ನೀರಿನ ಟ್ಯಾಂಕ್ ನಿರ್ಮಾಣ ವಿರೋಧಿಸಿ ಸ್ಥಳೀಯರಿಂದ ಮನವಿ

0
15

ನೀರಿನ ಟ್ಯಾಂಕ್ ನಿರ್ಮಾಣ ವಿರೋಧಿಸಿ ಸ್ಥಳೀಯರಿಂದ ಮನವಿ
ಮೂಡಲಗಿ: ಸ್ಥಳೀಯ ಕೆಇಬಿ ಪ್ಲಾಟ್ ಹನುಮ ದೇವರ ಗುಡಿಯ ಆವರಣದಲ್ಲಿ ಹೊಸದಾಗಿ ಓವರ್ ಹೆಡ್ ನೀರಿನ ಟ್ಯಾಂಕ್ ನಿರ್ಮಾಣ ಮಾಡಬಾರದು ಎಂದು ಆಗ್ರಹಿಸಿ ೧೭ನೇ ವಾರ್ಡಿನ ಕೆಇಬಿ ಪ್ಲಾಟ್ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ಇಲ್ಲಿಯ ಹನುಮಾನ ದೇವರ ಗುಡಿಯ ಆವರಣ ಮತ್ತು ಹಳೆಯ ಓವರ್ ಹೆಡ್ ನೀರಿನ ಟ್ಯಾಂಕ್ ಮಧ್ಯದಲ್ಲಿ ಸ್ವಲ್ಪ ಖಾಲಿ ಜಾಗವಿದ್ದು, ಈ ಜಾಗ ಕೆಇಬಿ ಪ್ಲಾಟ್ ಜನರಿಗೆ ಮತ್ತು ಸುತ್ತಮುತ್ತಲಿನ ತೋಟಗಳ ಸಾರ್ವಜನಿಕರಿಗೆ, ಬಡವರಿಗೆ ಚಿಕ್ಕ ಪುಟ್ಟ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೆಇಬಿ ಪ್ಲಾಟ್ ಸಾರ್ವಜನಿಕರು ಈ ಖಾಲಿ ಜಾಗದಲ್ಲಿ ಈಗಾಗಲೇ ಚಿಕ್ಕ ಸಮುದಾಯ ಭವನ ನಿರ್ಮಾಣ ಮಾಡಲು ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಈ ಜಾಗದಲ್ಲೆÃ ಪುರಸಭೆ ಓವರ್ ಹೆಡ್ ನೀರಿನ ಟ್ಯಾಂಕ್ ನಿರ್ಮಿಸಲು ಮುಂದಾಗಿದೆ. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೇ ಹೋದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತಿದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಪುರಸಭೆ ಈಗ ನಿರ್ಮಾಣ ಮಾಡಬೇಕೆಂದಿರುವ ನಗರೋತ್ಥಾನದ ಯೋಜನೆಯ ಅಡಿಯಲ್ಲಿನ ೫ ಲಕ್ಷ ಲೀಟರಿನ ನೀರು ಸಾಮರ್ಥ್ಯವುಳ್ಳ ಓವರ ಹೆಡ್ ನೀರಿನ ಟ್ಯಾಂಕನ್ನು ಪುರಸಭೆ ವ್ಯಾಪ್ತಿಯಲ್ಲಿರುವ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಕಾಯ್ದಿರಿಸಿದ ಜಾಗದಲ್ಲಿ ನಿರ್ಮಾಣ ಮಾಡಲು ಇಲ್ಲಿನ ನಿವಾಸಿಗಳದ್ದು ಯಾವುದೇ ರೀತಿ ತಕರಾರು ಇಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ರಮೇಶ ಪಾಟೀಲ, ಸುಭಾಸ ಬನ್ನೂರ, ಶ್ರೀಶೈಲ ಜೈನಾಪುರ, ಬಸವರಾಜ ಹುಚ್ಚನವರ, ಯಲ್ಲಪ್ಪ ಸಣ್ಣಕ್ಕಿ, ಈರಪ್ಪ ಹುಣಶ್ಯಾಳ, ಲಕ್ಷ್ಮಣ ಅರಮನಿ, ಹಣಮಂತ ಹೊಸಮನಿ, ಮಾರುತಿ ನಾವಿ, ಲಾಲಸಾಬ ಮಿರ್ಜಿ, ಈರಪ್ಪ ಮಾಲಗಾರ, ಆನಂದ ಗಸ್ತಿ, ದುಂಡಪ್ಪ ಮಾನಕಪ್ಪಗೋಳ, ಯಮನಪ್ಪ ಹರಿಜನ ಇದ್ದರು.

loading...