ನಮ್ಮ ಬದುಕಿಗೆ ವಿದ್ಯುತ್ ಅವಿಭಾಜ್ಯ ಅಂಗ: ಕೋಳಿ

0
13

ಗುಳೇದಗುಡ್ಡ: ಎಲ್‌ಇಡಿ ಲೈಟ್‌ಗಳು ಹಾಗೂ ಸೌರಶಕ್ತಿಯನ್ನು ಮನೆಯಲ್ಲಿ ಬಳಸಿ ವಿದ್ಯುತ್ ಉಳಿತಾಯ ಮಾಡಬೇಕು. ಇದರಿಂದ ಗ್ರಾಹಕರಿಗೆ ವಿದ್ಯುತ್ ಬಿಲ್‌ನ ಹೊರೆ ಬಹಳಷ್ಟು ಕಡಿಮೆಯಾಗುತ್ತದೆ, ಹೆಸ್ಕಾಂಗೂ ವಿದ್ಯುತ್ ಪೂರೈಕೆಯ ಹೊರೆ ಕಡಿಮೆಯಾಗುತ್ತದೆ. ವಿದ್ಯುತ್ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಅದನ್ನು ಹಿತಮಿತವಾಗಿ ಹಾಗೂ ಸುರಕ್ಷಿತವಾಗಿ ಬಳಸಬೇಕು ಎಂದು ಜಿಲ್ಲಾ ಹೆಸ್ಕಾಂ ವಿಭಾಗೀಯ ಕಚೇರಿಯ ಸಹಾಯಕ ಅಭಿಯಂತರ ಆರ್. ಎಂ. ಕೋಳಿ ಹೇಳಿದರು.
ಅವರು ಇಲ್ಲಿನ ಕರನಂದಿ ರಂಗಮಂದಿರದಲ್ಲಿ ಹೆಸ್ಕಾಂನ ಕಾರ್ಯ ಮತ್ತು ಪಾಲನಾ ಉಪವಿಭಾಗ ಗುಳೇದಗುಡ್ಡ ಹಾಗೂ ಕಟಗೇರಿ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯುತ್ ಬಳಕೆಯಲ್ಲಿ ಸುರಕ್ಷತೆಯ ಸಲಹೆಗಳು, ಉಳಿತಾಯದ ಬಗ್ಗೆ ಗ್ರಾಹಕರಿಗೆ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿ, ವಿದ್ಯುತ್ ಬಳಕೆಯಲ್ಲಿ ಎಚ್ಚರ ತಪ್ಪಿದರೆ ಅವಘಟಗಳು ಸಂಭವಿಸುತ್ತವೆ. ವಿದ್ಯುತ್ ಅವಘಡಗಳನ್ನು ತಡೆಯಲು ಅರ್ಥಿಂಗ್ ವ್ಯವಸ್ಥೆ ಅವಶ್ಯಕವಾಗಿ ಮಾಡಿಸಬೇಕು ಎಂದರು.

ಗ್ರಾಹಕ ಎಸ್.ಎಸ್. ನಾರಾ ಮಾತನಾಡಿ, ನಮ್ಮ ದೇಹಕ್ಕೆ ಉಸಿರು ಎಷ್ಟು ಅವಶ್ಯಕವೋ ಅಷ್ಟೆÃ ನಮ್ಮ ಬದುಕಿಗೆ ವಿದ್ಯುತ್ ಅವಶ್ಯವಾಗಿದ್ದು, ಅದನ್ನು ಮಿತವಾಗಿ ಬಳಸಿ, ಉಳಿಸಿ ದೇಶಕ್ಕೆ ಕೊಡುಗೆ ನೀಡಬೇಕು. ವಿದ್ಯುತ್‌ನೊಂದಿಗೆ ನಿರ್ಲಕ್ಷ ವಹಿಸಬಾರದು ಎಂದರು.
ಇದೇ ಸಂದರ್ಭದಲ್ಲಿ ವೆಂಕಟೇಶ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿದ್ಯುತ್ ಬಳಕೆಯ ಕರಿತು ಮಾತನಾಡಿದರು.

ಸಭೆಯಲ್ಲಿ ಗ್ರಾಹಕರಾದ ಆರ್.ಎನ್. ಕಾಟವಾ, ಗುತ್ತಿಗೆದಾರ ಮಹಿಬೂಬ ಕಾಂಟ್ರಾಕ್ಟರ್ ಮಾತನಾಡಿದರು.
ಈ ಸಂದರ್ಭದಲ್ಲಿ ಗುಳೇದಗುಡ್ಡ ಹಾಗೂ ಕಟಗೇರಿ ಹೆಸ್ಕಾಂನ ಶಾಖಾಧಿಕಾರಿಗಳಾದ ಬಸವರಾಜ ಬಿದರಿಕರ, ಬಾಲಚಂದ್ರ ಕೊಳ್ಳಿ, ವಿದ್ಯುತ್ ಗುತ್ತಿಗೆದಾರರ ಕೇಂದ್ರ ಕಾರ್ಯಕಾರಣಿ ಸದಸ್ಯ ಮಾರುತಿ ಲಮಾಣಿ, ಹೆಸ್ಕಾಂ ಸಿಬ್ಬಂದಿ ಎಂ.ಎಸ್. ಮಡಿವಾಳರ, ಮುನ್ನಾ ಕೊಣ್ಣೂರ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

loading...