ನೀರಿಗಾಗಿ ಆರ್ ಸಿ ಯು ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

0
10

ಬೆಳಗಾವಿ
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕುಡಿಯಲು ಹನಿ ನೀರಿಲ್ಲ, ವಿಧ್ಯಾರ್ಥಿ ವಸತಿ ನಿಲಯಗಳಲ್ಲಿ ಸ್ನಾನಕ್ಕೂ ಮಾಡಲು ಶೌಚಾಲಯಗಳಲ್ಲಿ ನೀರು ಬರುತ್ತಿಲ್ಲ. ಆದರೆ ವಿಶ್ವವಿದ್ಯಾಲಯ ಕುಲಪತಿಗಳು, ಕುಲಸಚಿವರು ಮತ್ತು ಸಿಬ್ಬಂದಿಗಳು ಮಾತ್ರ ಮಿನರಲ್ ನೀರು ಕುಡಿದು ಅರಾಮಾಗಿದ್ದಾರೆ. ನೀರಿಗಾಗಿ ಪರದಾಡಿ ವಸತಿ ನಿಲಯದ ವಾರ್ಡನ್ ಗಳಗೆ ಹಲವು ಬಾರಿ ಹೇಳಿ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಕಂಗೆಟ್ಟ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವಿಧ್ಯಾರ್ಥಿಗಳು ರೊಚ್ಚಿಗೆದ್ದು ವಿಶ್ವವಿದ್ಯಾಲಯ ಮುಖ್ಯ ದ್ವಾರದ ಮುಂದೆ ನಿಂತು ಸ್ನಾನ ಮಾಡಿ, ವಿಶ್ವವಿದ್ಯಾಲಯ ಮುಖ್ಯ ದ್ವಾರವನ್ನು ಮುಚ್ಚಿ ಪ್ರತಿಭಟನೆ ಮಾಡಿದರು.

ಹಲವು ದಿನಗಳಿಂದ ವಿಶ್ವವಿದ್ಯಾಲಯದಲ್ಲಿ ವಿಧ್ಯಾರ್ಥಿಗಳಿಗೆ ಕುಡಿಯಲು ನೀರಿಲ್ಲ. ಇದ್ದರೂ ಶುದ್ಧವಿರುವುದಿಲ್ಲ. ಸ್ನಾನಕ್ಕಾಗಿ ದಿನಂಪ್ರತಿ ಪರದಾಟ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ನಾವು ನೀರಿಗಾಗಿ ಪರದಾಡುತ್ತಿರುವುದು ನಮ್ಮ ದುರ್ದೈವ ಎಂದು ಆರ್ ಸಿ ಯು ವಿಧ್ಯಾರ್ಥಿಗಳು ತಮ್ಮ ಗೊಳನ್ನು ಹೇಳಿಕೊಂಡರು.

loading...