ನಿವೃತ್ತಿಯಾದ ಪೋಲಿಸ್‌ ಅಧಿಕಾರಿಗಳಿಗೆ ಸನ್ಮಾನ

0
25

ವಿಜಯಪುರ : ನಗರದ ಗ್ರಾಮೀಣ ಪೋಲಿಸ್‌ ಠಾಣೆಯಲ್ಲಿ ಸೇವೆಯಿಂದ ನಿವೃತ್ತಿಯಾದ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಎಎಸ್‌ಐ ಆಗಿ ಕಾರ್ಯನಿರ್ವಹಿಸಿದ ವೈ.ಆರ್‌. ಭೋಸಲೆ, ಸಿ.ಎಸ್‌. ಅವರಾದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಮೀಣ ಪೊಲೀಸ್‌ ಠಾಣೆಯ ಸಿಪಿಐ ಶಂಕರಗೌಡ ಬಸನಗೌಡ ಮಾತನಾಡಿ ಪೋಲಿಸ್‌ ಇಲಾಖೆಯಲ್ಲಿ ತಮ್ಮ ಸೇವಾ ಅವಧಿಯಲ್ಲಿ ಜನರೊಂದಿಗೆ ಆತ್ಮೀಯವಾಗಿ ಬೆರೆತು ಪ್ರಗತಿಪರ ಸುರಕ್ಷಿತ ಸಮಾಜ ನಿರ್ಮಾಣ ಮಾಡುವುದೇ ಪೋಲಿಸ್‌ರ ಪ್ರಥಮ ಅದ್ಯತೆಯಾಗಬೇಕು. ತಮ್ಮ ಸರ್ಕಾರಿ ವೃತ್ತಿ ಜೀನದಲ್ಲಿ ಪಾರದರ್ಶಕತೆ ಕ್ರೀಯಾಶೀಲತೆಯೊಂದಿಗೆ ದಕ್ಷತೆ, ಪ್ರಾಮಾಣಿಕತೆಯನ್ನು ರೂಡಿಸಿಕೊಂಡು ಸಾರ್ವಜನಿಕರಿಗೆ ನಮ್ಮಿಂದ ಯಾವುದೇ ಅಡತಡೆ ತೊಂದರೆಯಾಗದಂತೆ ಜನರನ್ನು ಸಮರ್ಪಕವಾಗಿ ವಿಶ್ವಸಕ್ಕೆ ತೆಗೆದುಕೊಂಡು ಅವರ ಸಲಹೆ ಸೂಚನೆಗಳನ್ನು ಸಕರಾತ್ಮಕವಾಗಿ ಆಲಿಸಿ ಸಮಾಜದಲ್ಲಿ ಆಗತಕ್ಕಂತಹ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಮತ್ತು ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿರುವುದು ಪೋಲಿಸ್‌ರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದರು. ಸೇವಾ ನಿವೃತ್ತಿ ಹೊಂದಿದ ಅಧಿಕಾರಿಗಳ ಜೀವನ ಸುಖ;ಕರವಾಗಲಿ ಎಂದು ಹಾರೈಸಿದರು.
ಗ್ರಾಮೀಣ ಪೋಲಿಸ್‌ ಠಾಣೆಯ ಪಿಎಸ್‌ಐ ಸುರೇಶ ಗಡ್ಡಿ ಮಾತನಾಡಿದರು. ಆಹೇರಿ ಬಸವ ಸಾಹಿತ್ಯ ವೇದಿಕೆ ಅಧ್ಯಕ್ಷ ಬಂಡೆಪ್ಪ ತೇಲಿ, ಡಾ.ಬಿ.ಎಚ್‌. ಕನ್ನೂರ, ಪ್ರೊ. ಶರಣಗೌಡ ಪಾಟೀಲ, ಮಹಿಳಾ ಎ.ಎಸ್‌.ಆಯ್‌. ಶ್ರೀಮತಿ ಆರ್‌.ಎ.ದಿನ್ನಿ, ಆರ್‌.ಬಿ. ದ್ಯಾಪೂರ, ವಿ.ಎನ್‌. ಪಾಟೀಲ, ಎಮ್‌.ಎಮ್‌. ಮುಜಾವರ, ಜಿ.ಆರ್‌. ಹಡಪದ, ಪಿ.ಆರ್‌. ಬಿರಾದಾರ, ಜೆ.ಎ. ವಾಘಮೋರೆ, ಎಸ್‌.ಎಸ್‌. ಭತಗುಣಕಿ, ಎಂ.ಸಿ. ಮೇತ್ರಿ, ಎನ್‌.ಎ. ಉಪ್ಪಾರ, ಎಸ್‌.ಎ. ಪೂಜಾರಿ, ಎಮ್‌.ಎಸ್‌. ಕಟ್ಟಿಮನಿ, ಎ.ಎಸ್‌. ರಂಗಪ್ಪಗೋಳ, ಎಸ್‌.ಪಿ. ಡಿಂಗಿ, ವಾಣಿಶ್ರೀ ಹೂಗಾರ, ಎಸ್‌.ಬಿ. ಕೋಟ್ಯಾಳ, ಎಸ್‌.ಬಿ. ತೇಲಗಾಂವ, ಎ.ಬಿ. ನಾವಿ. ಬಿ.ಎಚ್‌. ಕೋಟ್ಯಾಳ, ಎ.ಎಸ್‌. ಕಂಬಾರ, ಎಸ್‌.ವಾಯ್‌. ದಳವಾಯಿ, ಎಸ್‌.ಕೆ. ಕುಡಚಿ, ಎಸ್‌.ಆರ್‌. ಬಗಲಿ, ಜಿ.ಎಸ್‌. ಬಿರಾದಾರ, ಪಿ.ಎಸ್‌. ಭತಗುಣಕಜಿ, ಎಸ್‌.ಎಚ್‌. ಡೊಣಗಿ, ಎಸ್‌.ಆರ್‌. ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

loading...