ನಾನು ಪ್ರೆÃಮ ರೋಗಿ ದಯಮಾಡಿ ವಾಸಿ ಮಾಡಬೇಡಿ

0
4

ರವಿ ತಳವಾರ

ಈ ಬೇಸಿಗೆ ರಜೆ ಬರೀ ರಜೆಯಲ್ಲ ಅವಳು ಈ ಎದೆಯಲ್ಲಿ ರುಜು ಮಾಡಿಹೋದ ಪ್ರಿÃತಿ ಪಾಠದ ಪ್ರಾರಂಭ! ಈ ಬೇಸಿಗೆ ಒಂದು ಕಡೆಗೆ ನೆತ್ತಿಯನ್ನು ಬೆಂಕಿ ಕೆಂಡಂತೆ ಸುಡುತ್ತಿದ್ದರೆ ಮತ್ತೊಂದು ಕಡೆಗೆ ಅಷ್ಟೆÃ ಪರ್ಸೆಂಟೇಜ್‌ನಲ್ಲಿ ಮನಸ್ಸಿನ ತುಂಬ ಮೆತ್ತಿಕೊಂಡಿರುವ ಅವಳ ನೆನಪನ್ನೂ ಮತ್ತೆ ಮತ್ತೆ ಸ್ಮೃತಿ ಪಟಲಕ್ಕೆ ತಂದು ಹೃದಯಕ್ಕೆ ಹಾಗೇ ತಂಗಾಳಿಯ ಅನುಭವ ನೀಡುತ್ತದೆ. ಮನೆಯಿಂದ ಹೊರಗಡೆ ಹೋಗುವುದೇ ಅಪರೂಪದ ಪರಿಸರದಲ್ಲಿ ಬೆಳೆದ ನನಗೆ ವಿತ್ ಫುಲ್ ಆಫ್ ಪರ್ಮಿಶನ್ ಓಡಾಡುವುದಕ್ಕೆ ಬೇಸಿಗೆ ರಜೆಯೊಂದೇ ಅತ್ಯಾಪ್ತ ಸೀಸನ್. ಊರಿನ ರಸ್ತೆ ದಾಟುವುದಕ್ಕೂ ಅಪ್ಪ ಅಮ್ಮನ ಅನುಮತಿ ಪಡೆದಕೊಳ್ಳುವ ಈ ಅಮಾಯಕನಿಗೆ ಅಗಾಧವಾದ ಧೈರ್ಯ ತುಂಬಿ ಮೆದುಳು ಚುರುಕಾಗಿಸಿದ ಆ ಗುಳಿಕೆನ್ನೆಯ ಅಂದಗಾತಿಯ ಮೆರವಣಿಗೆ ಈ ಸಮ್ಮರ್ ಸೀಸನ್‌ನಲ್ಲಿ ನಿತ್ಯವೂ ನಿರಂತರ..!
ಜೊತೆಗಿದ್ದ ಎಲ್ಲ ಹುಡುಗಿಯರೂ ವೆರೈಟಿ ಡಿಸೈನ್ಡ್ ಜೀನ್ಸ್ ಫ್ಯಾಂಟ್ ಮತ್ತೆ ಟಾಪ್ ಹಾಕಿ ಚೆಂದ ತೋರುವ ಹಪಾಹಪಿಯಲ್ಲಿದ್ದರೆÉ ಆಕೆ ಮಾತ್ರ ಭಿನ್ನ ತುಂಬಾನೆ ವಿಭಿನ್ನ! ಬರೀ ತೆಳು ಬಣ್ಣದ ಚೂಡಿ, ಆಗಾಗ ಲಂಗಾ ದಾವಣಿ.! ಜಾತ್ರೆನೋ, ಮದುವೆನೋ ಏನಾದರೂ ಇದ್ದರಂತೂ ಆಕೆ ತೊಡುವ ಆ ಸ್ಯಾರಿಯಂತೂ ಸೀರಿಯಸ್ಲಿ ನನ್ನ ಸೀದಾ ಒಲವ ದವಾಖಾನೆಯ ಪೇಶೆಂಟ್ ಬೆಡ್‌ಗೆ ಕರೆದುಕೊಂಡು ಹೋಗಿಬಿಡುತ್ತಿತ್ತು. ಆಗೊಂಥರ ‘ನಾನು ಪ್ರೆÃಮ ರೋಗಿ ದಯಮಾಡಿ ವಾಸಿ ಮಾಡಬೇಡಿ ಅಂಥ ರೂಪಸಿ ನನ್ನ ಪ್ರೆÃಯಸಿ’ ಅಂತ ಬಡಬಡಿಸುವ ಪಾಡು ನನ್ನದು! ಸೀದಾ ಸಾದಾ ಡ್ರೆಸ್ ಹಾಕಿ ಟೂ ಸಿಂಪಲ್ ಆಗಿರುತ್ತಿದ್ದ ಹುಡುಗಿ ಬಣ್ಣವಿಲ್ಲದೆಯೂ ಬೆರಗೂ ಮೂಡಿಸುವಂಥ ಅಂದಗಾತಿ ಅನ್ನುವುದರಲ್ಲಿ ನೋ ಡೌಟ್. ಅದ್ಯಾಕೋ ಏನೋ ಈ ಬೇಸಿಗೆಯಲ್ಲಿಯೇ ಅವಳು ಮತ್ತೆ ಮತ್ತೆ ನೆನಪಾಗಿ ಎದೆಯನ್ನೆಲ್ಲ ಹಾಗೇ ತಣ್ಣನೆಯ ಗಾಳಿಯಂತೆ ಆವರಿಸಿ ಅಪ್ಯಾಯಮಾನ ಅನ್ನಿಸಿಬಿಡುತ್ತಾಳೆ. ಹೊರಗಡೆ ನೆತ್ತಿ ಸುಡುವ ಬಿಸಿಲು ಎದೆ ಒಳಗಡೆ ಅವಳ ನೆನಪಿನ ಅಮಲು! ಆಕೆ ವರ್ಷವಿಡೀ ನನಗೆ ಭೇಟಿ ಆಗುತ್ತಿದ್ದದ್ದು, ನನ್ನ ಜೊತೆಗೆ ಮಾತನಾಡುತ್ತಿದ್ದದ್ದು, ಮುಗುಳು ನಗೆ ಚೆಲ್ಲುತ್ತಿದ್ದದ್ದು ವರ್ಷದ ಬೇಸಿಗೆ ರಜೆಯಲ್ಲಷ್ಟೆÃ. ಸೋ ಅದೇ ಕಾರಣಕ್ಕೆನೋ ಶುಭ್ರ ಸುಂದರಿ ಪ್ರಖರ ಬಿಸಿಲಿನಲ್ಲಿಯೂ ನೆನಪಾಗಿ ಜಗವೆಲ್ಲ ಮರೆಸುವುದು. ದಿನ ಮುಂಜಾನೆ ಆ ಚೆಲುವೆಯ ಚೆಂದದ ಒಂದು ಮೆಸೆಜ್ ನನ್ನನ್ನು ನನಗೇ ಗೊತ್ತಿಲ್ಲದೇ ಬೂಸ್ಟ್ ಮಾಡುತ್ತಿತ್ತು. ಮುಂಜಾನೆ ನಾನೇನೆಂದರೂ ನಗು ಸೂಸುವಾಗ ಅವಳ ಗಲ್ಲದ ಒಳಗೊಂದು ಹುಟ್ಟುವ ಆ ಗುಳಿ ನನ್ನ ಸತ್ಯವಾಗಲೂ ಆಪೋಶನ ತೆಗೆದುಕೊಂಡು ಬಿಡುತ್ತಿತ್ತು. ಅಂದಗಾತಿ ನಕ್ಕಿದ್ದಕ್ಕಿಂತ ಮುಖ ಕೆಂಪಗೆ ಮಾಡಿಕೊಂಡಿದ್ದೆà ಹೆಚ್ಚು. ಐ ಡೊಂಟ್ ನೋ ಹುಡುಗಿಯರೆಲ್ಲ ಮುಖ ಸಿಂಡರಿಸಿಕೊಂಡಾಗಲೋ, ಮುಖ ಕೆಂಪಾಗಿಸಿಕೊಂಡಾಗಲೋ ಖುಷಿ ಪಟ್ಟಷ್ಟು ನಕ್ಕಾಗಲೂ ಸಂತೋಷಾಗಿರುವುದಿಲ್ಲ ಅನ್ನಿಸುತ್ತದೆ. ಅವಳು ಕೂಡ ಭಯಂಕರ ಸಿಟ್ಟಲ್ಲಿ ಉಮ್ಮ..ಅಂತ ಇದ್ದಾಗಲೇ ಹೆಚ್ಚು ಖುಷಿ ಇರತಿದ್ದಳು. ಬಹುಶ: ಅವಳ ನೆತ್ತಿ ಸವರಿ ಸಮಾಧಾನಿಸುವ ಸರದಿ ನನ್ನದಿರುತ್ತದೆ ಅಂತ ಗೊತ್ತಿದ್ದೆà ಹಾಗೇ ಕೋಪಿಸಿಕೊಳ್ಳುತ್ತಿದ್ದಳೋ ಏನೋ ಗೊತ್ತಿಲ್ಲ. ಬೇಸಿಗೆಯ ರಜೆಯಲ್ಲಿ ಅವಳು ಇರುವಷ್ಟು ದಿನಗಳೂ ಮನೆಯಲ್ಲಿ ಮಾಡುತ್ತಿದ್ದ ಅದೆಷ್ಟೊà ಸಿಹಿಖಾದ್ಯಗಳನ್ನು ಮೊದಲು ತಾನು ತಿನ್ನುತ್ತಿದ್ದಳೇನೋ ಗೊತ್ತಿಲ್ಲ. ಬಟ್ ಅದೇನೇ ಸ್ಪೆಶಲ್ ಫುಡ್ ಐಟಮ್ ಇದ್ದರೂ ನನಗೆ ಶೇರ್ ಮಾಡದೇ ಆಕೆ ತಿಂದಿರುವ ಒಂದೂ ಎಕ್ಸಾಂಪಲ್ ಇಲ್ಲ ಬಿಡಿ! ನಾನು ಅದೇನೆ ಅಂದರೂ ಅವಳದೊಂದೇ ಉತ್ತರ ಇಟ್ಸ್ ಅನಫಾರ್ಗೆಟೆಬಲ್, ಸ್ವಿÃಟಫುಲ್ ಆ್ಯಂಡ್ ಕ್ಯೂಟ್ ನಗು! ಮಾತನಾಡಿದ್ದಕ್ಕಿಂತ ಆಕೆ ಮೊಗೆ ಮೊಗೆದು ಕೊಟ್ಟಿದ್ದು ಓನ್ಲಿ ಎಕ್ಸಪ್ರೆಶನ್. ಯರ‍್ಯಾರಿಗೋ ಕಂಪೇರ್ ಮಾಡಿ ಅವಳನ್ನು ಹೊಗಳಿ ಆಕೆಯ ಕ್ವಾಲಿಟಿ ಡಿಸ್ಕಿçÃಜ್ ಮಾಡುವುದಕ್ಕೆ ನನಗೆ ಸುತಾರಾಂ ಮನಸ್ಸಿಲ್ಲ ಬಿಡಿ. ಆಕೆ ಸತ್ಯವಾಗಲೂ ಮುಗ್ಧ ಮನಸ್ಸಿನ ಮುದ್ದು. ಆ ಅಂದಗಾತಿ ಕಣ್ಣ ತುಂಬ ವಯ್ಯಾರ ಚೆಲ್ಲಿ ಹೋಗಿ ಬಹಳ ವರ್ಷಗಳೆ ಆಗಿ ಹೋದವು. ಬಟ್ ಆಕೆ ನಗು, ಆಗಾಗ ಒಂದೊಂದು ಮಾತು, ಫುಲ್ ಫ್ಲೆÃಟ್ ಆಫ್ ಎಕ್ಸ್ಪ್ರೆಶನ್, ಬಣ್ಣವಿಲ್ಲದೇ ಬೆರಗಾಗಿಸುವ ಚೆಲುವು ಟೋಟ್ಲಿ ಶೀ ಈಸ್ ಯೂನಿಕ್ ಫಾರ್ ಮಿ ದ್ಯಾಟ್ಸ್ ಇಟ್! ಸಿಕ್ಕರೆ ಖಂಡಿತ ಒಂದಿಷ್ಟು ಪೊಸಿಟಿವ್ ಆ್ಯಂಡ್ ಹೆಲ್ತ್ಫುಲ್
ಟಾಕಿಂಗ್ ಇರುತ್ತೆ ಅಂತನ್ನಿಸುತ್ತದೆ. ಮುದ್ಧತೆ, ಬಲಿ ಕೊಡುವುದಕ್ಕೆ ಸುತಾರಾಂ ನನಗೆ ಮನಸ್ಸಿಲ್ಲ ಬಿಡಿ. ನಿಜವಾಗಲೂ ಶೀ ಈಸ್ ಯೂನಿಕ್ ದ್ಯಾಟ್ಸ್ ಇಟ್!
ಎಕ್ಸಪ್ರೆಶನ್

 

loading...