ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಲ್ಲಿ ಉಳಿತಾಯದ ಪ್ರಜ್ಞೆ ಮೂಡಿದೆ : ನಾಯ್ಕ

0
44

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಲ್ಲಿ ಉಳಿತಾಯದ ಪ್ರಜ್ಞೆ ಮೂಡಿದೆ : ನಾಯ್ಕ

ಅಂಕೋಲಾ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಇಂದು ಸಮಾಜದಲ್ಲಿ ಮಹಿಳೆಯರು ಜಾಗೃತಿಗೊಂಡಿದ್ದು, ಜೊತೆಗೆ ಉಳಿತಾಯದ ಪ್ರಜ್ಞೆ ಮೂಡಿದೆ. ಇಡೀ ಕುಟುಂಬವನ್ನು ನಿರ್ವಹಿಸುವ ಹಂತಕ್ಕೆ ತಲುಪಲು ಸಂಘಗಳ ಪಾತ್ರ ಪ್ರಮುಖವಾದದ್ದು ಎಂದು ಉದ್ಯಮಿ ಶ್ರೀಧರ ಡಿ. ನಾಯ್ಕ ಅಭಿಪ್ರಾಯಪಟ್ಟರು.

ತಾಲೂಕಿನ ಬೇಲೆಕೇರಿಯ ಶ್ರೀ ದತ್ತಗುರು ಸಭಾಭವನದಲ್ಲಿ ಈಚೆಗೆ ನಡೆದ ಬೇಲೆಕೇರಿ ಕಾರ್ಯಕ್ಷೇತ್ರದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕಾದರೆ ಶಿಕ್ಷಣದ ಪಾತ್ರ ಮಹತ್ವದ್ದಾಗಿದ್ದು, ತಾಯಂದಿರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು ಎಂದರು.

ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಸುನಂದಾ ವಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗರತ್ನ ಹೆಗಡೆ, ಪ್ರಮುಖರಾದ ಸುರೇಶ ಗೋಳೆಕರ, ಬೇಲೆಕೇರಿ ಗ್ರಾ.ಪಂ. ಉಷಾ ಬಾನಾವಳಿಕರ, ದಿವ್ಯಾ ವಿ. ನಾಯ್ಕ ಮಾತನಾಡಿದರು.

ಉದ್ಯಮಿ ಗಣಪತಿ ಬಾನಾವಳಿಕರ, ಒಕ್ಕೂಟದ ನೂತನ ಅಧ್ಯಕ್ಷ ಉದಯ ನಾಯ್ಕ ಉಪಸ್ಥಿತರಿದ್ದರು. ಗೀತಾ ಸಂಗಡಿಗರು ಪ್ರಾರ್ಥಿಸಿದರು. ಸೇವಾ ಪ್ರತಿನಿಧಿ ವಿದ್ಯಾ ಸ್ವಾಗತಿಸಿದರು. ರೇಷ್ಮಾ ವರದಿ ವಾಚಿಸಿದರು. ವಲಯ ಮೇಲ್ವಿಚಾರಕ ಶಾಂತಾರಾಮ ನಾಯ್ಕ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here