ನಾಳೆ ಸಂಕೇಶ್ವರದಲ್ಲಿ ಗಾಳಿ ಪಟ ಉತ್ಸವ

0
146

ನಾಳೆ ಸಂಕೇಶ್ವರದಲ್ಲಿ ಗಾಳಿ ಪಟ ಉತ್ಸವ
ಕನ್ನಡಮ್ಮ ಸುದ್ದಿ -ಸಂಕೇಶ್ವರ –ಇಂದು ಆಟ ಪಾಠ ಎಲ್ಲವೂ ಮೊಬೈಲ್ ನಲ್ಲಿಯೇ ನಡೆಯುತ್ತಿರುವ ಯುಗದಲ್ಲಿ ಮಕ್ಕಳಲ್ಲಿ ಗ್ರಾಮೀಣ ಆಟ ಮತ್ತು ಸಂಸ್ಕೃತಿಯನ್ನು ಪುನರ್ ಪರಿಚಯಿಸುವ ಕಾರ್ಯವಾಗಬೇಕಿದೆ. ಈ ಕಾರಣದಿಂದಲೇ ನಾನು ಸಣ್ಣ ಪ್ರಮಾಣದಲ್ಲಿ ಗಾಳಿಪಟ ಉತ್ಸವವನ್ನು ಆಯೋಜನೆ ಮಾಡಿದ್ದೇನೆ ಎಂದು ಆಯೋಜಕ ಉದ್ಯಮಿ ಪವನ ಕಣಗಲಿ ತಿಳಿಸಿದಾರೆ .

ನಾಳೆ ಜ‌.೧೫ ರಂದು ಪಟ್ಟಣದ ಕಣಗಲಿ ಲೆಔಟದ ಮೈದಾನದಲ್ಲಿ ಗಾಳಿ ಪಟ ಉತ್ಸವ ಜರುಗಲಿದ್ದು ,
ಇದು ಮುಗಿಲ ಮೇಲೆ ನಕ್ಷತ್ರಗಳ ನಕ್ಷೆ ಬರೆಯುವ ಗಾಳಿಪಟ ಹಾರಾಟಕ್ಕೆ ಸುಗ್ಗಿಕಾಲ ಮಾಗಿ ಚಳಿಯಲ್ಲಿ ಹದವಾಗಿ ಬೀಸುವ ಗಾಳಿಗೆ ಗಾಳಿಪಟಗಳೆಲ್ಲ ಆಕಾಶವನ್ನು ಆಳಹೊರಡುತ್ತವೆ. ತಂತ್ರಜ್ಞಾನ ಬೆಳೆದರೂ ಆಕಾಶದಲ್ಲಿ ಬಡವನಿಗೂ ಪುಟ್ಟ ಜಾಗ ಹಿಡಿದಿಡುವ ಗಾಳಿಪಟಗಳು ಬದುಕಿನ ಪಾಠ ಹೇಳುವ ಸಂಕೇತ. ಮಕ್ಕಳಲ್ಲಿ ಬಣ್ಣದ ಕನಸು ಅರಳಿಸಿ ಆಕಾಶದಲ್ಲಿ ಅಕ್ಷರ ಬರೆಯುವ ಸಾಹಸ ಬೆಳೆಸುವ ಶಕ್ತಿಯ ರೂಪಕ. ಇಂಥ ಗಾಳಿಪಟವನ್ನು ಸೂತ್ರ ಕಟ್ಟಿ ಆಕಾಶಕ್ಕೆ ಹಾರಿಸುವುದೇ ಎಲ್ಲಿಲ್ಲದ ಸಡಗರ.
ಇದು ಅಪ್ಪಟ ಮಕ್ಕಳ ಸ್ಪರ್ಧೆ. ೩ ರಿಂದ ೯ ವರ್ಷದೊಳಗಿನ ಮಕ್ಕಳಿಗೆ ಪತಂಗ್ ತಯಾರಿಸುವ ಸ್ಪರ್ಧೆಯಾದರೆ ,೧೦ ರಿಂದ ೧೮ ರ ವರೆಗಿನ ವಯಸ್ಸಿನ ಮಕ್ಕಳಿಗೆ ಹಾರಿಸುವ ಸ್ಪರ್ಧೆ ಇದೆ. ಆಕರ್ಷಕ ಬಹುಮಾನವೂ ಇದೆ ಎಂದು ಪವಣ ಕಣಗಲಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

loading...