ನಕಲಿ ಎಸಿಬಿ ಸೋಗಿನಲ್ಲಿ ಬಂದವರು ಈಗ ಅಂದರ್

0
179

ಬೈಲಹೊಂಗಲ
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಯಂದು ಸರ್ಕಾರಿ ನೌಕರರನ್ನು ವಂಚಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬೈಲಹೊಂಗಲ ಪೊಲೀಸರು ಬಂಧಿಸಿ, ವಂಚನೆಗೆ ಬಳಸುತ್ತಿದ್ದ ವಾಹನವನ್ನು  ವಶಪಡಿಸಿಕೊಂಡ ಘಟಣೆ ಸೋಮವಾರ ನಡೆದಿದೆ.
ಹಾಲಿ ವಣ್ಣೂರ, ದೇಶನೂರ ಗ್ರಾಮ ಮೂಲದ  ವಿಶಾಲ ಭಾಂವೆಪ್ಪ ಪಾಟೀಲ (42), ಬೆಂಗಳೂರಿನ ಕೊಡಗೆಹಳ್ಳಿ ಸಹಕಾರ ನಗರದ ಶ್ರೀನಿವಾಸ ತಂದೆ ಅಶ್ವಥ್ಥನಾರಾಯಣ (38)ಇವರನ್ನು ದಸ್ತಗೀರಮಾಡಿ ಬಂಧಿತರಿಂದ ಮೋಬೈಲ್ ಫೋನ್ ಮತ್ತು ಕಾರ ಅನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಕೃಷಿ ಇಲಾಖೆಯ ಹುಲಗಣ್ಣವರ ಇವರಿಗೆ ರೂ. 5 ಲಕ್ಷ ಹಣ ತೆಗೆದುಕೊಂಡು ನೇಸರಗಿ ಕ್ರಾಸ ಬಳಿ ಬನ್ನಿ ಎಂದು ತಿಳಿಸಿದ್ದರು. ಆತನು ನೇಸರಗಿ ಕ್ರಾಸ ಬಳಿ ತಲುಪಿದಾಗ ಪೊಲೀಸರು ತಮ್ಮ ಜಾನ್ಮೆಯಿಂದ ಆರೋಪಿಗನ್ನು ರವಿವಾರ ಬಂದಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಬೆಳಗಾವಿ, ಧಾರವಾಡ ಹಾಗೂ ಬೈಲಹೊಂಗಲ ಮುಂತಾದ ಕಡೆಗಳಲ್ಲಿ ಇಂತಹ ಕೃತ್ಯವನ್ನು ಎಸಗಿದ್ದ ಬಗ್ಗೆ ಬಾಯಿ ಬಿಟ್ಟು, ಕೆಲವರಿಗೆ ಹಣ ನೀಡಲು ಬೆಂಗಳೂರಿಗೆ ಬರುವಂತೆ ಸರ್ಕಾರಿ ಅಧಿಕಾರಿಗಳಿಗೆ ಹೇಳುತ್ತಿದ್ದರು ಎನ್ನಲಾಗಿದೆ.
ಘಟಣೆಯ ವಿವರ : ಪಟ್ಟಣದ ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿ  ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಆರ್.ಹುಲಗಣ್ಣವರ ಇವರಿಗೆ ಅನಾಮಧೇಯ ವ್ಯಕ್ತಿ ತಾವು ಎಸಿಬಿಯಲ್ಲಿ ಅಧಿಕಾರಿ ಇರುತ್ತೇನೆ ನಿಮ್ಮ ಮೇಲೆ ಎಸಿಬಿಯಲ್ಲಿ ಬೇನಾಮಿಯಾಗಿಆಸತಿ ಸಂಪಾದನೆ ಮಾಡಿದ್ದ ಕುರಿತು ನಮಗೆ ದೂರು ಬಂದಿದ್ದು ನಿವೃತ್ತಿ ಹಂತದಲ್ಲಿದ್ದ ನಿಮ್ಮ ಮೇಲೆ ಕೇಸ ದಾಖಲಾದರೆ ನಿವೃತ್ತಿ ವೇತನ, ಪೆನಷನ್ ಪಡೆಯಲು ತೊಂದರೆಯಾಗುತ್ತದೆ ಎಂದು ಕರೆ ಮಾಡಿ ನಾವು ಕೇಸ ಆಗದಂತೆ ನೋಡಿಕೊಳ್ಳುತ್ತೇವೆ ಅದಕ್ಕೆ ನೀವು ರೂ. 5 ಲಕ್ಷ ಹಣ ಕೊಟ್ಟು ಕೇಸ ಸೆಟಲಮೆಂಟ್ ಮಾಡಿಕೊಳ್ಳುವಂತೆ  ಹೇಳಿದ್ದಾನೆ. ಇದರಿಂದ ಅಧಿಕಾರಿ ಹುಲಗಣ್ಣವರ ಇವರು ಸೆ. 15 ರಂದು ಬೈಲಹೊಂಗಲ ಪೊಲೀಸ ಠಾಣೆ ಪ್ರಕರಣ ದಾಖಲಿಸುತ್ತಾರೆ. ಆರೋಪಿತರ ಪತ್ತೆ ಮಾಡಲು ಎಸ್‍ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ  ಅಮರನಾಥ ರೆಡ್ಡಿ, ಎಸಿಬಿ ಉತ್ತರ ವಲಯದ ಎಸ್ಪಿ, ಎಎಸ್ಪಿ ಪ್ರದೀಪ ಗುಂಟಿ, ಎಸಿಬಿ ಡಿಎಸ್ಪಿ, ಎಸಿಬಿ ಪೊಲೀಸ ಇನಸ್ಪೆಕ್ಟರ ಎಚ್.ಸುನೀಲಕುಮಾರ, ಎ. ಎಸ್. ಗೂದಿಗೊಪ್ಪ, ಸಿಪಿಐ  ಯು.ಎಚ್.ಸಾತೇನಹಳ್ಳಿ ಮಾರ್ಗದರ್ಶನದಲ್ಲಿ ಪಿಎಸ್‍ಆಯ್ ಈರಪ್ಪ ರಿತ್ತಿ. ಸಿಬ್ಬಂದಿಗಳಾದ ಎಂ.ಬಿ. ವಸ್ತ್ರದ, ಎಸ್.ಯು.ಮೆನಸಿನಕಾಯಿ, ಎಂಬಿ.ಕಂಬಾರ, ಎಚ್.ಬಿ.ಮಾಲದಿನ್ನಿ, ಯು.ಎಚ್.ಪೂಜಾರ, ಎಲ್.ಬಿ. ಹಮಾಣಿ, ಎಲ್.ಎಸ್.ಹೊಸಮನಿ, ಮಂಜುನಾಥ ಕರಿಗಾರ ಒಳಗೊಂಡ ತನಿಖಾ ತಂಡ ಪ್ರಕರಣ ಬೇಧಿಸಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

loading...