ನೀರು-ಉದ್ಯೊÃಗ, ಜಾನುವಾರುಗಳಿಗೆ ಮೇವು ನೀಡಲು ಆಗ್ರಹ

0
14

ಗದಗ: ರಾಜ್ಯದಲ್ಲಿ ಬರಗಾಲದಿಂದಾಗಿ ಜನತೆಗೆ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ, ಜಾನುವಾರುಗಳಿಗೆ ಮೇವು ಇಲ್ಲದೆ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಈ ಕುರಿತು ಜಿಲ್ಲಾಡಳಿತ, ರಾಜ್ಯ ಸರಕಾರ ಅಗತ್ಯ ತುರ್ತು ಕ್ರಮ ಜರುಗಿಸಬೇಕೆಂದು ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯು ಗದಗ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ. ವೇದಿಕೆಯ ರಾಜ್ಯ ರಾಜ್ಯ ಅಧ್ಯಕ್ಷ ಪಿ.ಸುಬ್ರಮಣ್ಯಂ ರೆಡ್ಡಿ ಅವರ ನೇತೃತ್ವದಲ್ಲಿ ಶನಿವಾರ ವೇದಿಕೆಯ ಪದಾಧಿಕಾರಿಗಳ ನಿಯೋಗ ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ಈ ಕುರಿತು ಮನವಿ ಸಲ್ಲಿಸಿತು.
ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆÃಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯನ್ನು ಒಳಗೊಂಡು ಸಚಿವರು, ಶಾಸಕರು ತಮ್ಮ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ರೇಸಾರ್ಟ್ ರಾಜಕಾರಣದಲ್ಲಿ ಮುಳುಗಿದ್ದಾರೆ. ರಾಜ್ಯದಲ್ಲಿ ಬರಗಾಲದಿಂದಾಗಿ ಜನ-ಜಾನುವಾರುಗಳು ತೀವ್ರ ತೊಂದರೆ ಪಡುವಂತಾಗಿದ್ದು ಈ ಬಗ್ಗೆ ಗಂಭೀರ ಚಿಂತನೆ ಇಲ್ಲದಾಗಿದೆ. ತಮ್ಮನ್ನು ಚುನಾಯಿಸಿ ಕಳುಹಿಸಿ ಕ್ಷೆÃತ್ರದ ಅಭಿವೃದ್ದಿಯ ಕಡೆ ಗಮನ ಇಲ್ಲದಂತಾಗಿದೆ.

ವಿಶೇಷವಾಗಿ ಉತ್ತರಕರ್ನಾಟಕ ಜನತೆ ಬರಗಾಲದಿಂದಾಗಿ ತೀವ್ರ ಸಂಕಷ್ಟವನ್ನು ಅನುಭವಿಸುವಂತಾಗಿದೆ ಕಾರಣ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೊÃಗ ಖಾತ್ರಿ ಯೋಜನೆಯಲ್ಲಿ ಉದ್ಯೊÃಗ ಸೃಷ್ಠಿಸಬೇಕು, ಜಾನುವಾರುಗಳಿಗೆ ನೀರು ಮತ್ತು ಮೇವು ವ್ಯವಸ್ಥೆ ಮಾಡಬೇಕು. ಕೂಲಿಕಾರರು, ಕೃಷಿ ಕಾರ್ಮಿಕರು ಬೇರೆ ಜಿಲ್ಲೆ ರಾಜ್ಯಕ್ಕೆ ಗುಳೆ ಹೋಗುವದನ್ನು ತಪ್ಪಿಸಿ ಇಲ್ಲಿಯೇ ಉದ್ಯೊÃಗ ನೀಡಬೇಕು ಈ ಕುರಿತು ಗದಗ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ, ಪ್ರತಿಭಟನೆ ಕೈಗೊಳ್ಳಲಾಗುವದು ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.
ಮನವಿ ಸ್ವಿÃಕರಿಸಿದ ಗದಗ ಜಿಲ್ಲಾಧಿಕಾರಿಗಳ ಪ್ರತಿನಿಧಿ ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದವರಿಗೆ ಕಳುಹಿಸುವದಾಗಿ ಹೇಳಿದರು.

ಶಿವಾನಂದ ಪಲ್ಲೆÃದ, ಶಿವಾನಂದಯ್ಯ ಹಿರೇಮಠ, ಯು.ಆರ್.ಭೂಸನೂರಮಠ, ಶರಣು ಚವಡಿ, ಎಚ್.ಸಿ.ಹುಚ್ಚಣ್ಣವರ, ಡಾ.ಮಹಾಂತೇಶ ಸಜ್ಜನರ, ಪ್ರಭು ಹೆಬಸೂರ, ಜಿ.ವ್ಹಿ.ಬೊಮ್ಮಪ್ಪನವರ, ಶಿವಕುಮಾರ ರಾಮನಕೊಪ್ಪ, ಕೌಶಲ್ಯಬಾಯಿ ಬದಿ ಇದ್ದರು.

loading...