ನಾಳೆ ಬೆಲ್ಲದ ಬಾಗೇವಾಡಿಯಲ್ಲಿ ನೂತನ ಕ.ನ.ಪ ಶಾಖೆ ಉದ್ಘಾಟನೆ

0
126

ನಾಳೆ ಬೆಲ್ಲದ ಬಾಗೇವಾಡಿಯಲ್ಲಿ ನೂತನ ಕ.ನ.ಪ ಶಾಖೆ ಉದ್ಘಾಟನೆ

ಕನ್ನಡಮ್ಮ‌ ಸುದ್ದಿ – ಹುಕ್ಕೇರಿ :ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನಾಳೆ ಬೆಳಿಗ್ಗೆ 9 ಗಂಟೆಗೆ ಕರ್ನಾಟಕ ನವ ನಿರ್ಮಾಣ ಪಡೆಯ ನೂತನ ಶಾಖೆ ಉದ್ಘಾಟನೆ ಕಾರ್ಯಕ್ರಮವು ನಡೆಯಲಿದೆ.

ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಮುಗಳಖೋಡದ ಪೀಠಾದಿಪತಿಯಾದ ಡಾ. ಮುರುಘರಾಜೇಂದ್ರ ಸ್ವಾಮಿಜಿ ವಹಿಸಲಿದ್ದು , ಉದ್ಘಾಟಕರಾಗಿ ಕರ್ನಾಟಕ ನವ ನಿರ್ಮಾಣ ಪಡೆಯ ಸಂಸ್ಥಾಪಕ ಅಧ್ಯಕ್ಷರಾದ ರಾಜಕುಮಾರ್ ಎಂ ಟೋಪನ್ನವರ ಅವರು ಆಗಮಿಸಲಿದ್ದು , ಕರ್ನಾಟಕ ನವ ನಿರ್ಮಾಣ ಪಡೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅಧ್ಯಕ್ಷರಾದ ಅಶೋಕ ಪಾಟೀಲ, ರಾಯಬಾಗ ತಾಲೂಕಾ ಅಧ್ಯಕ್ಷರಾದ ಅರುಣ್ ಠಕ್ಕನ್ನವರ, ಮುಗಳಖೋಡ ಘಟಕದ ಅಧ್ಯಕ್ಷರಾದ ರಾಜಶೇಖರ ಶೇಗುಣಸಿ ಹಾಗೂ ಬೆಳಗಾವಿ ಜಿಲ್ಲೆಯ ಸುತ್ತ ಮುತ್ತಲಿನ ಕರ್ನಾಟಕ ನವ ನಿರ್ಮಾಣ ಪಡೆಯ ಅಧ್ಯಕ್ಷರು ಉಪಾಧ್ಯಕ್ಷ ಹಾಗೂ ಎಲ್ಲಾ ಪದಾದಿಕಾರಿಗಳು ಹಾಗೂ ಸಮಸ್ತ ಊರಿನ ಗುರು ಹಿರಿಯರು ಉಪಸ್ಥಿತರಿಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ .

loading...