ನೆನಪಿನ ದೋಣಿ ಅನುಭವದ ಗಟ್ಟಿ ಕೃತಿ: ಡಾ.ರಾಜಶೇಖರ

0
21

ಗುಳೇದಗುಡ್ಡ: ಸಾಹಿತ್ಯದ ವಿದ್ಯಾರ್ಥಿ ಅಲ್ಲದ ಸಂಗಮೇಶ ಅವರು ತಮ್ಮ ಅನುಭವವನ್ನು ಬರವಣಿಗೆ ಮೂಲಕ ನೆನಪಿನ ದೋಣಿ ಕೃತಿಯಲ್ಲಿ ಅದ್ಭುತವಾಗಿ ದಾಖಲಿಸಿದ್ದಾರೆ. ಕೃತಿಯಲ್ಲಿನ ೧೮ ಲೇಖನಗಳೂ ವಿಶಿಷ್ಟ ಶಬ್ದ ಪ್ರಯೋಗ, ಗಟ್ಟಿ ಬರವಣೆಗೆ ಹೊಂದಿರುವ ಅಪರೂಪದ ಕೃತಿಯಾಗಿದೆ. ನೆನಪಿನ ದೋಣಿ ದಾಂಪತ್ಯ ಜೀವನದ ತುಮುಲ, ಬದುಕಿನ ಸಿಹಿಕಹಿ ತುಂಬಿದ ಕೃತಿಯಾಗಿದ್ದು, ಮತ್ತೆ ಮತ್ತೆ ಓದಬೇಕೆನಿಸುತ್ತದೆ ಎಂದು ಸಾಹಿತಿ ಡಾ. ರಾಜಶೇಖರ ಬಸುಪಟ್ಟದ ಹೇಳಿದರು.
ಅವರು ಇಲ್ಲಿನ ಮಿತ್ರ ಮಂಡಳಿ ವತಿಯಿಂದ ನಗರದ ಡಾ. ವಿ.ಎ. ಬೆನಕನಾಳÀ ಅವರ ಓದುಮನೆಯಲ್ಲಿ ಹಮ್ಮಿಕೊಂಡಿದ್ದ ಸಂಗಮೇಶ ಮಗೆಣ್ಣಿ ಅವರ ನೆನಪಿನ ದೋಣಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿಯ ಕುರಿತು ಮಾತನಾಡಿ, ಲೇಖಕ ಸಂಗಮೇಶ ತಮ್ಮ ಪತ್ನಿಯ ನೆನೆಪಿನ ಮೂಸೆಯಲ್ಲಿ ದಾಂಪತ್ಯ ಜೀವನ, ಸುಖ, ದುಃಖ, ಪೇಮ, ತ್ಯಾಗ, ನೋವುಗಳ ಅನಾವರಣ ಮಾಡಿದ್ದಾರೆ ಎಂದರು.
ಸಂಶೋಧಕ ಸಂಗಮೇಶ ಕಲ್ಯಾಣಿ ಮಾತನಾಡಿ, ಜೀವನ ಸಾಗಿಸಿ ತನ್ನ ಪಯಣ ಮುಗಿಸಿದಾಗ ಅನುಸಂಧಾನದ ಕ್ರಿಯೆ ಪೂರ್ಣ ಮುಗಿಯುತ್ತದೆ ಆದರೆ ಪಯಣ ಪೂರ್ವದಲ್ಲಿ ಅಸುನೀಗಿದರೆ ತನ್ನ ಬದುಕು ಶೂನ್ಯವಾಗುತ್ತದೆ. ಆಯುಷ್ಯ ಬದುಕಿನ ಪ್ರಮಾಣವಲ್ಲ, ಆಚಾರ, ನಡತೆ ಬದುಕಿನ ಪರಿಮಾಣ ಎಂಬುದನ್ನು ತೋರಿಸುತ್ತದೆ ಸಂಗಮೇಶ ಅವರ ನೆನೆಪಿನ ದೋಣಿ ಕೃತಿ.
ನೆನಪಿನ ದೋಣಿಯಲ್ಲಿ ಗಂಗವ್ವಳ ಜೀವನದ ಮಾತು, ಮೌನವೂ ಅನಾವರಣಗೊಂಡಿದೆ. ಲೇಖಕರು ಅಕ್ಷರ ಲೋಕದ ಅಂತಸತ್ವವನ್ನು ನೆನಪಿನ ದೋಣಿ ಕೃತಿಯಲ್ಲಿ ಹಾಕಿದ್ದು, ಓದಿದಷ್ಟು ಬಾರಿ ಹೊಸತನವನ್ನು ತೋರಿಸುತ್ತದೆ ಎಂದರು. ನೆನಪಿನ ದೋಣಿ ಕೃತಿಯನ್ನು ಮರಡಿ ಮಠದ ಶ್ರಿÃ ಅಭಿನವ ಕಾಡಸಿದ್ದೆÃಶ್ವರ ಶ್ರಿÃಗಳು ಬಿಡುಗಡೆ ಮಾಡಿದರು. ಲೇಖಕಿ ಸುಧಾ ಹಾಗೂ ಶಿವರುದ್ರಪ್ಪ ಬೆಕಿನಾಳ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಸಂಗಮೇಶ ಮೆಗಣ್ಣಿ, ಡಾ. ವಿ.ಎ. ಬೆನಕನಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರಿÃ ಶಿವಾನಂದ ಸ್ವಾಮಿಗಳು, ಮಲ್ಲಿಕಾರ್ಜುನ ರಾಜನಾಳ, ರಮೇಶ ಯಾನಮಶೆಟ್ಟಿ, ಪಾರ್ವತಿ ಬೆನಕನಾಳ, ಇಂದುಮತಿ, ನಾರಾಯಣಸಾ ಕಾವಡೆ, ಸುರೇಶ ಮಗೆಣ್ಣಿ, ಅನಿಲ್ ಮಗೆಣ್ಣಿ, ಅಶೋಕ ಮಗೆಣ್ಣಿ, ವೀರಸಂಗಪ್ಪ ಭಾವಿ, ಮಹಾದೇವ ಜಗತಾಪ, ಈರಣ್ಣ ಪಟ್ಟಣಶೆಟ್ಟಿ, ಚಂದ್ರಶೇಖರ ಕಾಳನ್ನವರ, ನೀಲಕಂಠಯ್ಯ ಸಿಂದಗಿಮಠ, ಪಾಂಡುರಂಗಸಾ ಕಾವಡೆ, ಪ್ರೊ.ವಿ.ಬಿ.ಯಲಬರ್ಗಿ, ಪ್ರೊÃ. ಎಸ್.ಎಸ್. ನಾಯನೇಗಲಿ, ಪ್ರೊÃ.ವಿ.ಎಂ. ಗಾಣಿಗೇರ, ಮತ್ತಿತರರು ಇದ್ದರು.

loading...