ನಾವು ಉತ್ತರ ಕರ್ನಾಟಕದ ಜೊತೆಗಿದ್ದೆÃವೆ: ನಿಖಿಲ್ ಕುಮಾರಸ್ವಾಮಿ

0
17

ಗುಳೇದಗುಡ್ಡ: ಪ್ರವಾಹದಿಂದಾಗಿ ಉತ್ತರ ಕರ್ನಾಟದ ಬಹುತೇಕ ಹಳ್ಳಿಗಳು ನೀರಿನಲ್ಲಿ ಮುಳುಗಿವೆ. ಮನೆ, ಹೊಲಗಳಲ್ಲಿ ನೀರು ಹೊಕ್ಕು ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಇದರಿಂದ ನದಿ ದಡದಲ್ಲಿನ ಜನರ ಗೋಳು ಹೇಳತೀರದಾಗಿದೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಕಾರ್ಯಕರ್ತರು ಉತ್ತರ ಕನಾಟಕದ ಜತೆಗಿದ್ದೆÃವೆ. ಸಂತ್ರಸ್ತರ ನೋವಿಗೆ ತಾವೂ ಸದಾ ಸ್ಪಂದಿಸುವುದಾಗಿ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಅವರು ಬಾದಾಮಿ ತಾಲೂಕಿನ ಬಿ.ಎನ್.ಜಾಲಿಹಾಳ, ಕಿತ್ತಲಿ, ಬಾಚನಗುಡ್ಡ, ಪಟ್ಟದಕಲ್ಲ ಈ ಪ್ರವಾಹದಿಂದ ತತ್ತರಿಸಿದ ಗ್ರಾಮಗಳಿಗೆ ತೆರಳಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ನಂತರ ನಗರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಜೆಡಿಎಸ್ ಯುವ ಘಟಕದಿಂದ ಸುಮಾರು ೫ ಟ್ರಕ್ ವಿವಿಧ ಸಾಮಗ್ರಿಗಳನ್ನು ಖರೀದಿಸಿ ಸಂತ್ರಸ್ಥರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೆÃವೆ. ರಾಜ್ಯ ಸರ್ಕಾರ ಸಂತ್ರಸ್ತರ ನೆರವಿಗೆ ಬರಬೇಕು. ಉತ್ತರ ಕರ್ನಾಟಕದಲ್ಲಿ ಊಹಿಸಲು ಸಾಧ್ಯವಾಗಷ್ಟು ನಷ್ಟ ಸಂಭವಿಸಿದೆ. ರೈತಾಪಿ ಬಂಧುಗಳು ಪ್ರವಾಹದಿಂದ ಕಂಗಾಲಾಗಿದ್ದಾರೆ. ಸಾಕಷ್ಟು ಸಾವು ನೋವು ಸಂಭವಿಸಿದೆ. ಸರ್ಕಾರ ಇದನ್ನು ರಾಷ್ಟಿçÃಯ ವಿಪತ್ತು ಎಂದು ಘೋಷಿಸಬೇಕು ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ, ಚಂದ್ರಕಾಂತ ಶೇಖಾ, ಮಹೇಶ ಬಿಜಾಪುರ, ಶರಣಗೌಡ ಕಂದಕೂರ, ಅನ್ವರಖಾನ ಪಠಾಣ, ಸಚಿನ ರಾಂಪೂರ, ಟಿ.ಎನ್.ಬೆನಕಟ್ಟಿ, ಉಮೇಶ ಹುನಗುಂದ, ರಾಘು ಬಳಿಗೇರ ಮತ್ತಿತರರು ಇದ್ದರು.

loading...