ನೇಕಾರರು ಸಂಘಟಿತವಾಗಿ ನ್ಯಾಯ ಪಡೆದುಕೊಳ್ಳಿ: ಕಿರಣಕುಮಾರ

0
48

ಕನ್ನಡಮ್ಮ ಸುದ್ದಿ-ಗುಳೇದಗುಡ್ಡ: ಸರ್ಕಾರದಿಂದ ನೇಕಾರರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಅರ್ಹ ನೇಕಾರರಿಗೆ ಕೊಡಿಸುವುದು, ನೇಕಾರರಿಗೆ ಅನ್ಯಯವಾದರೆ ಅವರಿಗೆ ನ್ಯಾಯ ಒದಗಿಸುವಲ್ಲಿ ಕರ್ನಾಟಕ ನೇಕಾರರ ರಕ್ಷಣಾ ವೇದಿಕೆಯ ಉದ್ದೇಶವಾಗಿದೆ. ನೇಕಾರರು ಸಂಘಟಿತರಾಗಿ ನ್ಯಾಯ ಪಡೆದುಕೊಳ್ಳುವಂತೆ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ನೇಕಾರ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕಿರಣಕುಮಾರ ಬಸುಪಟ್ಟದ ಹೇಳಿದರು.
ಅವರು ಇತ್ತೀಚೆಗೆ ನಗರದ ಮೂಕೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ಜಿಲ್ಲಾ ಘಟಕದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಎಲ್ಲ ಬಡ ನೇಕಾರರು ಮುಖ್ಯವಾಹಿನಿಗೆ ಬರುವಂತೆ ಸಂಘ ಬೆಂಬಲ ನೀಡುವುದು ಎಂದರು. ಪ್ರಧಾನಕಾರ್ಯದರ್ಶಿ ಸದಾನಂದ ಹುಲ್ಯಾಳ ಮಾತನಾಡಿದರು. ಚಂದ್ರಕಾಂತ ಶೇಖಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ನೇಕಾರರ ಮುಖಂಡರಾದ ನಗರ ಘಟಕದ ಅಧ್ಯಕ್ಷ ಶಂಕರ ಲಕ್ಕುಂಡಿ, ಶ್ರೀಕಾಂತ ಹುನಗುಂದ, ಶಿವಾನಾಂದ ಎಣ್ಣಿ, ಕುಪ್ಪಣ್ಣ ಗುರಂ, ಯಂಕಪ್ಪ ಯಲಗುಂಡಿ, ಶೇಖಣ್ಣ ಅರೂಟಗಿ, ಮಾರ್ಕಂಡರಪ್ಪ ದೇವರಡ್ಡಿ, ಅಡಿವೆಪ್ಪಾ ಯರಗಲ್ಲ, ಸಂಕಣ್ಣ ನರಾಲ, ಪುಲಕೇಶಿ ಧೂಪದ, ರಂಗನಾಥ ಶೇಬಿನಕಟ್ಟಿ, ಹನಮಂತ ಪಲಮಾರಿ, ನಾರಾಯಣ ಕಂಠಿಗೌಡ್ರ ಮತ್ತಿತರರು ಇದ್ದರು.

loading...