ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ

0
12

ವದತ್ತಿ: ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ, ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಉತ್ತಮ ಆರೋಗ್ಯಕ್ಕಾಗಿ ಕ್ರಿÃಡೆ ಅಗತ್ಯವಾಗಿದೆ, ವಿದ್ಯಾರ್ಥಿಗಳು ಕ್ರಿÃಡೆಯಲ್ಲಿ ಭಾಗವಹಿಸಬೇಕು ಎಂದು ಬಸವರಾಜ ಕಾರದಗಿ ವಿದ್ಯಾರ್ಥಿಗಳಿಗೆ ಕವಿಮಾತು ಹೇಳಿದರು.
ಪಟ್ಟಣದ ತಾಲೂಕಾ ಕ್ರಿÃಡಾಂಗಣದಲ್ಲಿ ಗುರುವಾರ ವೀರ ರಾಣಿ ಚನ್ನಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ರಾಮಾಪುರ ಸೈಟ್ ವತಿಯಿಂದ ವಲಯ ಮಟ್ಟದ ಪ್ರೌಡ ಶಾಲಾ ಕ್ರಿÃಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಫ್.ಯು.ಪೂಜಾರ ಈಗಿನ ವಿದ್ಯಾರ್ಥಿಗಳು ಸಾಧಕರಾಗಬೇಕು. ಸಾಧನೆ ಎಂಬುವದು ಎಲ್ಲ ವಿದ್ಯಾರ್ಥಿಗಳಲ್ಲಿಯೂ ಸಹ ಇರಬೇಕು ಎಂದರು.
ವೇದಿಕೆಯ ಮೇಲೆ ಪುರಸಭೆ ಸದಸ್ಯರಾದ ಜಿ.ಎಸ್.ಪಟ್ಟಣಶೆಟ್ಟಿ, ಎ.ಪಿ.ಮುನವಳ್ಳಿ, ಶಿಕ್ಷಕ ಸಂಘದ ಅಧ್ಯಕ್ಷ ಎಸ್.ವಿ.ಬೆಳವಡಿ, ಪಿ.ಎಸ್.ಶಿಂಧೆ, ಎಮ್.ಬಿ.ಕಂಬಾರ, ಆರ್.ಆಯ್.ಸಿದ್ಲಿಂಗನ್ನವರ ,ಬಿ.ಡಿ.ಕುಳ್ಳರ ಉಪಸ್ಥಿತರಿದ್ದರು.
ಶಾಲೆಯ ಪ್ರಧಾನ ಗುರುಗಳಾದ ಎಮ್.ಎಸ್.ದೊಡಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಶಿಕ್ಷಕಿ ಪಿ.ಸಿ.ವಕ್ಕುಂದ ಕಾರ್ಯಕ್ರಮ ನಿರೂಪಣೆ ಮಾಡಿದರು. ಬಿ.ಡಿ.ಕುಳ್ಳುರ ವಂದರ್ಣಾಪಣೆ ಮಾಡಿದರು.

loading...