ನಟಿಸುವ ಜನಗಳ ಮಧ್ಯೆ ನಿರ್ದೇಶಕನಂತೆ ಬದುಕಬೇಕು : ಹುಕ್ಕೇರಿ ಶ್ರೀ

0
62

ಹುಕ್ಕೇರಿ
ಇಂದು ಎಲ್ಲಾ ರಂಗದಲ್ಲಿ ನಟಿಸುವ ಜನಗಳೇ ಹೆಚ್ಚಾಗಿದ್ದಾರೆ. ನಟನೆಯ ಮೂಲಕ ತಮ್ಮ ಸತ್ಯದ ಬದುಕನ್ನೇ ಮರೆತು ಹೋಗಿದ್ದಾರೆ. ಯಾರು ಏನೂ ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿ ಜನಗಳು ಇರುವುದಿಲ್ಲ. ಅವರಿಗೆ ನಾವು ಏನು ಹೇಳಿದರೂ ಅರ್ಥ ಕೂಡ ಆಗುವುದಿಲ್ಲ. ಅಂತ ಜನಗಳ ನಡುವೆ ನಾವೂ ನಟಿಸಿದರೆ ಎಷ್ಟು ಯೋಗ್ಯ. ಅದಕ್ಕಾಗಿ ನಟಿಸುವ ಜನಗಳ ಮಧ್ಯೆ ನಿರ್ದೇಶಕ ನಂತೆ ಬದುಕಬೇಕು ಎಂದೂ ಸ್ಥಳೀಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರಾವಣ ಮಾಸದಲ್ಲಿ ಹುಕ್ಕೇರಿ ಹಿರೇಮಠದಲ್ಲಿ ಜರುಗಿದ ಸಿದ್ಧಾಂತ ಶಿಖಾಮಣಿಯ ಪ್ರವಚನದ ಮಂಗಲೋತ್ಸವ ಹಾಗೂ ಸಾವಿರದ ಎಂಟು ಮಹಿಳೆಯರಿಗೆ ಶ್ರೀಚಕ್ರ ಉಡಿತುಂಬುವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

ನಾವೆಲ್ಲ ಇಂದು ನೆಮ್ಮದಿಯಿಂದ ಇರಲು ಕಾರಣ ನಮ್ಮ ಮಧ್ಯದಲ್ಲಿರುವ ಪೊಲೀಸರು ಮತ್ತು ವೀರಯೋಧರು. ಅವರಿಗೆ ಕೃತಜ್ಞತೆಯನ್ನು ಅರ್ಪಿಸುವುದು ಎಲ್ಲರ ಕರ್ತವ್ಯವಾಗಿದೆ. ದೇಹಾಭಿಮಾನ ದೇಶಾಭಿಮಾನ ದೊಡ್ಡದು ಎಂದು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಸಂತ್ರಸ್ಥರನ್ನು ರಕ್ಷಿಸಿದ್ದಾರೆ. ಅವರಿಗೆ ನಾವೆಲ್ಲ ಹೇಳಬೇಕು ನಮ್ಮದೊಂದು ಸಲಾಂ ಎಂದರು.

loading...