ಹಲವು‌ ದಶಕದಿಂದ ವಿದ್ಯುತ್ ವಂಚಿತ ಗೋಕಾಕದ ದನದ ಓಣಿ ಗ್ರಾಮ: ಅಶೋಕ ಪೂಜಾರಿ

0
418

ಕನ್ನಡಮ್ಮ ಸುದ್ದಿ- ಬೆಳಗಾವಿ: ಗೋಕಾಕ ಪಾಲ್ಸ್ ನಲ್ಲಿ ಮೊಟ್ಟ ಮೊದಲ ಬಾರಿಗೆ ವಿದ್ಯುತ್ ತಯಾರಿಸಿದೆ.ಆದರೆ ದೂರಂತವೆಂದರೆ ಗೋಕಾಕ ಮಿಲ್ ಹಾಗೂ ರಾಜಕೀಯ ಕುತಂತ್ರದಿಂದ ಧನದ ಓಣಿ ಎಂಬ‌ ಗ್ರಾಮವು ವಂಚಿತವಾಗಿದೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದರು.

ಅವರು ಶುಕ್ರವಾರದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಗೋಕಾಕದಲ್ಲಿರುವ ನೂಲಿನ ಮಿಲ್ ಶತಮಾನಗಳ ಇತಿಹಾಸ ಹೊಂದಿದೆ. ದೇಶದಲ್ಲಿ ಮೊದಲ ಬಾರಿಗೆ ವಿದ್ಯುತ್ ಇಲ್ಲೇ ಸ್ಥಾಪಿಸಲಾಗಿದೆ. ದೂರಂತವೆಂದರೆ ಕೇಂದ್ರ ರಾಜ್ಯ ಸರಕಾರಗಳು ಸಾಕಷ್ಟು ಹಣ ಇಂದು ಜನ ಜೀವನ ಅಭಿವೃದ್ಧಿಗೆ ನಿಡುತ್ತಿದ್ದರು. ಗೋಕಾಕ ಫಾಲ್ಸದ ಜನಗಳು ವಾಸಿಸುವ ‘ದನದ ಓಣಿಯ’ ಎಂಬ ಗ್ರಾನಕ್ಕೆ ಇನ್ನೂ ಸಹ ವಿದ್ಯುತ್ ದೊರೆತಿಲ್ಲ.
ಸುಮಾರು ೩೮೩ ಮನೆಗಳಿದ್ದು, ೪ ನೂರರಿಂದ ೫ನೂರ ಜನರು ವಾಸಮಾಡುತ್ತಿದ್ದಾರೆ. ದನಗಳನ್ನು ಹೆಚ್ಚು ಸಾಕಿಕೊಂಡಿದ್ದಾರೆ. ಆದರೆ ಈ ೩೮೩ ಕುಟುಂಬಗಳ ವಾಸದ ಪ್ರದೇಶದಲ್ಲಿ ವಿದ್ಯುತ್, ನೀರು, ರಸ್ತೆ ಸ್ವಾತಂತ್ರ ಸಿಕ್ಕು ಇಷ್ಟು ವರ್ಷವಾದರು ಸಹ ಇಲ್ಲಿಯವರೆಗೂ ನೀಡಿಲ್ಲ ಆತಂಕ ವ್ಯಕ್ತಪಡಿಸಿದರು.
ರಮೇಶ ಜಾರಕಿಹೊಳಿಯವರು ಇಲ್ಲಿ ಇಪ್ಪತ್ತು ವರ್ಷ ಶಾಸಕರಾದರು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿಲ್ಲ.
ಇದಕ್ಕೆಲ್ಲಾ ವಾಸವಾಗಿರುವ ಜನರು ಸರ್ಕಾರಿ ಜಾಗದಲ್ಲಿ ಕಳೆದ ನೂರ ವರ್ಷದಿಂದ ವಾಸವಾಗಿದ್ದು,ಈ ಪ್ರದೇಶವನ್ನು ತಮ್ಮಂತೆ ಮಾಡಿಕೊಳ್ಳುವ ಉದ್ದೇಶದಿಂದ ವಿದ್ಯುತ್ ನೀಡದಿರಬಹುದು ಎಂದು ಆರೋಪಿಸಿದ್ದಾರೆ.
ಪರಿಶಿಷ್ಟ ಜಾತಿಯ ಜನಾಂಗದವರು ಅಲ್ಲಿ ವಶವಾಗಿದ್ದು. ವಿದ್ಯುತ್ ಸಮಸ್ಯೆಯಿಂದ ಜನರು ಕತ್ತಲಲ್ಲೇ ಜೀವನ ಕಳೆಯುವಂತಾಗಿದೆ. ತಕ್ಷಣ ಸರಕಾರ ಪರಿಶಿಷ್ಠ ಜಾತಿಯ ಜನರಿಗೆ ನ್ಯಾಯ ಒದಗಿಸಿ,ಅಲ್ಲಿಯ ಜನರಿಗೆ ವಿದ್ಯುತ್ ಕಲ್ಪಿಸಿ ಕೊಡಬೇಕು. ಇಲ್ಲವಾದರೆ ಗೋಕಾಕ ದಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯವರೆ ಅಲ್ಲಿನ ಜನರೊಂದಿಗೆ ಜನ ಜಾಥಾ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ವಿರುಪಾಕ್ಷಿ ಯಲಿಗಾರ, ನಿಂಜನನಗಪ್ಪ ನಾಯಿಕ, ವಿಠ್ಠಲ ಗೋರನ್ನವರ, ಮಂಜು ಮರೆಣ್ಣವರ, ದೀಪಕ ರಾಯಣ್ಣವರ ಇತರರು ಉಪಸ್ಥಿತರಿದ್ದರು.

loading...