ನಿರಾಣಿ ಬಂಧುಗಳು ಸಮಾಜದ ಏಳಿಗಾಗಿ ದುಡಿಯುತ್ತಿರುವುದು ಶ್ಲಾಘನೀಯ: ಪಿ.ಸಿ.ಗದ್ದಿಗೌಡರ

0
38

ಕನ್ನಡಮ್ಮ ಸುದ್ದಿ-ಕೆರೂರ: ನಿರಾಣಿ ಬಂಧುಗಳು ಕಷ್ಟ ಪಟ್ಟು ದುಡಿದ ಹಣವನ್ನು ಸಮಾಜದ ಏಳಿಗೆಗಾಗಿ, ಸುಧಾರಣೆಗಾಗಿ ವಿನಿಯೋಗಿಸುತ್ತಿರುವುದು ಶ್ಲಾಘನೀಯವೆಂದು ಲೋಕಸಭಾ ಸದಸ್ಯ ಪಿ.ಸಿ ಗದ್ದಿಗೌಡರ ಹೇಳಿದರು. ಅವರು ಸೋಮವಾರ ಕೆರೂರ ಪಟ್ಟಣದ ಎಮ್.ಹೆಚ್.ಮೆಣಸಗಿ ಕಾಲೇಜು ಮೈದಾನದಲ್ಲಿ ಎಂ.ಆರ್ ಎನ್( ನಿರಾಣಿ) ಫೌಂಡೇಶನ್, ಆಳ್ವಾಸ್ ನುಡಿಸಿರಿ ವಿರಾಸತ್ ಘಟಕದ ಆಶ್ರಯದಲ್ಲಿ `ಆಳ್ವಾಸ್ ಸಾಂಸ್ಕøತಿಕ ವೈಭವವನ್ನು ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ತಪಾಸಣೆ, ಉದ್ಯೋಗದ ತರಬೇತಿ, ಉದ್ಯೋಗದ ವ್ಯವಸ್ಥೆ, ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಇಂತಹ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನಪರ ಕಾಳಜಿಯನ್ನು ಮೆರೆಯುತ್ತಿದ್ದಾರೆಂದರು.
ಸಾನಿಧ್ಯವಹಿಸಿದ್ದ ಕೆರೂರ ಚರಂತಿಮಠದ ಡಾ,ಶಿವಕುಮಾರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಉದ್ಯೋಗ ಸೃಷ್ಠಿ, ವೈದ್ಯಕೀಯ ಚಿಕಿತ್ಸೆ, ಪದವೀಧÀರರಿಗೆ ಉಚಿತವಾಗಿ ಆಯ್‍ಎಎಸ್, ಐಪಿಎಸ್, ಕೆಎಎಸ್, ಸೇರಿದಂತೆ ತಾಂತ್ರಿಕ ತರಬೇತಿಯಂಥ ಹಲವಾರು ಯೋಜನೆಗಳನ್ನು ಒದಗಿಸುತ್ತಾ, ಈಗ ಬಾಗಲಕೋಟ ಜಿಲ್ಲೆಯ ಬೀಳಗಿ, ಜಮಖಂಡಿ, ಕೆರೂರ ಪಟ್ಟಣಗಳಲ್ಲಿ ಆಳ್ವಾಸ ಸುಡಿಸಿರಿ ಹಮ್ಮಿಕೊಂಡು ನಾಡಿನ ಸಂಸ್ಕತಿ ಪಂರಪರೆ ನೆನಪಿಸಿಕೊಡುವ ಮಹತ್ಕಾರ್ಯ ಮಾಡುತ್ತಿರುವ ನಿರಾಣಿ ಪೌಂಡೇಷನ್ ಹಾಗೂ ನಿರಾಣಿ ಸಹೋದರರ ಕಾರ್ಯ ಶ್ಲಾಘನೀಯವೆಂದರು.

ವೇದಿಕೆಯಲ್ಲಿ ಕಗಲಗೊಂಬದ ಕೆರೆಮಠದ ಸ್ವರೂಪಾನಂದ ಶ್ರೀಗಳು, ಮಳೆರಾಜೇಂದ್ರ ಶ್ರೀಗಳು ಮಾಜಿ ಶಾಸಕರಾದ ಎಮ್.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತರ, ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಮಹಾಂತೇಶ್ ಮಮದಾಪೂರ, ವಕೀಲ ರಾಜು ಕಕರಡ್ಡಿ, ಜಿ.ಪಂ ಸದಸ್ಯ ಹೂವಪ್ಪ ರಾಠೋಡ, ಮಹಾಂತೇಶ್ ಮೆಣಸಗಿ, ರಾಮಚಂದ್ರ ಯಡಹಳ್ಳಿ, ರವಿ ಪಾಟೀಲ, ಎ.ಕೆ.ದೇಸಾಯಿ, ಪಿ.ಆರ್.ಗೌಡರ್, ಸಂಗಪ್ಪ ಬೀಳಗಿ, ಸಿದ್ದು ಕೊಣ್ಣೂರ, ಮಲ್ಲು ಕಂಟೆಪ್ಪನವರ, ಕಿರಣ ಬಡಿಗೇರ ಮತ್ತಿತರರಿದ್ದರು.

loading...