ನಿಜ ಶರಣ ಅಂಬಿಗರ ಚೌಡಯ್ಯನವರ ಸ್ಮರಣೋತ್ಸವ

0
47

ಧಾರವಾಡ : ಕಾಯಕದಲ್ಲಿ ಶೃದ್ದೆ ಹಾಗೂ ಭಕ್ತಿಯನ್ನಿಟ್ಟುಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ ಕಾಯಕ ನಮಗೆಲ್ಲರಿಗೂ ಮಾದರಿಯಾಗಿದೆ ಎಂದು ಹಿರಿಯ ಗ್ರಂಥಪಾಲಕ ಡಾ.ಎಸ್.ಆರ್.ಗುಂಜಾಳ ಹೇಳಿದರು.
ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಬಸವತತ್ವ ಪ್ರಸಾರ ಸಂಸ್ಥೆ ಏರ್ಪಡಿಸಿದ ನಿಜ ಶರಣ ಅಂಬಿಗರ ಚೌಡಯ್ಯನವರ ಸ್ಮರಣೋತ್ಸವ ಸಮಾರಂಭದಲ್ಲಿ ಮಾತನಾಡಿ, 12 ನೇ ಶತಮಾನದ ನಂತರ ವಚನ ಬಂಢಾರವನ್ನು ಸಂರಕ್ಷಣೆ ಮಾಡುವ ಕೆಲಸವಾಗಲಿಲ್ಲ ಅದಕ್ಕಾಗಿ ಆಯ್ದ ಶರಣರ ವಚನಗಳು ಮಾತ್ರ ನಮಗೆ ಲಭ್ಯವಾದವು. ಕೈಗೆಟುಕಿದ ವಚನಗಳನ್ನು ಕ್ರೂಢಿಕರಿಸಿ ಅವುಗಳನ್ನು ತರ್ಜುಮೆಗೊಳಿಸಿ ಸರ್ವರೂ ಓದಿ ತಿಳಿದುಕೊಳ್ಳುವಂತೆ ಮಾಡಿದ ವಚನ ಪಿತಾಮಹ ಹಳಕಟ್ಟಿಯವರು ಸದಾ ಸ್ಮರಣೀಯರು ಎಂದರು.
ವಚನಗಳನ್ನು ಅವರ ವಿಚಾರಧಾರೆಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ ಶಿವಾನುಭವ ಪತ್ರಿಕೆ ಹೆಚ್ಚು ಕೆಲಸ ಮಾಡಿದೆ. ವಚನಗಳ ಸಂಶೋಧನೆ ಆಗಬೇಕು ಅವುಗಳನ್ನು ಸಂರಕ್ಷಣೆ ಮಾಡಿ ಮುಂಬರುವ ದಿನದಲ್ಲಿ ಮಕ್ಕಳಿಗೆ ತಿಳಿಸಿಕೊಟ್ಟಾಗ ಮಾನವೀಯ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ವಚನಗಳು ಬದುಕಿನ ಮಾರ್ಗದರ್ಶಕಗಳು ಅವುಗಳನ್ನು ಓದುವುದರ ಜೊತೆಗೆ ಅರ್ತೈಸಿಕೊಳ್ಳುವುದು ಅಳವಡಿಸಿಕೊಳ್ಳುವುದು ಬಹು ಮುಖ್ಯ ಎಂದರು.
ಡಾ.ಬಿ.ಪಿ.ಸಿದ್ದಾಶ್ರಮ ಉಪನ್ಯಾಸ ನೀಡಿದರು. ಡಾ.ಶಿವಶಂಕರ ಪೋಳ ಅಧ್ಯಕ್ಷತೆವಹಿಸಿದ್ದರು ಚನ್ನಪ್ಪ ಬಂಡಿ, ನಿಂಗಣ್ಣ ಕುಂಠಿ ಉಪಸ್ಥಿತರಿದ್ದರು. ಕೆ.ಎಂ.ಕೊಪ್ಪದ ನಿರೂಪಿಸಿದರು. ಇಂದಿರಾ ಹುದ್ದಾರ ಸ್ವಾಗತಿಸಿದರು. ಎಸ್.ಎಂ.ಕಲಿವಾಳ ವಂದಿಸಿದರು.

loading...

LEAVE A REPLY

Please enter your comment!
Please enter your name here