ನರೇಂದ್ರ ಮೋದಿ ತೀವ್ರ ಮುಖಭಂಗಕ್

0
12

ಅಹಮದಾಬಾದ, ನ.21: 2004ರ ಜೂನ 15 ರಂದು ಪೊಲೀಸರು ಎನ್ಕೌಂಟರದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಸುತ್ತಿದ್ದ ನಸ್ರತ್ಜಹಾನ್ ಹಾಗೂ ಇತರ ಮೂವರನ್ನು ಎನ್ಕೌಂಟರ ಸಮಯದಲ್ಲಿ ಹತ್ಯೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ ಈ ಎನ್ಕೌಂಟರ ನಡೆದೇ ಇಲ್ಲ ಆ ಎನ್ ಕೌಂಟರ ನಡೆದಿದೆ ಎಂದು ಹೇಳಿದ ದಿನಕ್ಕಿಂತ ಮೊದಲೇ ಅವರ ಹತ್ಯೆ ಮಾಡಲಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ನೇಮಕ ಮಾಡಿದ್ದ ವಿಶೇಷ ತನಿಖಾ ತಂಡ ತನ್ನ ವರದಿಯನ್ನು ಗುಜರಾತ ಶ್ರೇಷ್ಠ ನ್ಯಾಯಾಲಯಕ್ಕೆ ಸಲ್ಲಿಸಿದ ಈ ವರದಿಯ ಆಧಾರದ ಮೇಲೆ ಹೊಸ ಎಫ್ಐಆರ್ ದಾಖಲಿಸಬೇಕೆಂದು ನ್ಯಾಯಾಲಯ ಆದೇಶ ಮಾಡಿರುವುದರಿಂದ ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ತೀವ್ರ ಮುಖಭಂಗಕ್ಕೆ ಒಳಗಾದಂತೆ ಆಗಿದೆ. ಇದು ಅವರಿಗೆ ಆದ ಒಂದು ಹಿನ್ನಡೆಯಾಗಿದೆ.

ಈಗಾಗಲೇ ಹಲವು ಪ್ರಕರಣಗಳಲ್ಲಿ ಹಿನ್ನಡೆಯನ್ನು ಅನುಭವಿಸತೊಡಗಿರುವ ನರೇಂದ್ರ ಮೋದಿ ಅವರಿಗೆ ಈಗ ಮೊತ್ತೊಂದು ಹಿನ್ನಡೆ ಆದಂತಾಗಿದೆ. ಅಂದರೆ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಮುಂಚಿತವಾಗಿ ಹತ್ಯೆ ಮಾಡಿ ನಂತರ ಎನ್ಕೌಂಟರ ನಾಟಕವನ್ನು ಮಾಡಲಾಗಿತ್ತು ಎಂಬ ಸತ್ಯ ಈಗ ತನಿಖಾ ತಂಡದ ವರದಿಯಿಂದ ಬಯಲಿಗೆ ಬಂದಂತೆ ಆಗಿರುವುದನ್ನು ನಾವು ನೋಡಬಹುದಾಗಿದೆ.

loading...

LEAVE A REPLY

Please enter your comment!
Please enter your name here