ನಾಳೆಯಿಂದ ನೀರು ಪೂರೈಕೆ ಸ್ಥಗಿತ

0
10

 

ನಾಳೆಯಿಂದ ನೀರು ಪೂರೈಕೆ ಸ್ಥಗಿತ

ಬೆಳಗಾವಿ:
ಮಾ.4ರಿಂದ 4 ದಿನಗಳ ಕಾಲ ಹಿಡಕಲ್ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ನೀರು ಸರಬರಾಜು ನಿಗಮ ತಿಳಿಸಿದೆ.

ಹಿಡಕಲ್ ಜಲಾಶಯದಿಂದ ಕುಡಿಯುವ ನೀರು ಬಿಡುಗಡೆ ಮಾಡುವ ಗೇಟ್ ಮುರಿದಿದ್ದು ಇದರಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಕರ್ನಾಟಕ ನೀರು ಸರಬರಾಜು ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮಹಾನಗರ ಪಾಲಿಕೆಗೆ ತಿಳಿಸಿದ್ದಾರೆ.

ಮುರಿದಿರುವ ಗೇಟನ್ನು ಪರಿಶೀಲಿಸಲಾಗಿ ಮುಂದಿನ ನೀರು ಬಿಡುಗಡೆ ಮುನ್ನ ಗೇಟನ್ನು ದುರುಗೊಳಿಸುವುದು ಅನಿವಾರ್ಯ. ಆದುದರಿಂದ ಗೇಟನ್ನು ದುರಸ್ಥಿಗೊಳಿಸಲು ನೀರು ಸರಬರಾಜು ನಿಲ್ಲಿಸಬೇಕಾಗುತ್ತದೆ. ಹಾಗಾಗಿ ಹಿಡಕಲ ಜಲಾಶಯದಿಂದ 4 ದಿನಗಳವರೆಗೆ ಕುಡಿಯುವ ನೀರು ಸರಬರಾಜು ನಿಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

 

 

loading...