ನಾಟಕಗಳು ಬದುಕಿನ ನೈಜತೆಗೆ ಹತ್ತಿರ: ಇಟಗಿ

0
6

ಮುಂಡರಗಿ: ನಾಟಕಗಳು ನಮ್ಮ ಜೀವನದ ಪ್ರತಿಬಿಂಬಗಳಾಗಿವೆ. ನಾಟಕಗಳಲ್ಲಿ ಬರುವ ಸನ್ನಿವೇಷಗಳು ನಮ್ಮ ಬದುಕಿಗೆ ತುಂಬಾ ಹತ್ತಿರವಾಗಿರುತ್ತವೆ. ಆ ಕಾರಣದಿಂದ ನಾಟಕಗಳು ಬದುಕಿನ ನೈಜತೆಗೆ ಹತ್ತಿರವಾಗಿರುತ್ತವೆ ಎಂದು ಸಮಾಜ ಸೇವಕ ಮಂಜುನಾಥ ಇಟಗಿ ತಿಳಿಸಿದರು.
ಪಟ್ಟಣದ ಕೋಟೆ ಭಾಗದ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ಏರ್ಪಡಿಸಿದ್ದ ‘ಕುರುಕ್ಷೆÃತ್ರ’ ಅರ್ಥಾತ ‘ಕುರು ಪಾಂಡವರ ಯುದ್ಧ’ ದೊಡ್ಡಾಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇತ್ತಿÃಚಿನ ವರ್ಷಗಳಲ್ಲಿ ಮೊಬೈಲ್, ಇಂಟರ್ ನೆಟ್, ಕಂಪ್ಯೂಟರ್ ಮೊದಲಾದ ಇಲೆಕ್ಟಾçನಿಕ್ ಮಾಧ್ಯಮಗಳ ಭರಾಟೆಯಲ್ಲಿ ಬಯಲಾಟ, ದೊಡ್ಡಾಟ, ಮೂಡಲಪಾಯ, ಯಕ್ಷಗಾನ ಮೊದಲಾದ ನಾಟಕ ಪ್ರಕಾರಗಳು ಮರೆಯಾಗುತ್ತಲಿವೆ. ಯುವಕರು ನಮ್ಮ ಪ್ರಾಚೀನ ಕಲೆಗಳನ್ನು ಉಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಮಂಜುನಾಥ ಮುಧೋಳ ಮಾತನಾಡಿ, ಪ್ರತೀ ವರ್ಷ ನಮ್ಮ ಕೋಟೆ ಭಾಗದ ಹಿರಿಯರೆಲ್ಲ ಒಂದಾಗಿ ಬಯಲಾಟ ಹಾಗೂ ದೊಡ್ಡಾಟಗಳನ್ನು ಆಡುವ ಮೂಲಕ ನಮ್ಮ ಪುರಾಣ ಹಾಗೂ ಪುಣ್ಯ ಕಥೆಗಳ ಘಟನೆಗಳನ್ನು ಮಕ್ಕಳಿಗೆ ಮತ್ತು ಯುವ ಜನತೆಗೆ ಪರಿಚಯಿಸುತ್ತಿದ್ದಾರೆ. ಅಳಿದು ಹೋಗುತ್ತಿರುವ ಇಂತಹ ಕಲಾ ಪ್ರಕಾರಗಳನ್ನು ಯುವಕರಿಗೆ ಪರಿಚಯಿಸಬೇಕಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಲಾವಿದರಾದ ಶಿವನಗೌಡ್ರ ಗೌಡ್ರ, ಕೃಷ್ಣಗೌಡ ಪಾಟೀಲ, ದೇವೇಂದ್ರಪ್ಪ ಭಂಡಾರಿ, ಕೆಂಚನಗೌಡ್ರ ಗೌಡ್ರ, ಅಶೋಕ ಅಳವುಂಡಿ, ಗುರುಪಾದಗೌಡ್ರ ಗೌಡ್ರ ಅವರನ್ನು ಸನ್ಮಾನಿಸಲಾಯಿತು.
ರುದ್ರಪ್ಪ ಲದ್ದಿ, ದೇವಪ್ಪ ಇಟಗಿ, ನಿಂಗಪ್ಪ ಬಿಸನಳ್ಳಿ, ಶಿವಪ್ಪ ಚಿಕ್ಕಣ್ಣವರ, ಶಂಬಾಜಿ ಲೇಂಡ್ವೆ, ಮರಿಯಪ್ಪ ಟಪಾಲ, ರಾಮಪ್ಪ ದಾಸಕನಕಪ್ಪನವರ, ರಾಘವೇಂದ್ರ ಕುರಿ, ಶಿವಣ್ಣ ಕುರಿ, ಫಕ್ಕಿÃರಪ್ಪ ಬಳ್ಳಾರಿ, ಶೇಖಪ್ಪ ಹಂದ್ರಾಳ, ದುರುಗಪ್ಪ ರಾಮೇನಹಳ್ಳಿ, ಮುದಿಯಪ್ಪ ಕುಂಬಾರ, ನೀಲಪ್ಪ ಚಿಕ್ಕಣ್ಣವರ, ಕೋಟೆಪ್ಪ ಮೋರನಾಳ, ಪವನ ಮೇಟಿ ಇದ್ದರು.

loading...