ನೆರೆಯಲ್ಲಿ ನೆರವಾದ ಆರಕ್ಷಕರಿಗೆ ಇಲಾಖೆಯಿಂದ ಪ್ರಶಂಸನಾ ಪತ್ರ

0
11

ನೆರೆಯಲ್ಲಿ ನೆರವಾದ ಆರಕ್ಷಕರಿಗೆ ಇಲಾಖೆಯಿಂದ ಪ್ರಶಂಸನಾ ಪತ್ರ

ಕನ್ನಡಮ್ಮ ಸುದ್ದಿ : ಸಂಕೇಶ್ವರ : ಕಳೆದ ಜುಲೈ -ಸಪ್ಟೆಂಬರ್ ನಲ್ಲಿ ಉತ್ತರ ಕರ್ನಾಟಕಕ್ಕೆ ಬಂದೊದಗಿದ್ದ ಬಾರಿ ಪ್ರಮಾಣದ ಪ್ರವಾಹದಲ್ಲಿ ತಮ್ಮ ಜೀವದ ಹಂಗು ತೊರೆದು ಸಂತ್ರಸ್ತರ ನೆರೆವಿಗೆ ಶ್ರಮಿಸಿದ ಪೋಲಿಸ್ ಇಲಾಖೆ ಸಿಬ್ಬಂದಿಗಳಿಗೆ ಇಲಾಖೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ ‌.

ಚಿಕ್ಕೋಡಿ ಉಪ ವಿಭಾಗದಲ್ಲಿ ಅತಿ ಹೆಚ್ಚು ಮಳೆಯಿಂದ ಪ್ರವಾಹ ಸಂಭವಿಸಿತ್ತು , ಈ ಸಂದರ್ಭದಲ್ಲಿ ಧೃತಿಗೆಡದೆ ಇಲಾಖೆಯ ಆದೇಶದಂತೆ ಸಂತ್ರಸ್ತರ ಹಾಗೂ ಜನ ಜಾನುವಾರಗಳ ಸುರಕ್ಷಿತವಾಗಿ ಸಾಗಿಸುವಲ್ಲಿ ಕರ್ತವ್ಯ ಪಾಲನೆ ಮಾಡಿದ ಪೋಲಿಸ್ ಸಿಬ್ಬಂದಿಗಳಿಗೆ ಇಲಾಖೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ . ಈ ಪೈಕಿ ಸಂಕೇಶ್ವರ ಪೊಲೀಸ್ ಠಾಣೆಯ ಸಿಬ್ಬಂದಿ ಆರ್ .ಹೆಚ್ ರಾಜಾಪೂರೆ ಅವರಿಗೆ ಪ್ರಶಂಸನಾ ಪತ್ರ ನೀಡಿದೆ .

ಪೋಲಿಸ್ ಸಿಬ್ಬಂದಿಗಳ ಕಾರ್ಯಕ್ಕೆ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಉತ್ತರ ವಲಯದ ಸುಮಾರು ೮೦೦ ಪೋಲಿಸ್ ಸಿಬ್ಬಂದಿಗಳಿಗೆ ಪ್ರಶಂಸೆ ಪತ್ರ ನೀಡಿದ್ದು , ಮೇಲಾಧಿಕಾರಿಗಳ ಪ್ರಶಂಸೆನೆಗೆ ಇಲಾಖೆ ಸಿಬ್ಬಂದಿಗಳು ಹರ್ಷ ವ್ಯಕ್ತ ಪಡೆಸಿದ್ದಾರೆ.

loading...