ನಾಳೆ ರಾಜ್ಯ ಮಟ್ಟದ ವೈದ್ಯರ ದಿನಾಚರಣೆ

0
58

ಮುಂಡರಗಿ: ಭಾರತೀಯ ವೈದ್ಯಕೀಯ ಸಂಘ ರಾಜ್ಯ ಘಟಕದಿಂದ ಬೆಂಗಳೂರಿನ ಡಾ.ಬಸವರಾಜೇಂದ್ರ ಸಭಾಂಗಣದಲ್ಲಿ ಜು.೧ರಂದು ಬೆಳಗ್ಗೆ ೧೦:೩೦ ಗಂಟೆಗೆ ರಾಜ್ಯ ಮಟ್ಟದ ವೈದ್ಯರ ದಿನಾಚರಣೆ ಸಮಾರಂಭ ಜರುಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜಾಧ್ಯಕ್ಷ ಡಾ.ಅನ್ನದಾನಿ ಮೇಟಿ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಮತ್ತು ಕಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಭಾರತೀಯ ವೈದ್ಯಕೀಯ ಸಂಘದ ರಾಜಾಧ್ಯಕ್ಷ ಡಾ.ಅನ್ನದಾನಿ ಮೇಟಿ ಅಧ್ಯಕ್ಷತೆ ವಹಿಸಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಮ್, ಡಾ. ಎಚ್.ಎಸ್.ಸತೀಶ, ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಮಾರಂಭದಲ್ಲಿ ಬೆಂಗಳೂರಿನ ಡಾ.ಎಸ್.ಎಂ.ಸುರೇಶ್ವರಯ್ಯ, ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಡಾ.ಶಿವಕುಮಾರ ಲಕೋಳ, ಕಾರ್ಕ್ಳದ ಡಾ.ಸುರೇಶ ಕೊಡುವ, ಹುಬ್ಬಳ್ಳಿಯ ಡಾ.ಮಹೇಶ ತಪಶೆಟ್ಟಿ, ಗದಗಿನ ಡಾ.ಜಿ.ಎಂ.ಬೀಡನಾಳ, ಮಂಗಳೂರಿನ ಸಂತೋಷ ಸೋನ್ಸ್, ಬಾಗಲಕೋಟಿಯ ಡಾ.ಶಂಭುಲಿಂಗ ನಾರು, ಕೊಪ್ಪಳದ ಡಾ.ಕೆ.ಜಿ.ಕುಲಕರ್ಣಿ ಅವರನ್ನು ಸನ್ಮಾನಿ ಗೌರವಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ವೈದ್ಯರ ಕೊರತೆ ಇದೆ ಎಂದು ಸರ್ಕಾರ ಹೇಳುತ್ತದೆ. ಆದರೆ ÉÆರತೆ , ರಾಜ್ಯದಲ್ಲಿ ೮೫ಸಾವಿರ ವೈದ್ಯರು ಇದ್ದರೆ ದೇಶದಲ್ಲಿ ೧.೫೦ಲಕ್ಷ ವೈದ್ಯರಿದ್ದಾರೆ. ಸರ್ಕಾರ ವೈದ್ಯರ ಕೊರತೆ ಇದೆ ಎನ್ನುವುದನ್ನು ಬಿಟ್ಟು ನೇಮಕಾತಿ ಪ್ರಾಧಿಕಾರದ ಮೂಲಕ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು. ವೈದ್ಯರ ಮೇಲೆ ಹಲ್ಲೆ ನಡೆಸುವ ವ್ಯಕ್ತಿಗೆ ಕನಿಷ್ಠ ೭ರಿಂದ ೧೦ವರ್ಷ ಜೈಲು ಶಿಕ್ಷೆ ವಿಧಿಸುವಂತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

loading...