ನಮಗೊಂದು ಅವಕಾಶ ನೀಡಿ

0
20

ಹುಬ್ಬಳ್ಳಿ,ಅ.21 : ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಹುಮತ ನೀಡಿ ರಾಜ್ಯದಲ್ಲಿ ಅಧಿಕಾರ ನೆಡೆಸಲು ಅವಕಾಶ ಮಾಡಿ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದರು.

ಬಿಡ್ನಾಳದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಬಹಿರಂಗ ಸಭೆಮತ್ತು ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಿಜೆಪಿ ಸರಕಾರದ ಆಡಳಿತವನ್ನು ನೋಡಿ ಜನರಿಗೆ ಸಾಕಾಗಿ ಹೀಗಿದೆ ಇನ್ನೂ ಕಾಂಗ್ರಸ್ ಸರಕಾರ ಜನರಿಗೆ ಯಾವುದನ್ನು ಮಾಡಿಲ್ಲ ಈ ರಾಜ್ಯದಲ್ಲಿ ಜೆಡಿಎಸ ಪಕ್ಷಕ್ಕೆ ತಮ್ಮ ಬೆಂಬಲವನ್ನು ಕೊಟ್ಟರೇ ಒಳ್ಳೆಯ ರೀತಿಯ ರಾಜ್ಯಭಾರ ಮಾಡಲು ಹಾಗೂ ರೈತರ ಅಭಿವೃದ್ದಿಗಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.

ನಂತರ ಮಾತನಾಡಿದ ಮಾಜಿ ಸಚಿವ ಬಸವರಾಜು ಹೊರಟ್ಟಿ ಜೆಡಿಎಸ್ ಪಕ್ಷಕ್ಕೆ ಜನರೆಲ್ಲರು ತಮ್ಮ ಸಹಕಾರ ನೀಡಿದರೆ ಈ ರಾಜ್ಯದಲ್ಲಿ ಸುಭಿಕ್ಷ ಆಡಳಿತ ನೆಡೆಸುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಚ್. ಖ.ಕುಮಾರಸ್ವಾಮಿಯವರು ಶ್ರೀನಿವಾಸ ಬಂಟನೂರ ಮತ್ತು ಯಲ್ಲಪ್ಪ ಹಿರೂರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಬರಮಾಡಿಕೊಂಡರು.

ಈ ಸಮಾರಂಭದಲ್ಲಿ ಮಾಜಿ ಸಚಿವರುಗಳಾದ ಆಲ್ಕೌಡ್ ಹನುಮಂತಪ್ಪ, ಪಿ.ಸಿ.ಸಿದ್ದನಗೌಡರ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ತಬರೇಜ್ ಸಮ್ಮಿ, ಮಾಜಿ ವಿಧಾನ ಪರಿಷತ್ ಸದಸ್ಯ ಇಸ್ಮಾಯಿಲ್ ಕಾಲೇಬುಡ್ಡಿ, ಅಲ್ಪ ಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಶಕೀಲ್ ನವಾಜ್, ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ, ಶಿವಾನಂದ ಕರಿಗಾರ, ಎನ್.ಎಚ್.ಕೋನರೆಡ್ಡಿ, ರತ್ನಾ ಕಲಾಲ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here