ನರೇಗಾ ಸಮರ್ಪಕ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

0
15

 

ಕನ್ನಡಮ್ಮ ಸುದ್ದಿ-ಕೊಪ್ಪಳ: ಮಹಾತ್ಮಗಾಂಧಿ ಉದ್ಯೊÃಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಕೃಷಿ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ನಗರದ ತಾಲ್ಲೂಕು ಪಂಚಾಯಿತಿ ಎದುರು ಮಂಗಳವಾರದಂದು ನಡೆಸಿದ ಪ್ರತಿಭಟನೆಂiÀiಲ್ಲಿ, ತಾಲ್ಲೂಕಿನ ಹಿರೇಬಗನಾಳ ಗ್ರಾಮ ಪಂಚಾಯಿತಿ ಪಿ.ಡಿ.ಒ, ಅಧಿಕಾರಿಗಳು ಕೂಲಿಕಾರರಿಗೆ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಬೇಕು. ಉದ್ಯೊÃಗಕ್ಕಾಗಿ ಫಾರಂ ೬ನ್ನು ಸ್ವಿÃಕರಿಸಬೇಕು. ಕೂಲಿಕಾರರಿಗೆ ಜೆಇ ಕಿರುಕುಳ ನಿಲ್ಲಬೇಕು. ಪಂಚಾಯಿತಿಯಲ್ಲಿ ದುಡಿದ ಕೂಲಿಕಾರರಿಗೆ ಅವರ ಬ್ಯಾಂಕ್‌ಗೆ ಹಣ ಪಾವತಿ ಮಾಡಬೇಕು. ನರೇಗಾ ಯೋಜನೆಯ ಕೆಲಸ ಮಾಡಿದ ಕೂಲಿಕಾರರಿಗೆ ತ್ವರಿತಗತಿಯಲ್ಲಿ ಹಣ ಪಾವತಿ ಆಗಬೇಕು ಎಂದು ಸಂಘದ ಮುಖಂಡ ಸುಂಕಪ್ಪ ಗದಗ ಒತ್ತಾಯಿಸಿದರು. ಹಿರೇಬಗನಾಳ ಗ್ರಾಮ ಪಂಚಾಯಿತಿಯ ಹಿರೇಕಾಸನಕಂಡಿ ಗ್ರಾಮದಲ್ಲಿ ತುರ್ತಾಗಿ ಶುದ್ಧ ಕುಡಿಯುವ ನೀರು ಒದಗಿಸಬೇಕು. ಕೋಳೂರು ಗ್ರಾಮ ಪಂಚಾಯಿತಿಯಲ್ಲಿ ಗುನ್ನಳ್ಳಿ ಗ್ರಾಮದಲ್ಲಿ ತ್ವರಿತಗತಿಯಲ್ಲಿ ಉದ್ಯೊÃಗ ಒದಗಿಸಬೇಕು. ಅಲ್ಲದೇ ಫಾರಂ ನಂ. ೬ ನೀಡಲು ಹಿಂದೇಟು ಹಾಕುವುದನ್ನು ನಿಲ್ಲಿಸಬೇಕು. ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ಕೂಲಿ ಕಾರ್ಮಿಕರು ಆಗ್ರಹಿಸಿದರು. ಉದ್ಯೊÃಗ ಖಾತ್ರಿ ಕೆಲಸ ಮುಗಿದು ೧೫ರಿಂದ ೨೦ ದಿನ ಕಳೆದರೂ ಎಫ್‌ಟಿಓ ಕಾಪಿ ಕೊಡುವುದಿಲ್ಲ. ಅದನ್ನು ತ್ವರಿತಗತಿಯಲ್ಲಿ ನೀಡಬೇಕು. ೬೦ರಿಂದ ೭೦ ಜನ ಒಂದೇ ಟ್ರಾ÷್ಯಕ್ಟರ್‌ನಲ್ಲಿ ಕೆಲಸ ಹೋಗುತ್ತಿದ್ದು, ಟ್ರಾಕ್ಟರ್ ವ್ಯವಸ್ಥೆ ಮಾಡಬೇಕು. ದುಡಿದ ಕೂಲಿ ಹಣ ಜಮೆ ಮಾಡಲು ತಾಂತ್ರಿಕ ದೋಷ ಮಾಡುವುದನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ನಿಲ್ಲಿಸಬೇಕು. ತಾಲ್ಲೂಕಿನಲ್ಲಿ ಬರ ಆವರಿಸಿದ್ದು, ೧೫೦ ದಿನ ಕೆಲಸ ನೀಡಬೇಕು. ಬರಗಾಲ ಕಾಮಗಾರಿ ಆರಂಭ ಮಾಡುವುಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಮಲ್ಲೆÉÃಶ ಗುನ್ನಳ್ಳಿ, ವೆಂಕಟೇಶ, ಪಾರವ್ವ ಗದ್ದಿ, ಶಾಂತವ್ವ ಗುನ್ನಳ್ಳಿ, ಫಕೀರಪ್ಪ ಪÇಜಾರ, ನೀಲಪ್ಪ ಗಾಳಿ, ಬಸಪ್ಪ ಹರಿಜನ, ನೀಲವ್ವ ಕರಡಿ, ಗಾಳೆಪ್ಪ, ದೇವೆಂದ್ರಪ್ಪ, ಶಾಂತವ್ವ ಪÇಜಾರ ಇತರರು ಪಾಲ್ಗೊಂಡಿದ್ದರು.

loading...