ನಕಲಿ ಬಂಗಾರ ಮಾರಾಟ ಜಾಲ ಬೇಧಿಸಿದ ಎಪಿಎಂಸಿ ಪೊಲೀಸರು

0
37

ಕನ್ನಡಮ್ಮ ಸುದ್ದಿ-ಬೆಳಗಾವಿ: ನಕಲಿ ಬಂಗಾರ ನೀಡಿ ಜನರಿಗೆ ವಂಚಿಸುತ್ತಿದ್ದ ಮೂವರು ಬಂಧಿಸಿದ ಎಪಿಎಂಸಿ ಪೊಲೀಸರು.

ಖಚಿತ ಮಾಹಿತಿ ಆಧಾರದ ಮೇಲೆ ನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ, ಡಿಸಿಪಿಗಳಾದ ಸೀಮಾ ಲಾಟ್ಕರ ಹಾಗೂ ಮಹಾನಿಂದ ನಂದಗಾವಿ ಮಾರ್ಗದರ್ಶನದಲ್ಲಿ ಎಪಿಎಂಸಿ ಸಿಪಿಐ ಜೆ.ಎಂ.ಕಾಲಿಮಿರ್ಚಿ ತಂಡದಿಂದ ಕಾರ್ಯಾಚರಣೆ ನಡೆಸಿ ಬೆಳಗಾವಿ ತಾಲೂಕಿನ ಸಾಂಬ್ರಾ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬೈಲಹೊಂಗಲ ಮೂಲದ ವಿಶಾಲ ಪಾಟೀಲ 38, ದಿಲಾವರಸಾಬ ಮುರಗಿ 33 ಹಾಗೂ ಶಿವಪ್ಪಾ ಉಪ್ಪಾರ 59 ಬಂಧಿತ ಆರೋಪಿಗಳು.
ಬಂಧಿತರಿಂದ 2 ಲಕ್ಷ ಮೌಲ್ಯದ ವಸ್ತುಗಳ ಜಪ್ತಿ. 1 ಲಕ್ಷ 25 ಸಾವಿರ ನಗದು, 250 ಗ್ರಾಂ ನಕಲಿ ಬಂಗಾರದ ತುಂಡುಗಳು ಹಾಗೂ 5 ಮೊಬೈಲ್, 3 ಸಿಮ್ ಕಾರ್ಡ್ , ಎರಡು ಬೈಕ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಸರೆ‌
ಆರೋಪಿಗಳು ಜಿಲ್ಲೆಯಾದ್ಯಂತ ಹತ್ತಾರು ಜನರಿಗೆ ವಂಚನೆ ಮಾಡಿದ್ದಾರೆ‌.
ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...