ಧಾರವಾಡ ಲೋಕಸಭಾ ಕ್ಷೆÃತ್ರ: ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿಗೆ ಗೆಲುವು

0
4

ಕನ್ನಡಮ್ಮ ಸುದ್ದಿ- ಧಾರವಾಡ: ಲೋಕಸಭೆಯ ಸಾರ್ವತ್ರಿಕ ಚುನಾವಣೆ ಹಾಗೂ ಕುಂದಗೋಳ ವಿಧಾನಸಭಾ ಕ್ಷೆÃತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಕೃಷಿ ವಿಶ್ವವಿದ್ಯಾಲಯದಲ್ಲಿ ಜರುಗಿತು. ಬೆಳಿಗ್ಗೆ ೮ ಗಂಟೆಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಲ್ಹಾದ ಜೋಶಿ ಮುನ್ನಡೆ ಸಾಧಿಸುತ್ತಲೇ ಹೊರಟು ಕೊನೆಗೆ ಜಯದ ಮಾಲೆ ಧರಿಸುವಲ್ಲಿ ಯಶಸ್ವಿ ಹೊಂದಿದ್ದಾರೆ. ಧಾರವಾಡ ಲೋಕಸಭಾ ಕ್ಷೆÃತ್ರದಲ್ಲಿ ಒಟ್ಟು ೧೭೨೫೩೫೫ ಮತದಾರರಿದ್ದು, ಕಳೆದ ಎಪ್ರಿಲ್ ೨೩ ರಂದು ನಡೆದ ಮತದಾನದಲ್ಲಿ ೧೨೦೮೭೬೭ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ೭೦.೦೬ ಪ್ರತಿಶತ ಮತದಾನವಾಗಿತ್ತು.
ನವಲಗುಂದ ವಿಧಾನಸಭಾ ಕ್ಷೆÃತ್ರ- ಮುಖ್ಯ ಕಟ್ಟಡದ ಹಿಂದಿನ ಸಾಲಿನ ಮೊದಲ ಮಹಡಿಯಲ್ಲಿರುವ ಹಾಲ್ ನಂ.೧೧೫ ರಲ್ಲಿ ೧೭ ಸುತ್ತುಗಳಲ್ಲಿ ನಡೆಯಿತು. ಕುಂದಗೋಳ ವಿಧಾನಸಭಾ ಕ್ಷೆÃತ್ರ- ಮುಖ್ಯ ಕಟ್ಟಡದ ಹಿಂದಿನ ಸಾಲಿನ ನೆಲಮಹಡಿಯ ಹಾಲ್ ನಂ.೨೩ ರಲ್ಲಿ ೧೬ ಸುತ್ತುಗಳಲ್ಲಿ ನಡೆಯಿತು. ಧಾರವಾಡ ವಿಧಾನಸಭಾ ಕ್ಷೆÃತ್ರ- ಮುಖ್ಯ ಕಟ್ಟಡದ ಹಿಂದಿನ ಸಾಲಿನ ನೆಲಮಹಡಿಯ ಹಾಲ್ ನಂ.೨೬ ರಲ್ಲಿ ೧೭ ಸುತ್ತುಗಳಲ್ಲಿ ನಡೆಯಿತು. ಹುಬ್ಬಳ್ಳಿ ಧಾರವಾಡ(ಪೂರ್ವ) ಕ್ಷೆÃತ್ರ- ಮುಖ್ಯ ಕಟ್ಟಡದ ನೆಲಮಹಡಿಯಲ್ಲಿರುವ ಅಡಿಟೋರಿಯಂ ಹಾಲ್‌ನಲ್ಲಿ ೧೫ ಸುತ್ತುಗಳಲ್ಲಿ ಜರುಗಿತು. ಹುಬ್ಬಳ್ಳಿ ಧಾರವಾಡ(ಕೇಂದ್ರ) ಕ್ಷೆÃತ್ರ- ಮುಖ್ಯ ಕಟ್ಟಡದ ಹಿಂದಿನ ಸಾಲಿನ ಮೊದಲಮಹಡಿಯಲ್ಲಿರುವ ಹಾಲ್ ನಂ.೧೧೮ ರಲ್ಲಿ ೧೯ ಸುತ್ತುಗಳಲ್ಲಿ ನಡೆಯಿತು. ಹುಬ್ಬಳ್ಳಿ ಧಾರವಾಡ(ಪಶ್ಚಿಮ) ಕ್ಷೆÃತ್ರ- ಮುಖ್ಯ ಕಟ್ಟಡದ ಹಿಂದಿನ ಸಾಲಿನ ಮೊದಲಮಹಡಿಯಲ್ಲಿರುವ ಹಾಲ್‌ನಲ್ಲಿ ೧೯ ಸುತ್ತುಗಳಲ್ಲಿ ನಡೆಯಿತು.

ನಂ.೧೨೦, ಕಲಘಟಗಿ ವಿಧಾನಸಭಾ ಕ್ಷೆÃತ್ರ- ಮುಖ್ಯ ಕಟ್ಟಡದ ಮುಂಭಾಗದ ಮೊದಲ ಮಹಡಿಯ ಅಗ್ರೊÃಸಮಿತಿ ಹಾಲ್‌ನಲ್ಲಿ ೧೭ ಸುತ್ತುಗಳಲ್ಲಿ ನಡೆಯಿತು. ಅಗ್ರೊÃನೋಮಿ ಕಟ್ಟಡದ ಮೊದಲ ಮಹಡಿಯಲ್ಲಿ ಶಿಗ್ಗಾಂವ ವಿಧಾನಸಭಾ ಕ್ಷೆÃತ್ರದ ಮತಗಳ ಎಣಿಕೆಯು ೧೭ ಸುತ್ತುಗಳಲ್ಲಿ ನಡೆಯಿತು. ಅಂಚೆ ಹಾಗೂ ಸೇವಾ ಮತಪತ್ರಗಳ ಎಣಿಕೆ; ಅಗ್ರೊÃನೋಮಿ ಕಟ್ಟಡದ ಮೊದಲ ಮಹಡಿಯಲ್ಲಿರುವ ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಅಂಚೆ ಮತ ಪತ್ರಗಳ ಎಣಿಕೆಗೆ ೦೬ ಟೇಬಲ್‌ಗಳನ್ನು ಹಾಕಿತ್ತು. ವಿದ್ಯುನ್ಮಾನ ಚಾಲಿತ ಮತಪತ್ರಗಳ (ಇಟಿಪಿಬಿಎಸ್) ಎಣಿಕೆ ಕಾರ್ಯ ೦೭ ಟೇಬಲ್‌ಗಳಲ್ಲಿ ನಡೆಯಿತು.
ಕುಂದಗೋಳ ವಿಧಾನಸಭಾ ಕ್ಷೆÃತ್ರದ ಉಪಚುನಾವಣೆಯು ಮೇ ೧೯ ರಂದು ಜರುಗಿತ್ತು ಕ್ಷೆÃತ್ರದಲ್ಲಿ ೧೮೯೪೪೧ ಮತದಾರರಿದ್ದು, ಈ ಪೈಕಿ ೧೫೬೧೨೮ ಮತದಾರರು ಶೇ.೮೨.೪೨ ದಾಖಲೆಯ ಮತದಾನ ಮಾಡಿದ್ದರು. ಎಂಟು ಪ್ರತ್ಯೆÃಕ ಕೊಠಡಿಗಳಲ್ಲಿ ವಿಧಾನಸಭಾ ಕ್ಷೆÃತ್ರವಾರು ಮತಗಳ ಎಣಿಕೆ ಕಾರ್ಯ ಜರುಗಿತು. ಪ್ರತಿ ಕೊಠಡಿಯಲ್ಲಿ ೧೪ ಟೇಬಲ್‌ಗಳ ವ್ಯವಸ್ಥೆ ಮಾಡಿತ್ತು. ಕುಂದಗೋಳ ವಿಧಾನಸಭಾ ಕ್ಷೆÃತ್ರದ ಉಪಚುನಾವಣೆಯ ಮತಗಳ ಎಣಿಕೆಯು ೧೬ ಸುತ್ತುಗಳಲ್ಲಿ ಜರುಗಿತು.

ಆಯ್ದ ಐದು ವಿವಿಪ್ಯಾಟ್ ಯಂತ್ರಗಳಲ್ಲಿನ ಮತಗಳ ಎಣಿಕೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಈ ಬಾರಿ ಪ್ರತಿ ವಿಧಾನಸಭಾ ಕ್ಷೆÃತ್ರಗಳ ವ್ಯಾಪ್ತಿಯ ಆಯ್ದ ಐದು ವಿವಿಪ್ಯಾಟ್‌ಗಳಲ್ಲಿನ ಮತಗಳ ಎಣಿಕೆಯನ್ನು ಮಾಡಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್. ಮತ ಎಣಿಕಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಮೂರು ಹಂತಗಳ ಬಿ ಭದ್ರತೆ ಏರ್ಪಡಿಸಲಾಗಿತ್ತು. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಡಿಸಿಪಿ ನಾಗೇಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತ ಅವರ ನೇತೃತ್ವದಲ್ಲಿ ಏಳು ಜನ ಎಸಿಪಿ,ಇಬ್ಬರು ಡಿವೈಎಸ್‌ಪಿಗಳು, ೪೦ ಪೊಲೀಸ್ ಇನ್ಸ್ಪೆಕ್ಟರ್‌ಗಳು, ೪ ಕೆಎಸ್‌ಆರ್‌ಪಿ,ಬಿಎಸ್‌ಎಫ್ ಹಾಗೂ ಎಸ್‌ಎಸ್‌ಬಿ ಕಂಪೆನಿಗಳು, ೧೫ ಸಿಆರ್ ವಾಹನ, ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು ೧೦೫೦ ಜನರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು.
ಒಟ್ಟಾರೆಯಾಗಿ ಕುಂದಗೋಳ ಮತಕ್ಷೆÃತ್ರದ ಉಪಚುನಾವಣೆಯಲ್ಲಿ ಕಾಂಗ್ರೆÃಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರು ೭೭೬೪೦ ಮತಗಳನ್ನು ಪಡೆದು ಜಯಗಳಿಸಿದರು. ಎಸ್.ಐ ಚಿಕ್ಕನಗೌಡರ ೭೬೦೩೯ ಮತಗಳನ್ನು ಪಡೆದು ೧,೬೦೧ ಮತಗಳ ಅಂತರದಲ್ಲಿ ಸೋಲುಂಡಿದ್ದಾರೆ. ಲೋಕಸಭಾ ಕ್ಷೆÃತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ೪೭೯೭೬೩ಮತಗಳನ್ನು ಪಡೆದು ಸೋಲುಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ೬೮೪೮೩೭ಮತಗಳನ್ನು ಪಡೆದು ಗೆಲುವಿನ ನಗೆ ಬೀರಿ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗುವಲ್ಲಿ ಯಶಸ್ವಿ ಹೊಂದಿದ್ದಾರೆ. ಗೆಲುವಿನತ್ತ ಹೆಜ್ಜೆ ಹಾಕಿದ ಉಭಯ ಅಭ್ಯರ್ಥಿಗಳ ಪರ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿದರು.

loading...