ನಾಳೆ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ, ಏಪ್ರಿಲ್ 17 ಕ್ಕೆ ಮದುವೆ

0
2

ಬೆಂಗಳೂರು-  ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ  ಹೆಚ್.ಡಿ.ಕುಮಾರಸ್ವಾಮಿ ಪುತ್ರ ಜೆಡಿಎಸ್ ರಾಜ್ಯ ಯುವಘಟಕ ಅಧ್ಯಕ್ಷ ನಿಖಿಲ್  ಕುಮಾರಸ್ವಾಮಿ ರೇವತಿ ನಿಶ್ಚಿತಾರ್ಥ ನಾಳೆ ನಗರದ ತಾಜ್‌ವೆಸ್ಟ್‌ ಹೊಟೇಲ್‌ನಲ್ಲಿ  ನೆರವೇರಲಿದೆ.
ನಿಶ್ಚಿತಾರ್ಥಕ್ಕೆ ಅಗತ್ಯವಾದ ಎಲ್ಲಾ ಸಿದ್ಧತೆಗಳು ಈಗಾಗಲೇ  ತಾಜ್‌ವೆಸ್ಟ್‌ನಲ್ಲಿ ಭರದಿಂದ ಸಾಗಿವೆ. ನಾಳಿನ‌ ನಿಶ್ಚಿತಾರ್ಥಕ್ಕೆ ದೂರವಾಣಿ ಮುಖಾಂತರ  ಗಣ್ಯರಿಗೆ ಪಕ್ಷದ ನಾಯಕರುಗಳಿಗೆ ಖುದ್ದು ಕರೆ ಮಾಡಿ ಆಹ್ವಾನ ನೀಡಿದ್ದಾರೆ.
ಜೆ.ಪಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಕುಮಾರಸ್ವಾಮಿ ಮಾತನಾಡಿ, ನಾಳೆ ನಮ್ಮ ಕುಟುಂಬದಲ್ಲಿ ಶುಭ ಸಮಾರಂಭ ಇದೆ. ಎಲ್ಲಾ  ಪಕ್ಷದ ಶಾಸಕರು, ನಾಯಕರು, ಮುಖಂಡರು, ಪ್ರಮುಖ ಕಾರ್ಯಕರ್ತರಿಗೆ ಆಹ್ವಾನ ನೀಡಲಾಗಿದೆ.  ಏಪ್ರಿಲ್ 17ರಂದು ವಿವಾಹಕ್ಕೆ ಮುಹೂರ್ತ ನಿಗದಿಪಡಿಸಲಾಗುವುದು. ನಿಶ್ಚಿತಾರ್ಥದ ಬಳಿಕ  ಮದುವೆಯ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದರು.
ಮಗನ ಮದುವೆ ಬಗ್ಗೆ ನನದೊಂದು ಕನಸು,  ಅಭಿಲಾಷೆಗಳಿವೆ. ತಮ್ಮನ್ನು ಬೆಳೆಸಿದ ಜನರಿಗೆ ಪ್ರೀತಿ ವಿಶ್ವಾಸ ವ್ಯಕ್ತಪಡಿಸಲು  ಸಿಕ್ಕಿರುವ ಒಂದೇ ಒಂದು ಅವಕಾಶ ಇದಾಗಿದ್ದು, ಮದುವೆ ಸಮಾರಂಭಕ್ಕೆ ಎಲ್ಲರಿಗೂ ಆಹ್ವಾನ  ನೀಡಲಾಗುತ್ತದೆ. ವಿಶೇಷವಾದ ರೀತಿಯಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ನಿಶ್ಚಿತಾರ್ಥಕ್ಕೆ ನಾಳೆ ನಾಲ್ಕೈದು ಸಾವಿರ ಅತಿಥಿಗಳು ಬರುವ ನಿರೀಕ್ಷೆ ಇದೆ ಎಂದರು.
ರಾಮನಗರ-ಚನ್ನಪಟ್ಟಣ  ನಡುವೆ ಖಾಸಗಿ ಸ್ಥಳವೊಂದನ್ನು ವಿವಾಹಕ್ಕೆ ನೋಡಿದ್ದು ಜಮೀನಿನ ಮಾಲೀಕರು  ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ತಿಂಗಳ 11ರ ಬಳಿಕ ಮದುವೆ ಸಿದ್ಧತೆಗಳು  ಆರಂಭವಾಗಲಿವೆ ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

loading...