ಧಾರವಾಡ:ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ನಿಕಟಪೂರ್ವ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅವರನ್ನು ರಾಜನಗರ ನಾಗರಿಕ ಹಿತರಕ್ಷಣಾ ಸಮಿತಿವತಿಯಿಂದ ಇತ್ತೀಚಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅನೇಕ ಪದಾಧಿಕಾರಿಗಳು, ಹಿರೇಮಠ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಪರಿಷತ್ನ್ನು ಜನತೆಗೆ ಹತ್ತಿರವಾಗಿಸಿದ್ದಾರೆ.
ಈ ಮೂಲಕ ಜಿಲ್ಲಾ ಘಟಕವನ್ನು ಮಾದರಿಯಾಗಿ ರೂಪಿಸಲು ಶ್ರಮಿಸಿ ಯಶಸ್ಸು ಸಾಧಿಸಿರುವ ಹಿರೇಮಠ,ಇದೀಗ ಮತ್ತೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದು ಸಂತಸಸ ಸಂಗತಿಯಾಗಿದೆ.ಹಿರೇಮಠರ ಕಾರ್ಯಶೈಲಿ ಹಾಗೂ ಅರ್ಪಣಾ ಮನೋಭಾವ ಕಂಡಿರುವ ಪರಿಷತ್ನ ಸದಸ್ಯರು ಮತ್ತೊಂದು ಅವಧಿಗೆ ಆಯ್ಕೆ ಮಾಡುವ ಮೂಲಕ ಪ್ರೌತ್ಸಾಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಮಿತಿ ವತಿಯಿಂದ ಡಾ.ಡಿ.ಎಂ.ಹಿರೇಮಠ ಅವರನ್ನು ಸನ್ಮಾನಿಸಿ ಶುಭಕೋರಲಾಯಿತು.
ಸಮಿತಿ ಅಧ್ಯಕ್ಷ ಬಿ.ಎಂ.ಹೂಗಾರ,ಎಸ್.ಎಫ್.ಬಾಳನಗೌಡರ,ಎಸ್. ವೈ.ಪೂಜಾರ, ಯು.ಬಿ.ಅಂಗಡಿ, ಡಿ.ವ್ಹಿ. ಮುಧೋಳ,ಮಾನಪ್ಪ ಬಡಿಗೇರ, ಎನ್.ಎಮ್.ಛಬ್ಬಿ,ಶಿವಯೋಗಿ ಗುಳ್ಳನ್ನವರ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.