ನಂದಿನಿ ಹಾಲು ವಿತರಣೆ

0
104

ಬಾಗಲಕೋಟೆ, 4-ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ನವನಗರ ಜಿಲ್ಲಾ ಆಸ್ಪತ್ರೆಯ ಮುಖ್ಯದ್ವಾರದ ಹತ್ತಿರ ಲಿವಿಶ್ವ ಹಾಲು ದಿನಳಿ ಆಚರಿಸಲಾಯಿತು. ಒಕ್ಕೂಟದ ನಿರ್ದೇಶಕ ಆರ್.ಎಸ್.ಪಾಟೀಲ, ಕೃಷ್ಣಪ್ಪ ಬಿಲಕೇರಿ, ಕುಮಾರಸ್ವಾಮಿ ಹಡಗಲಿಮಠ, ಮಹದೇವ ಮಾರಾಪೂರ, ಶ್ರೀಮತಿ ಸವಿತಾ ಲೆಂಕೆನ್ನವರ ಹಾಗೂ ಪ್ರಗತಿಪರ ರೈತರಾದ ಅಣ್ಣಪ್ಪ ಲೆಂಕೆನ್ನವರ, ರೋಗಿಗಳಿಗೆ ನಂದಿನಿ ಸುವಾಸಿತ ಹಾಲನ್ನು ವಿತರಿಸಿದರು. ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ತ್ರ ಚಿಕಿತ್ಸಕ ಡಾ. ಎ.ಎಂ. ನರಟ್ಟಿ ಹಾಗೂ  ಆಸ್ಪತ್ರೆಯ ಸಿಬ್ಬಂದಿ ಹಾಗೂ ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಪಿ.ವ್ಹಿ. ಪಾಟೀಲ, ಬಿ.ಕೆ. ಮಠ ಹಾಗೂ ಮಾರುಕಟ್ಟೆ ಅಧೀಕ್ಷಕ ಟಿ.ಎಚ್. ವಾಸುದೇವ ಹಾಗೂ ಒಕ್ಕೂಟದ ಸಿಬ್ಬಂದಿ ವರ್ಗದವರು ಹಾಗೂ ಹಾಲು ವಿತರಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here