ಧಾರ್ಮಿಕ ಶಕ್ತಿ ಬಹು ದೊಡ್ಡದು : ಡಾ.ಚೆನ್ನಸಿದ್ದರಾಮ

0
6

ಧಾರ್ಮಿಕ ಶಕ್ತಿ ಬಹು ದೊಡ್ಡದು : ಡಾ.ಚೆನ್ನಸಿದ್ದರಾಮ
ಬೈಲಹೊಂಗಲ: ಬದುಕಿನಲ್ಲಿ ಆಧ್ಯಾತ್ಮ ಭಾವ ಅಳವಡಿಸಿಕೊಂಡು ಸನ್ಮಾರ್ಗ ಕಾಣಬೇಕೆಂದು ಆಂದ್ರ ಪ್ರದೇಶದ ಶ್ರಿÃಶೈಲಂನ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆರ್ಶೀವಚನ ನುಡಿದರು.
ಅವರು ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಶ್ರಿÃಶೈಲ ಮಲ್ಲಿಕಾರ್ಜುನ ಹಾಗೂ ಶ್ರಿÃ ಭ್ರಮರಾಂಭಾದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟಣೆ, ಮೂರ್ತಿ ಪ್ರತಿಷ್ಠಾಪನೆ, ಕುಂಬೋತ್ಸವ, ಲಕ್ಷದೀಪೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ,
ಮನುಷ್ಯ ಸ್ವಪ್ರಯತ್ನದಿಂದ ಬದುಕು ಕಂಡುಕೊಂಡು ಸಾಧನೆ ಮಾಡಿ ಇತರರಿಗೆ ಮಾದರಿಯಾಗಬೇಕು. ಮಠ-ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಸತ್ಕಾರ್ಯಗಳಲ್ಲಿ ಪಾಲ್ಗೊಂಡು ಪುಣೀತರಾಗಬೇಕೆಂದರು.
ಮಾಜಿ ಸಂಸದ ಎಸ್.ಬಿ.ಶಿದ್ನಾಳ ಮಂದಿರಗಳನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿನ ಜನ ಸದಾ ಭಕ್ತಿ ಭಾವೈಕ್ಯತೆ, ನೆಮ್ಮದಿಯಿಂದ ಬದುಕಬೇಕಾದರೆ ಮಂದಿರಗಳ ಸ್ಥಾಪನೆಯ ಕಾರ್ಯ ಅವಶ್ಯವಾಗಿದ್ದು ಯುವಕರು ದುಶ್ಚಟಗಳನ್ನು ತೊರೆದು ಪೂಜೆ, ಪ್ರಾರ್ಥನೆಯಂತಹ ಕಾರ್ಯಗಳಲ್ಲಿ ತೊಡಗಬೇಕೆಂದರು. ಕರಡಿಗುದ್ದಿ ಕಠಾಪುರಿಮಠದ ಪೂಜ್ಯ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ರಾಯಚೂರಿನ ವೀರಗೋಟದ ಅಡವಿಲಿಂಗ ಮಹಾರಾಜ, ಕಲಬುರ್ಗಿಯ ವೇದಮೂರ್ತಿ ಪಂಡಿತ ಮಲ್ಲಯ್ಯ ಶಾಸ್ತಿçÃ, ಪ್ರಭುದೇವರ ಬೆಟ್ಟದ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಬೈಲಹೊಂಗಲದ ಮೂರುಸಾವಿರಮಠದ ಪೂಜ್ಯ ಪ್ರಭುನೀಲಕಂಠ ಸ್ವಾಮೀಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಚನ್ನಮ್ಮನ ಕಿತ್ತೂರಿನ ಶಾಸಕ ಮಹಾಂತೇಶ ದೊಡಗೌಡರ, ಗಣ್ಯರಾದ ಶಂಕರೆಪ್ಪ ಶಿದ್ನಾಳ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಗ್ರಾ.ಪಂ. ಸದಸ್ಯ ಶಿವಪುತ್ರ ಜುಟ್ಟನವರ, ರಾಜು ಮಮದಾಪೂರ, ಚಂದ್ರು ರೊಟ್ಟಿ, ಶ್ರಿÃಶೈಲ ಬೆಣ್ಣಿ, ಶಿವಲಿಂಗಪ್ಪ ಶೆಟ್ಟರ, ಜಗದೀಶ ಶೆಟ್ಟರ, ಈರಣ್ಣ ಬೋಡನವರ, ಪುಟ್ಟು ಸಾಲಿಮಠ ಹಾಗೂ ಜಾತ್ರಾ ಮಹೋತ್ಸವ ಕಮೀಟಿಯ ಸದಸ್ಯರು ಹಾಗೂ ವಿವಿಧ ಸಂಘಟಣೆಗಳ ಸದಸ್ಯರು ಪಾಲ್ಗೊಂಡಿದ್ದರು. ಆನಂದ ವಾಲಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಚವಲಗಿ ನಿರೂಪಿಸಿದರು. ಶ್ರಿÃಶೈಲ ಬೆಣ್ಣಿ ವಂದಿಸಿದರು.
ಇದಕ್ಕೂ ಮುಂಚೆ ಬೆಳಿಗ್ಗೆ ವೇದಮೂರ್ತಿ ಮಲ್ಲಯ್ಯ ಸ್ವಾಮೀಜಿ ಜಡೆ ಸಂಗಡಿಗರಿಂದ ವೈಧಿಕ ಕಾರ್ಯಗಳು ಜರುಗಿದವು. ಶ್ರಿÃಶೈಲ ಮಲ್ಲಿಕಾರ್ಜುನ ಹಾಗೂ ಶ್ರಿÃ ಭ್ರಮರಾಂಭಾದೇವಿಯ ಮೂರ್ತಿಗಳಿಗೆ ವಿಶೇಷ ಪೂಜೆ, ಪ್ರಾರ್ಥನೆ, ಬಿಲ್ವಾರ್ಚಣೆ, ರುದ್ರ ಹೋಮ, ನವಗ್ರಹ ಪೂಜೆ, ಮಹಾ ರುದ್ರಾಭಿಷೇಕ, ಮೂರ್ತಿ ಪ್ರತಿಷ್ಠಾಪಣೆ, ಸಹಸ್ರ ಮಂತ್ರ ಪಠಣ, ಉಡಿ ತುಂಬುವ ಕಾರ್ಯ, ಅಭಿಷೇಕ ನಡೆದವು. ನಂತರ ಗ್ರಾಮದಲ್ಲಿ ಶ್ರಿÃಶೈಲಂನ ಡಾ.ಚೆನ್ನಸಿದ್ದರಾಮ ಸ್ವಾಮೀಜಿ ಅವರ ಸಾರೋಟ ಮೆರವಣಿಗೆ ಮತ್ತು ಮುತೈಧ್ಯೆಯರಿಂದ ಕುಂಭಮೇಳ ಸಕಲ ವಾಧ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಜರುಗಿದವು. ಇದೇ ಸಂದರ್ಭದಲ್ಲಿ ಗುಡಿಗಳಿಗೆ ಕಳಸಾರೋಹನ ಮಾಡಲಾಯಿತು. ಅನ್ನ ಪ್ರಸಾದ ಏರ್ಪಡಿಸಲಾಗಿತ್ತು. ವಿವಿಧ ಸಾಂಸ್ಕçತಿಕ ಕಾರ್ಯಕ್ರಮಗಳು ಜರುಗಿದವು.

loading...