ನಾಳೆಯಿಂದ ಇಂಗ್ಲೀಷ ಪದಗಳ ಪ್ರದರ್ಶನ: ಕೊಳ್ಳಿಮಠ

0
54

ಬೆಳಗಾವಿ: ನಾವು ದಿನನಿತ್ಯ ಬಳಕೆ ಮಾಡುವ ವಸ್ತುಗಳಲ್ಲಿಯೇ ಸಾಕಷ್ಟು ಇಂಗ್ಲೀಷ ಪದ ಅಡಗಿರುತ್ತವೆ ಅವುಗಳನ್ನು ಯಾವ ರೀತಿಯಾಗಿ    ಅರ್ಥ ಮಾಡಿಕೊಂಡು ಇಂಗ್ಲೀಷ ಕಲಿಯಬಹುದು ಎಂಬುದನ್ನು ನಮ್ಮ ಸಂಸ್ಥೆಯಲ್ಲಿ ನಾಳೆಯಿಂದ ಒಂದು ತಿಂಗಳ ಇಂಗ್ಲೀಷ ವಸ್ತುಗಳ ಉಚಿತ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಮೃಣಾಲಿನಿ ಇಂಗ್ಲೀಷ ಅಕಾಡೆಮಿ (ಎಂಇಎ) ನಿರ್ದೇಶಕ ರಾಜಶೇಖರ ಕೊಳ್ಳಿಮಠ ಹೇಳಿದರು.
ವಡಗಾಂವ್‍ನ ಭಾರತ ನಗರದ ಮೃಣಾಲಿನಿ ಇಂಗ್ಲೀಷ ಅಕಾಡಮಿ ಸಂಸ್ಥೆಯಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು. ಇಂದು ಪ್ರತಿಯೊಬ್ಬ ವ್ಯಕ್ತಿಗೆ ಇಂಗ್ಲೀಷ ಭಾಷೆ ಕಲಿಕೆ ಅವಶ್ಯಕವಾಗಿದೆ. ಹಾಗಾಗಿ ಇಂಗ್ಲೀಷ ಪದಗಳನ್ನು ಹೇಗೆ ಬಳಕೆ ಮಾಡಿಕೊಂಡು ಇತರರೊಂದಿಗೆ ಮಾತನಾಡಬೇಕು ಎಂಬುದನ್ನು ಇಲ್ಲಿ ಸುಲಭವಾಗಿ ಕಲಿಸಿಕೊಡುತ್ತೆವೆ.
ಈ ಪ್ರದರ್ಶನದ ಉದ್ದೇಶ ಪ್ರಸ್ತುತ ದಿನ ಮಾನಗಳಲ್ಲಿ ಇಂಗ್ಲೀಷ ಭಾಷೆ ಎಲ್ಲರಿಗೂ ಅವಶ್ಯಕವಾಗಿದ್ದು ಅದನ್ನು ಪ್ರತಿಯೊಬ್ಬರು ಕಲಿಯಲೆಬೇಕು. ಆ ಕಾರಣದಿಂದ ಇಗ್ಲೀಷ ಭಾಷೆಯನ್ನು ಹೊಸ ದಾರಿಯ ಮೂಲಕ ಕಲಿತುಕೊಳ್ಳುವ ಒಂದು ವಿಧಾನವನ್ನು ನಾವು ಇಲ್ಲಿ ಉಚಿತವಾಗಿ ಕಲಿಸಿಕೊಡಲಾಗುತ್ತಿದ್ದೆವೆ.
ಹಾಗಾಗಿ ಈ ಇಂಗ್ಲೀಷ ಪದಗಳ ಪ್ರದರ್ಶನಕ್ಕೆ ಎಲ್ಲ ಆಸಕ್ತರು ಆಗಮಿಸಬಹುದು ಅವರಿಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಜಾಹಿರಾತು, ದಿನ ಬಳಕೆ ವಸ್ತುಗಳು ಸೇರಿದಂತೆ ಇತರ ವಸ್ತುಗಳಿಂದ ಸಂಗ್ರಹ ಮಾಡಿಲಾಗಿದ್ದ ಪದಗಳ ಪರಿಚಯ ತಿಳಿಸಲಾಗುತ್ತದೆ. ಪ್ರದರ್ಶನಕ್ಕೆ ಆಗಮಿಸುವವರು ಬೆಳಿಗ್ಗೆ 10.30-1 ಗಂಟೆ ವರೆಗೆ ಸಂಜೆ 4-8 ಗಂಟೆ ವರೆಗೆ ಅವಕಾಶ ಮಾಡಿಕೊಡಲಾಗಿದೆ ಈ ಪ್ರದರ್ಶನದ ಉಪಯೋಗವನ್ನು ಎಲ್ಲರು ಪಡೆಯಬೇಕೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಂಇಎ ಸಹಾಯಕ ನಿರ್ದೇಶಕಿ ಕೊಮಲ್ ಕೊಳ್ಳಿಮಠ ಇದ್ದರು.

loading...