ನಟ ದುನಿಯಾ ವಿಜಿಗೆ ಮತ್ತೊಂದು ಸಂಕಷ್ಟ

0
10

ಬೆಂಗಳೂರು:ನಟ ದುನಿಯಾ ವಿಜಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪುತ್ರಿಯಿಂದಲೇ ದುನಿಯಾ ವಿಜಿ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪದಡಿ ಗಿರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೊದಲನೇ ಹೆಂಡತಿ ನಾಗರತ್ನ ಪುತ್ರಿ ಮೋನಿಕಾ, ನಿನ್ನೆ ಬಟ್ಟೆಗಳನ್ನು ತರಲು ಕೀರ್ತಿಗೌಡ ಮನೆಗೆ ಹೋಗಿದ್ದಳು. ಈ ವೇಳೆ ಕೀರ್ತಿಗೌಡ, ವಿಜಯ್ ಹಾಗೂ ಕೆಲವರು ತಮ್ಮ ಮೇಲೆ ಹಲ್ಲೆ ಮಾಡಿದ್ದು, ತಲೆ ಹಾಗೂ ಕೈಗೆ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಸೆಕ್ಷನ್ 147,148 ಸೇರಿದಂತೆ ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪದಡಿ ದೂರು ದಾಖಲಾಗಿದೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ದುನಿಯಾ ವಿಜಿ ಪತ್ನಿ ನಾಗರತ್ನ, ನಾನು ಸತ್ತರೂ ಪರವಾಗಿಲ್ಲ. ಮಕ್ಕಳಿಗೆ ಯಾಕೆ ತೊಂದರೆ ಕೊಡಬೇಕು. ನಿನ್ನೆ ತಡರಾತ್ರಿ ನನ್ನ ಮಗಳು ಕೀರ್ತಿ ಮನೆಗೆ ಬಟ್ಟೆ ತರಲು ಹೋಗಿದ್ದಾಳೆ. ಆದರೆ, ಏಕಾಏಕಿ ಆಕೆಯನ್ನ ಕಾಲಿನಿಂದ ಒದ್ದಿದ್ದಾರೆ. ಆಕೆ ಅಲ್ಲೇ ಕುಸಿದು ಬಿದ್ದಿದ್ದಾಳೆ. ಸದ್ಯ ಆಕೆಗೆ ಮೆಡಿಕಲ್ ಟೆಸ್ಟ್ ಮಾಡಿಸಿದ್ದೇವೆ. ಪ್ರಕರಣ ಸಂಬಂಧ ಗಿರಿ ನಗರ ಪೊಲೀಸ್ ಠಾಣೆಯಲ್ಲಿ ಕೀರ್ತಿ ಹಾಗೂ ಆಕೆಯ ತಂದೆ, ವಿಜಿ, ಚಾಲಕ ಮೊಹಮ್ಮದ್ ಸೇರಿ ಐವರ ಮೇಲೆ ದೂರು ನೀಡಿದ್ದೇವೆಂದು ತಿಳಿಸಿದರು.

loading...