನಿವೇಶನ ವ್ಯವಸ್ಥೆ ಮಾಡಿಕೊಡಬೇಕು. ಸ್ಥಳೀಯ ಶಾಸಕ ಸಿದ್ದರಾಮಯ್ಯನವರೇ ಈ ಸಮಸ್ಯೆಯನ್ನು ಪರಿಹರಿಸಬೇಕು. ಶಾಸಕರು ಶನಿವಾರ ನಗರಕ್ಕೆ ಬಂದಾಗ ಇಲ್ಲಿಗೆ ಭೇಟಿ ನೀಡಿ ಸಮಸ್ಯೆ ಆಸಲಿದ್ದರೆ ಅರ್ಧ ಸಮಸ್ಯೆ ಪರಿಹಾರವಾಗುತ್ತಿತ್ತು ಎಂದರು.
ಜೆಡಿಎಸ್ ಮುಖಂಡ ಹನಮಂತ ಮಾವಿನಮರದ ಮಾತನಾಡಿ, ಶಾಸಕರು ನಗರಕ್ಕೆ ಬಂದಿದ್ದರು. ಆದರೆ ಈ ಸಮಸ್ಯೆ ಅವರ ಗಮನಕ್ಕೆ ಬಂದಿತ್ತೊÃ ಇಲ್ಲ ಗೊತ್ತಿಲ್ಲ. ನಿವೇಶನ ಕೊಟ್ಟ ಪುರಸಭೆಯವರು ಅಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕಾಗಿತ್ತು. ಅದು ಅವರ ಕರ್ತವ್ಯ. ಈಗ ಯಾವುದಾರೂ ಅನುದಾನದಲ್ಲಿ ಮನೆ ನಿರ್ಮಿಸಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ದೀಪಕ ನೇಮದಿ, ಸಂಪತಕುಮಾರ ರಾಠಿ, ಕಮಲಕಿಶಶೋರ ಮಾಲಪಾಣಿ, ಸಿದ್ದು ಅರಕಾಲಚಿಟ್ಟಿ. ಅನ್ವರಖಾನ ಪಠಾಣ, ಅಶೋಕ ಹೆಗಡೆ, ವಸಂತಸಾ ಧೋಂಗಡೆ, ಬಾಳು ನಿರಂಜನ, ಪುರಸಭೆ ಸದಸ್ಯ ಕಾಶೀನಾಥ ಕಲಾಲ, ಸಂಜಯ ಕಾರಕೂನ, ಗಂಗಾಧರ ಯಲಬುರ್ಗಿ, ಈರಣ್ಣ ಯಂಡಿಗೇರಿ, ನಿಂಗಪ್ಪ ಯಣ್ಣಿ, ಶ್ರಿÃಕಾಂತ ಹುನಗುಂದ ಹಾಗೂ ಧರಣಿ ನಿರತರು ಉಪಸ್ಥಿತರಿದ್ದರು.
ಮೊಸಳೆ ಕಣ್ಣಿರು: ನಗರದ ವಸತಿ ರಹಿತ ಬಡ ಜನರ ಬಗ್ಗೆ ಕಾಳಜಿ ವಹಿಸಿ ಮೊಸಳೆ ಕಣ್ಣಿÃರು ಸುರಿಸುತ್ತಿರುವ ಮುಖಂಡು ಇಪ್ಪತೈದು ವರ್ಷಗಳ ಕಾಲ ಎಲ್ಲಿದ್ದರು ಎಂದು ಕಾಂಗ್ರೆಸ್ ಮುಖಂಡ ಸಂಜಯ ಬರಗುಂಡಿ ಪ್ರಶ್ನಿಸಿದ್ದಾರೆ.
ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ, ನಗರದ ಆಶ್ರಯ ನಿವೇಶನ ಮರು ಹಂಚಿಕೆ ಮಾಡುವ ಬಗ್ಗೆ ಎರಡು ದಿನಗಳಿಂದ ಧರಣಿ ನಡೆಸುತ್ತಿರುವ ಅಮಾಯಕ ಜನರ ಮುಖಂಡತ್ವ ವಹಿಸಿರುವ ನಾಯಕರು, ಹಿಂದೆ ಪುರಸಭೆ ಆಡಳಿತದಲ್ಲಿ ಪ್ರಮುಖ ಸ್ಥಾನ ಹೊಂದಿ ಅಧಿಕಾರ ನಡೆಸುವಾಗ ಈ ಜನರ ಕಷ್ಟ ಕಾಣಿಸಲಿಲ್ಲವೇ ಎಂದಿದ್ದಾರೆ.
ನಗರದಲ್ಲಿ ವಸತಿ ರಹಿತ ಕುಟುಂಬಗಳ ಸರ್ವೇ ಕಾರ್ಯ ಪುರಸಭೆಯಿಂದ ಜಾರಿಯಿದ್ದು, ಈ ಪಟ್ಟಿಯಲ್ಲಿ ಈ ಮೂಕೇಶ್ವರಿ ಕೊಳ್ಳದ ೩೪೨ ಫಲಾನುಭವಿಗಳ ಸೇರ್ಪಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಜಮೀನು ಗುರುತಿಸಿ ನಿವೇಶನ ನೀಡುವ ಸಂದರ್ಭದಲ್ಲಿ ಈ ಕೊಳ್ಳದ ಆಶ್ರಯ ಫಲಾನುಭವಿಗಳಿಗೆ ಮೊದಲು ಆದ್ಯತೆ ನೀಡಲಾಗುವುದು ಎಂದು ಮುಖಂಡರಾದ ಹೊಳಬಸು ಶೆಟ್ಟರ, ನಾಗಪ್ಪ ಗೌಡರ, ರಾಜು ಜವಳಿ, ವೈ.ಆರ. ಹೆಬ್ಬಳ್ಳಿ. ಎ.ಎ. ತಾಂಡೂರ, ರಾಜು ತಾಪಡಿಯಾ, ಜುಗಲಕಿಶೋರ ಭಟ್ಟಡ ತಿಳಿಸಿದ್ದಾರೆ.

loading...