ನಗರದಲ್ಲಿ ಬಿರುಸಾಗಿದೆ ಅಕ್ರಮ ಕಟ್ಟಡ ನಿರ್ಮಾಣ ಕಾರ್ಯ

0
37


ದಾಂಡೇಲಿ : ಪೌರಕಾರ್ಮಿಕ ಹಿರಿಯ ಅಧಿಕಾರಿಗಳ ವಿರುದ್ದ ದಾಖಲಿಸಿದ ಅಟ್ರಾಸಿಟಿ ಪ್ರಕರಣಕ್ಕೆ ಹೆದರಿ ಅಧಿಕಾರಿಗಳು ಎಸ್ಕೇಪ್ ಆಗಿರುವ ವಿಚಾರ ನಗರದಲ್ಲಿ ಸುದ್ದಿಯಾಗುತ್ತಿದ್ದಂತೆಯೆ ನಗರದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ಕಾರ್ಯವು ಬಿರುಸುಗೊಂಡಿದೆ.

ನಗರದ ಜೆ.ಎನ್.ರಸ್ತೆಯಲ್ಲಿರುವ ಶ್ರೀಲಾಡ್ಜ್ ಕಟ್ಟಡದ ಮಾಲಕರು ನಗರ ಸಭೆಯ ಜಾಗವನ್ನು ಅತಿಕ್ರಮಿಸಿ ತನ್ನ ವಸತಿ ಗೃಹ ಕಟ್ಟಡವನ್ನು ವಿಸ್ತಾರಗೊಳಿಸುವ ಕಾರ್ಯ ನಡೆಯುತ್ತಲೇ ಇದ್ದರೂ ನಗರ ಸಭೆ ದಿವ್ಯಮೌನ ವಹಿಸಿತ್ತು. ಇದೀಗ ಅಧಿಕಾರಿಗಳು ಎಸ್ಕೇಪ್ ಆಗಿರುವುದನ್ನು ಮನಗಂಡ ಶ್ರೀಲಾಡ್ಜ್ ಮಾಲಕರು ಗುರುವಾರ ತಡರಾತ್ರಿ ತಮ್ಮ ಕಟ್ಟಡದ ಬಳಿಯಿರುವ ನಗರ ಸಭೆಯ ಜಾಗವನ್ನು ಜೆಸಿಬಿಯಿಂದ ತೆರವುಗೊಳಿಸಿ ಕಟ್ಟಡ ನಿರ್ಮಿಸಲು ಮುಂದಾಗಿರುವುದು ನಗರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸುದ್ದಿತಿಳಿದು ಸ್ಥಳಕ್ಕೆ ದೌಡಾಯಿಸಿ ನಗರ ಸಭೆಯ ಅಧ್ಯಕ್ಷೆ ಯಾಸ್ಮಿನ್ ಕಿತ್ತೂರು ಅವರು ಕೆಲಸವನ್ನು ಸ್ಥಗಿತಗೊಳಿಸಿ ತನ್ನ ಕ್ರಿಯಾಶೀಲತೆಯನ್ನು ಮೆರೆದಿದ್ದಾರೆ. ಆದರೆ ನಗರ ಸಭೆಯ ಹಿರಿಯ ಸದಸ್ಯರಾಗಿರುವ ಎನ್.ಜಿ.ಸಾಳೊಂಕೆಯವರು ಅತಿಕ್ರಮಣ ಕಟ್ಟಡ ನಿರ್ಮಾಣವನ್ನು ತಡೆಹಿಡಿಯಲು ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಬೇಕೆಂಬ ನಗರದನೇಕರ ಒತ್ತಾಸೆಯಿದ್ದರೂ ಅವರು ಸ್ವಯಂ ಪ್ರೇರಣೆಯಿಂದ ಈ ಕಾರ್ಯಕ್ಕೆ ಇಳಿಯುತ್ತಿಲ್ಲ ಎಂಬ ಅಪವಾದ ಅವರ ಮೇಲಿದೆ.

ಇಲ್ಲಿ ಅಕ್ರಮವಾಗಿ ಬೃಹತ್ ಕಟ್ಟಡ ನಿರ್ಮಾಣವಾಗಿದ್ದರೂ ಹೆಸ್ಕಾಂ ಸಹ ತನ್ನ ವಿದ್ಯುತ್ ಸೇವೆಯನ್ನು ಒದಗಿಸುವುದರ ಮೂಲಕ ಹಲವಾರು ಸಂಶಯಕ್ಕೆ ಕಾರಣವಾಗಿದೆ.

loading...

LEAVE A REPLY

Please enter your comment!
Please enter your name here