ನೀರು ಪಾಲಾದ ಸುರ್ಯಕಾಂತಿ ಬೀಜಗಳು

0
60

ನಾಲತವಾಡ: ಗುರುವಾರ ಸುರಿದ ಮಳೆ ಅರ್ಭಟಕ್ಕೆ ರೈತರ ಸುಮಾರು 150 ಕ್ಕೂ ಹೆಚ್ಚು ಸೂರ್ಯಕಾಂತಿ ಬೀಜ ಸಂಗ್ರಹದ ಗುಂಪುಗಳು ಮಳೆ ನೀರಿನೊಂದಿಗೆ ಕೊಚ್ಚಿ ಹರಿದಾಡಿದ ಘಟನೆ ಇಲ್ಲಿಯ ಎಪಿಎಂಸಿ ಆವರಣದಲ್ಲಿ ಟೆಂಡರ್‌ ವೇಳೆ ನೆಡೆದಿದೆ.
ಬೆಳಿಗ್ಗೆ ಸ್ಥಳಿಯ ಎಪಿಎಂಸಿ ಮಾರುಕಟ್ಟೆಗೆ ಪಟ್ಟಣವೂ ಸೇರಿದಂತೆ ಸುತ್ತಲಿನ ಕಕ್ಕೆರಾ, ನಾರಾಯಣಪೂರ, ಬಿಜ್ಜೂರ, ಲೊಟಗೇರಿ ಹಾಗೂ ಇತರೇ ಗ್ರಾಮದ ರೈತರು ತಾವು ಬೆಳೆದ ಅಲ್ಪ ಸ್ವಲ್ಪ ಸೂರ್ಯಕಾಂತಿ ಬೀಜವನ್ನು ಮಾರಾಟ ಮಾಡಲು ಬಂದಿದ್ದರು, ತಂದ ಸೂರ್ಯಕಾಂತಿ ಬೀಜದ ಚೀಲಗಳನ್ನು ಬಿಚ್ಚುವದರ ಮೂಲಕ ಆವರಣದಲ್ಲೇ ಟೆಂಡರ್‌ ಬೆಲೆ ಕಟ್ಟಲು ಅಲ್ಲಲ್ಲಿ ಸಂಗ್ರಹಿಸಿದ್ದರು, ಟೆಂಡರ್‌ ಸಮಯಕ್ಕೆ ಏಕಾ ಏಕಿ ಸುರಿದ ಮಳೆಯ ನೀರಿನಿಂದ ಕೊಚ್ಚಿ ಹೋಗಿ ಹರಿದಾಡಿವೆ.
ಪರದಾಡಿದ ರೈತರು : ಸುರಿದ ಮಳೆಯಿಂದ ನೀರು ಪಾಲಾದ ಸೂರ್ಯಕಾಂತಿ ಬೀಜಗಳ ಸಂಗ್ರಹದ ಗುಂಪುಗಳಿಗೆ ಮಳೆ ನೀರು ತಗಲದಂತೆ ಅಲ್ಲಲ್ಲಿ ಇದ್ದ ಗೋಣಿ ಚೀಲಗಳನ್ನು ಪಡೆದು ಹೊದಿಕೆ ಮಾಡುವಷ್ಟರಲ್ಲೇ ಅರ್ಧದಷ್ಟು ಬೀಜಗಳು ಹರಿದಾಡ ತೊಡಗಿದವು, ಇನ್ನೊಂದೆಡೆ ರೈತರು ಮಳೆಯನ್ನು ಲೆಖ್ಖೀಸದೇ ತಂದ ದಾಸ್ತಾನು ಕಾಪಾಡಿಕೊಳ್ಳಲು ಅಸಹಾಯಕರಾಗಿ ಸಂಕಷ್ಟಕ್ಕೆ ಸಿಲುಕಿದರು.
ಆಸರೆಯಾದ ವರ್ತಕರು: ಮಳೆ ಸುರಿಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಅಡತಿ ಅಂಗಡಿ ವರ್ತಕರು ಆವರಣದಲ್ಲೇ ಇದ್ದ ಬೀಜಗಳನ್ನು ಮಳೆಯಿಂದ ಒದ್ದೆಯಾಗದಂತೆ ತಮ್ಮಲ್ಲಿದ್ದಷ್ಟು ಪ್ಲಾಸ್ಟಿಕ್‌ ಕಾಗದಗಳನ್ನು ವಿತರಣೆ ಮಾಡಿದರೂ ಮಳೆಯ ಅರ್ಭಟಕ್ಕೆ ಅಡತಿ ಅಂಗಡಿ ವರ್ತಕರ ಸಹಾಯ ರೈತರಿಗೆ ಫಲ ನೀಡಲಿಲ್ಲ. ಪುನಃ ಟೆಂಡರ್‌: ಸ್ವಲ್ಪ ಹೊತ್ತಲ್ಲಿ ಟೆಂಡರ್‌ ಮೂಲಕ ರೈತರ ಮಾಲನ್ನು ಖರೀದಿಸುವ ಪ್ರಕ್ರೀಯೆ ಶುರುವಾಗುತ್ತಿದ್ದಂತೆಯೇ ಮಳೆಯಿಂದ ಸಂಪೂರ್ಣ ಒದ್ದೆಯಾದ ಸೂರ್ಯಕಾಂತಿ ಬೀಜಗಳು ಖರೀದಿಗೆ ಸೂಕ್ತವಲ್ಲ ಎಂಬ ನಿರ್ಣಯದ ಮೇರೆದ ಶುಕ್ರವಾರಕ್ಕೆ ಟೆಂಡರ್‌ ಮುಂದೂಡಲಾಯಿತು.

loading...