ಧಾರ್ಮಿಕ ಕಾರ್ಯದಿಂದ ಮನಸ್ಸಿಗೆ ನೆಮ್ಮದಿ: ಬಸವಲಿಂಗ ಸ್ವಾಮೀಜಿ

0
7

ಧಾರ್ಮಿಕ ಕಾರ್ಯದಿಂದ ಮನಸ್ಸಿಗೆ ನೆಮ್ಮದಿ: ಬಸವಲಿಂಗ ಸ್ವಾಮೀಜಿ
ಬೈಲಹೊಂಗಲ: ಸಾಮಾಜಿಕ ಧಾರ್ಮಿಕ ಕಾರ್ಯಗಳನ್ನು ಭಕ್ತಿಯಿಂದ ಮಾಡಬೇಕು. ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆತು ಜೀವನದಲ್ಲಿ ಮುಕ್ತಿ ಹೊಂದಬಹುದು ಎಂದು ರುದ್ರಾಕ್ಷಿಮಠದ ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಇಂದಿರಾ ನಗರದಲ್ಲಿರುವ ಲಕ್ಷಿö್ಮÃ ವೆಂಕಟೇಶ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ಜರುಗಿದ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಾನವ ಜನ್ಮ ಪವಿತ್ರವಾಗಿದ್ದು ಎಲ್ಲರೂ ಒಂದಾಗಿ ಭಗವಂತನ ಸೇವೆ ಮಾಡಬೇಕು. ದೇವರಲ್ಲಿ ಭಕ್ತಿ ಹೊಂದಿ ನಿಷ್ಠೆಯಿಂದ ಕಾಯಕ ಮಾಡಿ ಜೀವನದಲ್ಲಿ ಮುಂದೆ ಬರಬೇಕೆಂದು ನುಡಿದರು.
ನೇತೃತ್ವ ವಹಿಸಿದ್ದ ದೊಡವಾಡದ ಪೂಜ್ಯ ಜಡಿಸಿದ್ದೆÃಶ್ವರ ಸ್ವಾಮಿಗಳು ಮಾತನಾಡಿ ಪ್ರತಿನಿತ್ಯ ದೇವರ ಸ್ಮರಣೆ ಪೂಜೆ ಮಾಡುವುದರಿಂದ ಕಾಯಕದಲ್ಲಿ ಯಶಸ್ಸು ಕಾಣಬಹುದು. ಅಲ್ಲದೇ ಜಾತ್ರೆ ಉತ್ಸವಗಳಲ್ಲಿ ಶರಣರ ಮಹಾತ್ಮರ ಚರಿತ್ರೆ ಕೇಳಿ ದಾನ ಧರ್ಮದಿಂದ ನಡೆದರೆ ಜೀವನದಲ್ಲಿ ಒಳ್ಳೆಯ ಫಲ ದೊರೆತು ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದರು. ಸಮ್ಮುಖ ವಹಿಸಿದ್ದ ವೇ.ಮೂ.ಡಾ.ಮಹಾಂತೇಶ ಶಾಸ್ತಿç ಮಾತನಾಡಿ ಜಾತ್ರೆ ಉತ್ಸವ ಮಾಡುವುದರಿಂದ ಹಾಗೂ ದೇವರ ಸ್ಮರಣೆ ಮಾಡುವುದರಿಂದ ಜೀವನದಲ್ಲಿ ಸುಖ ನೆಮ್ಮದಿ ಸಿಗುತ್ತದೆ ಎಂದರು.
ಪುರಸಭೆ ಸದಸ್ಯರಾದ ಬಸವರಾಜ ಜನ್ಮಟ್ಟಿ, ವಿಜಯ ಬೋಳನ್ನವರ, ಕಲ್ಲೊಳ್ಳಿ, ಕೋಟಬಾಗಿ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪೂಜ್ಯರನ್ನು ಪುರಸಭೆ ಸದಸ್ಯರನ್ನು ಸನ್ಮಾನಿಸಲಾಯಿತು. ಶಿಕ್ಷಕ ಚಂದ್ರಕಾಂತ ಕಾರಜೋಳ ಸ್ವಾಗತಿಸಿ, ನಿರೂಪಿಸಿದರು. ನಂತರ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು.

loading...