ಧರ್ಮಸ್ಥಳ, ಇಸ್ಕಾನ್ ನಲ್ಲಿ ಹೊಸ ವರ್ಷ ಆಚರಣೆ: ಮತಾಂತರಕ್ಕೆ ಪ್ರೇರಣೆ: ಬಹಿರಂಗ ಕ್ಷಮೆಗೆ ಮುತಾಲಿಕ ಆಗ್ರಹ

0
37

 

 

ಬೆಳಗಾವಿ

ಯುಗಾದಿ ಹಿಂದೂಗಳ ಹೊಸ ವರ್ಷ. ಆದರೆ ಧರ್ಮಸ್ಥಳದ, ಇಸ್ಕಾನ್ ಗಳಲ್ಲಿ ಹೊಸ ವರ್ಷ ಆಚರಣೆ ಮಾಡಿ ಹಿಂದೂಗಳ ಭಾವನೆಗೆ ಧಕ್ಕೆ‌ ತಂದಿರುವ ಡಾ. ವೀರೇಂದ್ರ ಹೆಗಡೆ, ಇಸ್ಕಾನ್ ದವರು ಇದನ್ನು ವಾಪಸ್ ಪಡೆದು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು.

ಶನಿವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಹೊಸ ವರ್ಷ ನಮ್ಮದಲ್ಲ. ಅವೈಜ್ಞಾನಿಕವಾದ ಜ.1 ಜಗಜಾಹಿರು. ಯುಗಾದಿಯನ್ನು ಹೊಸ ವರ್ಷ ಆಚರಣೆ ಮಾಡುತ್ತಿದ್ದೇವೆ. ಆದರೆ ಧರ್ಮಸ್ಥಳದವರು ಹೊಸ ವರ್ಷಕ್ಕೆ ಅಲಂಕಾರ ಮಾಡಿ ಆಚರಣೆ ಮಾಡುತ್ತಾರೆ ಅಂದರೆ ನೋವಿನ ಸಂಗತಿ. ಇಸ್ಕಾನ್ ದವರು ಸಹ ಹೊಸ ವರ್ಷ ಆಚರಣೆ ಮಾಡುತ್ತಿದ್ದಾರೆ. ಇದನ್ನು ವಾಪಾಸು ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಗೋವಾದಲ್ಲಿ ಸುಮಾರು 400ಕ್ಕೂ ಹೆಚ್ಚು ದೇವಸ್ಥಾನವನ್ನು ಕ್ರೈಸ್ತರು ಧ್ವಂಸಗೊಳಿಸಿದ್ದಾರೆ. ಅಂಥ ಕ್ರೈಸ್ತರು ಆಚರಿಸುವ ಹೊಸ ವರ್ಷವನ್ನು ಆಚರಣೆ ಮಾಡುವ ಧರ್ಮಸ್ಥಳದ ವೀರೇಂದ್ರ ಹೆಗಡೆ, ಇಸ್ಕಾನ್ ದವರು ಬಹಿರಂಗವಾಗಿ ಕ್ಷಮೆ ಕೇಳಿ ಮುಂದೆ ಆಚರಿಸದಂತೆ ನೋಡಿಕೊಳ್ಳಬೇಕು‌. ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ಸರಕಾರ ಗೋ ಹತ್ಯೆ ನಿಷೇಧ ಮಾಡಿರುವ ಕಾಯ್ದೆಯನ್ನು ಅಂಗೀಕಾರ ಮಾಡಿರುವುದು ಸ್ವಾಗತಾರ್ಹ. ಗೋ ರಕ್ಷಕರ ಮೇಲೆ ಕ್ರಮ ಜರುಗಿಸಬಾರದೆಂದು ಸಹ ತಿಳಿಸಿದ್ದಾರೆ. ಕಸಾಯಿ ಖಾನೆಗೆ ತೆಗೆದುಕೊಂಡು ಹೋಗುವ ಗೋವುಗಳನ್ನು ಕೊಡುವಂತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ವಾಹನದಲ್ಲಿ ಗೋ ಮಾಂಸ ಸಾಗಾಟ ಮಾಡುವಾಗ ಸಿಕ್ಕಲ್ಲಿ ನ್ಯಾಯಾಲಯದಲ್ಲಿಯೇ ದಂಡ ಭರಿಸಿ ತೆಗೆದುಕೊಂಡು ಹೋಗುವಂತೆ ತಿಳಿಸಿದೆ ಎಂದರು.

ವಯಸ್ಸಿನ ಹಿನ್ನೆಲೆಯಲ್ಲಿ ಗೋವನ್ನು ಮಾರಾಟ ಮಾಡಲು ಅವಕಾಶ ನೀಡಿದೆ. ಅದು ಆಗ ಬಾರದು. ಗೋವು ಗೋವೇ ಸಂಪೂರ್ಣ ಗೋ ಹತ್ಯೆ ನಿಷೇಧ ಮಾಡಬೇಕೆಂದು. ಚಕ್ ಪೋಸ್ಟ್ ನಲ್ಲಿ ಗೋ ವುಗಳನ್ನು ತಪಾಸಣೆ ಮಾಡಿ ಬಿಟ್ಟರೆ ಅಲ್ಲಿಯೇ ಗೋವುಗಳ ರಕ್ಷಣೆ ಮಾಡಬೇಕೆಂದು ಸರಕಾರಕ್ಕೆ ಸಲಹೆ ನೀಡಿದರು.

ಗೋ ರಕ್ಷಣೆ ಸಮಿತಿ ರಚನೆ ಮಾಡಿದರೆ ಅವಾಗ ಜಾಗೃತಿಯಾಗುತ್ತದೆ. ಸಂರಕ್ಷಣೆಯಾಗುತ್ತದೆ.

ಪಿಎಫ್ ಐ, ಪಿಎಫ್ ಐ ಸಂಘಟನೆಯನ್ನು ಕೇಂದ್ರ ಸರಕಾರ ಸಂಪೂರ್ಣ ಬ್ಯಾನ್ ಮಾಡಬೇಕು. ಕರ್ನಾಟಕದಲ್ಲಿ ಈಗಾಗಲೇ 26 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಇದರಲ್ಲಿ ಈ ಸಂಘಟನೆಯ ಪ್ರಮುಖರ ಕೈವಾಡ ಇರುವುದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಎಲ್ಲ ದಾಖಲೆ ಇದ್ದಾಗಲೂ ಸಹ ಇಂಥ ಸಂಘಟನೆ ಬ್ಯಾನ್ ಮಾಡಲು ಸರಕಾರ ಯಾಕೆ ಮೀನಮೇಷ ಎಣಿಸುತ್ತಿದೆ. ಕೂಡಲೇ ಸರಕಾರ ಇಂಥ ಸಂಘಟನೆ ಬ್ಯಾನ್ ಮಾಡಬೇಕು. ಇಲ್ಲದಿದ್ದರೆ ಶ್ರೀರಾಮ ಸೇನೆಯ ಬ್ಯಾನ್ ಪಿಎಫ್ ಐ, ಎಸ್ ಟಿಪಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.

ಗಂಗಾಧರ ಕುಲಕರ್ಣಿ, ವಿನಯ, ರಾಜು ಕಾನಪ್ಪನವರ, ಅನಂತಶೆಟ್ಟಿ, ಆನಂದ ಜಂಬಗಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...