ನೀರಿನ ಪಂಪಿಗ್ ಸ್ಟೆÃಷನ್‌ಗೆ ಶಾಸಕ ಭೇಟಿ

0
2

ಬೆಳಗಾವಿ: ನಗರದಲ್ಲಿ ಪ್ರವಾಹದಿಂದಾಗಿ ನೀರಿನ ರಬಸಕ್ಕೆ ಹಿಂಡಲಗಾ ಗ್ರಾಮದ ಹತ್ತಿರವಿರುವ ಪಂಪ್ ಸ್ಟೆÃಷನ್ ಹಾಳಾಗಿರುವುದನ್ನು ಶಾಸಕ ಅನಿಲ ಬೆನಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಡಿಯುವ ನೀರಿನಲ್ಲಿ ಸಮಸ್ಯೆ ಉದ್ಭವಾಗಿರುವ ಹಿನ್ನಲೆ ಜನರ ಸಮಸ್ಯೆಯನ್ನು ಅರಿತ ಶಾಸಕರು ಮಂಗಳವಾರ ಪರಿಶೀಲನೆ ಮಾಡಿದರು.ಬಳಿಕ ಮಾತನಾಡಿದ ಅವರು, ನೀರಿನಿಂದ ಜಲಾವೃತಗೊಂಡು ಕೆಲ ಉಪಕರ್ಣಗಳು ಹಾಳಾಗಿವೆ. ಮುಂಬೈ ಎಂಜಿನಿಯರ್ ತಂಡ ಆಗಮಿಸಿ ಕಾಮಗಾರಿಯನ್ನು ಕೈಗೊಂಡಿದ್ದು ಇನ್ನೆÃರಡು ದಿನಗಳಲ್ಲಿ ನೀರು ಬಿಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜಲ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತಕರು ಚಂದ್ರಪ್ಪಾ, ವೀರಭದ್ರ ಪತ್ತಾರ, ರಾಹುಲ ಮುಚ್ಚಂಡಿ, ನಾಗೇಶ ಲಂಗರಖಾಂಡೆ, ಶಂಕರ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.

loading...