ನಂದಿ ನಿವಾಸದಲ್ಲಿ ಗೋಷ್ಠ ಶಾಂತಿ ವಾಸ್ತು ಹವನ

0
61

ಕನ್ನಡಮ್ಮ ಸುದ್ದಿ-ಕುಮಟಾ: ಪಟ್ಟಣದ ಶ್ರೀಕುಂಭೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾದ ಮೃತ್ಯುಂಜಯ ಮಹಾ ನಂದಿ ನಿವಾಸಕ್ಕೆ ಗುರುವಾರ ನಂದಿಯ ಪ್ರವೇಶವನ್ನು ವಿವಿಧ ಧಾರ್ಮಿಕ ಸಂಪ್ರದಾಯದಂತೆ ವೈದಿಕರ ನೇತೃತ್ವದಲ್ಲಿ ನಂದಿ ನಿವಾಸದಲ್ಲಿ ಗೋಷ್ಠ ಶಾಂತಿ ವಾಸ್ತು ಹವನವನ್ನು ಪೂರ್ಣಗೊಳಿಸಿದ ವೈದಿಕರು ನಂದಿಗೆ ಪೂಜೆ ಸಲ್ಲಿಸಿದರು.
ಗೋ ಪರಿವಾರದ ಕುಮಟಾ ತಾಲೂಕು ಅಧ್ಯಕ್ಷ ಕಿಶನ ವಾಳ್ಕೆ ಅವರು ನಂದಿಗೆ ಪುಷ್ಪ ಮಾಲೆ ಸಮರ್ಪಸಿ, ಹಣ್ಣುಗಳನ್ನು ನೀಡಿದರು. ಅಲ್ಲದೆ ಪ್ರತಿ ವರ್ಷದ ಒಂದು ತಿಂಗಳು ನಂದಿಯ ಪಾಲನೆ, ಪೆÇೀಷಣೆಯ ಖರ್ಚುವೆಚ್ಚ ಭರಿಸುವ ಭರವಸೆ ನೀಡಿದರು.
ರಾಜ್ಯ ಗೋ ಪರಿವಾರದ ಉಪಾಧ್ಯಕ್ಷ ಮುರಳೀಧರ ಪ್ರಭು ಮಾತನಾಡಿ, ನಂದಿಯ ವಿಶೇಷತೆ ಮತ್ತು ಗೋ ರಕ್ಷಣೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಶ್ವೇಶ್ವರ ಭಟ್, ದತ್ತಾತ್ರೆಯ ಭಟ್, ಗೋ ಪರಿವಾರದ ಪ್ರಮುಖರಾದ ಸುರೇಶ ಹೆಗಡೆ, ವಿವಿಧ ಹಿಂದುಪರ ಸಂಘಟನೆಯ ಪ್ರಮುಖರಾದ ಸೂರಜ ನಾಯ್ಕ ಸೋನಿ, ಭಾಸ್ಕರ ನಾಯ್ಕ, ಗಣೇಶ ಭಟ್, ಕಮಲಾಕರ ನಾಯ್ಕ, ಸಂಪತಕುಮಾರ, ಪ್ರಶಾಂತ ನಾಯ್ಕ, ವಿಶ್ವನಾಥ ನಾಯ್ಕ, ಇತರರಿದ್ದರು.

loading...