ನಾಳಿನ ಪಂದ್ಯದಲ್ಲಿ ವಾರ್ನರ್‌ ಲಯಕ್ಕೆ ಮರಳಲಿದ್ದಾರೆ: ಜಸ್ಟಿನ್‌ ಲ್ಯಾಂಗರ್‌

0
5
Australia's cricket coach Justin Langer speaks to the media during a press conference at the Sydney Cricket Ground in Sydney, Thursday, January 10, 2019. Langer has strongly denied speculation selectors have an underlying issue with Glenn Maxwell's personality. (AAP Image/Mick Tsikas) NO ARCHIVING

ಮೆಲ್ಬೋರ್ನ್‌:- ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಅವರು ಆ್ಯಶಸ್‌ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಡೇವಿಡ್‌ ವಾರ್ನರ್‌ ನಾಳೆಯಿಂದ ನಡೆಯುವ ಎರಡನೇ ಪಂದ್ಯದಲ್ಲಿ ಲಯಕ್ಕೆ ಮರಳಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲನೇ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ಅವರು ಕೇವಲ 10 ರನ್‌ ಮಾತ್ರ ಗಳಿಸಿದ್ದರು. ಆದಾಗ್ಯೂ, ಸ್ಟೀವ್‌ ಸ್ಮಿತ್‌ ಅವರ ಎರಡೂ ಇನಿಂಗ್ಸ್‌ಗಳಲ್ಲಿ ಸಿಡಿಸಿದ್ದ ಎರಡು ಶತಕಗಳ ನೆರವಿನಿಂದ ಆಸ್ಟ್ರೇಲಿಯಾ 251 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು.
ಅದ್ಭುತ ಆಟಗಾರರು ವಿಫಲತೆಯನ್ನು ಇಷ್ಟಪಡುತ್ತೇನೆ. ಏಕೆಂದರೆ, ಅವರು ಶೀಘ್ರದಲ್ಲೇ ಲಯಕ್ಕೆ ಮರಳಲಿದ್ದಾರೆಂಬ ನಂಬಿಕೆ ಇದೆ. ಹಾಗಾಗಿ, ಎರಡನೇ ಕಾದಾಟದಲ್ಲಿ ಅವರು(ವಾರ್ನರ್‌) ಪುಟಿದೇಳಲಿದ್ದಾರೆಂಬ ವಿಶ್ವಾಸವಿದೆ ಎಂದರು.
ಎರಡೂ ಇನಿಂಗ್ಸ್‌ಗಳಲ್ಲಿ ಸತತ ಶತಕ ಸಿಡಿಸಿದ್ದ ಸ್ಟೀವ್‌ ಸ್ಮಿತ್‌ ಅವರು ಅತಿ ಹೆಚ್ಚು ವೇಗವಾಗಿ 25 ಶತಕ ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಹಿರಿಯ ಸ್ಪಿನ್ನರ್‌ ನಥಾನ್‌ ಲಿಯಾನ್‌ ಕೂಡ ಎರಡನೇ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ ಕಿತ್ತಿದ್ದರು. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ ನಲ್ಲಿ 350 ವಿಕೆಟ್‌ ಕಿತ್ತ ನಾಲ್ಕನೇ ಆಸ್ಟ್ರೇಲಿಯಾ ಬೌಲರ್ ಎಂಬ ಸಾಧನೆ ಮಾಡಿದ್ದರು.
ನಾಳೆ ಲಂಡನ್‌ ದಿ ಲಾರ್ಡ್ಸ್‌ ಅಂಗಳದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.

loading...