ನವದೆಹಲಿ, ಜೂ.1- ಭಾರತೀಯ ಮಾಹಿತಿ-ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳಲ್ಲಿ ಅಗ್ರ ಪಟ್ಟದಲ್ಲಿದ್ದ ಇನ್ಪೌಸಿಸ್ನ್ನು ಆದಾಯ ಗಳಿಕೆಯಲ್ಲಿ ಕಾಗ್ನಿಜೆಂಟ್ ಕಂಪೆನಿ ಹಿಮ್ಮೆಟ್ಟಿಸಿದ ಬೆನ್ನಲ್ಲೆ ತನ್ನ ಸಂಸ್ಥಾಪಕ ಅಧ್ಯಕ್ಷ ನಾರಾಯಣಮೂರ್ತಿ ಅವರನ್ನು ಇನ್ಪೌಸಿಸ್ ಮತ್ತೆ ಕಾರ್ಯನಿರ್ವಾಹಕ ಮುಖ್ಯಸ್ಥರನ್ನಾಗಿ ನೇಮಕ ಮಾಡಿಕೊಂಡಿದೆ.
1981ರಲ್ಲಿ ಇನ್ಪೌಸಿಸ್ ಕಂಪೆನಿಯನ್ನು ಕಟ್ಟಿದ್ದ ನಾರಾಯಣಮೂರ್ತಿ ಅವರು 2002ರ ವರೆಗೆ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಆಗಿ ಕಾರ್ಯನಿರ್ವಹಿಸಿ 2011ರಲ್ಲಿ ಆಡಳಿತ ಮಂಡಳಿಯಿಂದ ಕೆಳಗಿಳಿದಿದ್ದರು.
ಅವರ ರಾಜೀನಾಮೆ ನಂತರ ಕಂಪೆನಿ ಅದ್ಯಕ್ಷರಾಗಿ ಕೆ.ವಿ.ಕಾಮತ್ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ನಾರಾಯಣಮೂರ್ತಿ ಮಾಸಿಕ ಒಂದು ರೂ. ಗೌರವ ಧನದ ಆಧಾರದ ಮೇಲೆ ಕಾರ್ಯನಿರ್ವಾಹಕ ಮುಖ್ಯಸ್ಥರ ಹುದ್ದೆಯನ್ನು ನಿರ್ವಹಿಸಲಿದ್ದಾರೆ.
loading...