ನಷ್ಟದ ಅಂದಾಜು ಸಿದ್ಧಪಡಿಸಲು ತಂಡ ರಚನೆ: ಶಾಸಕಿ ಹೆಬ್ಬಾಳಕರ

0
1

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರವಾಹದಿಂದ ಆಗಿರುವ ನಷ್ಟದ ಕುರಿತು ಸಮೀಕ್ಷೆ ಮಾಡಲು ತಂಡ ರಚನೆ ಮಾಡಿದ್ದು, ಅತೀ ಶೀಘ್ರದಲ್ಲಿ ಅಂದಾಜು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಶಾಸಕಿ ಲಕ್ಷಿö್ಮÃ ಹೆಬ್ಬಾಳಕರ್ ತಿಳಿಸಿದ್ದಾರೆ.
ಮಂಗಳವಾರ ಕ್ಷೇತ್ರದ ಹಲವೆಡೆ ಪ್ರವಾಹ ನಷ್ಟದ ಪರಿಶೀಲನೆ ನಡೆಸಿದ ಅವರು, ಗ್ರಾಮೀಣ ಕ್ಷೇತ್ರದಲ್ಲಿ ಗರಿಷ್ಟ ಪ್ರಮಾಣದಲ್ಲಿ ನಷ್ಟವಾಗಿದೆ. ಕಳೆದ ಒಂದು ವರ್ಷದಲ್ಲಿ ಮಾಡಿದ್ದ ಸಾಕಷ್ಟು ಅಭಿವೃದ್ಧಿ ಕೆಲಸಗಳೂ ಕೊಚ್ಚಿಕೊಂಡು ಹೋಗಿವೆ. ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳೂ ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ನಷ್ಟದ ಅಂದಾಜು ಸಿದ್ಧಪಡಿಸಿದ ಅಧಿಕಾರಿಗಳಿಗೂ ಸೂಚಿಸಲಾಗಿದೆ. ನಮ್ಮ ತಂಡವೂ ಸಿದ್ಧಪಡಿಸಲಿದೆ. ಎರಡನ್ನೂ ಕ್ರೋಢೀಕರಿಸಿ ಅಂತಿಮ ವರದಿ ತಯಾರಿಸಲಾಗುವುದು. ತ್ರದ ಹಲವಾರು ಕುಟುಂಬಗಳು ಮನೆ, ಹೊಲಗದ್ದೆ ಹಾಗೂ ಬೆಳೆಗಳನ್ನು ಕಳೆದುಕೊಂಡಿದವೆ. ಯಾರಿಗೂ ಅನ್ಯಾಯವಾಗದಂತೆ ವರದಿ ಸಿದ್ದಪಡಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಹೆಬ್ಬಾಳಕರ್ ತಿಳಿಸಿದರು.
ಬೆಳಗುಂದಿ, ರಕ್ಕಸಕೊಪ್ಪ, ಸೋನೊಲಿ, ಎಳೆಬೈಲ್ ಗ್ರಾಮಗಳಿಗೆ ಭೇಟಿ ಕೊಟ್ಟು ನಿರಾಶ್ರಿತರ ಸಂಕಷ್ಟಗಳಿಗೆ ಸ್ಪಂದಿಸಿದರು. ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿಯಿಂದ ಬಿ ಜಿ ರಘು, ಎಚ್ ಜಿ ಗಣೇಶ, ಬಿ ಜಿ ಮಲ್ಲೇಶಪ್ಪ, ಕರಿಯಪ್ಪ ಹಾಗೂ ಅವರ ಸಹಚರರು ಸುಮಾರು ಆರವತ್ತು ಜನ ಕ್ಷೇತ್ರಕ್ಕೆ ಆಗಮಿಸಿ ನಿರಾಶ್ರಿತರಿಗೆ, ಬಟ್ಟೆ, ತಿಂಡಿ ತಿನಿಸುಗಳ ಸಹಾಯವನ್ನು ಮಾಡಿ ಮಾನವೀಯತೆ ಮೆರೆದರು.

loading...